2023ನೇ ಸಾಲಿನಲ್ಲಿ ಐಪಿಎಲ್ ಗೆ ಒಟ್ಟಾರೆ 11,769 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಶೇ.66ರಷ್ಟು ಅಂದರೆ 6648 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಐಪಿಎಲ್ ವಾರ್ಷಿಕ ಲೆಕ್ಕಪತ್ರದಲ್ಲಿ ವಿವರಿಸಲಾಗಿದೆ.
ಐಪಿಎಲ್ ಟಿ-20 ಟೂರ್ನಿಯ ಆದಾಯದಿಂದ ದೊಡ್ಡ ಮೊತ್ತದ ಪಾಲು ಪಡೆದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಇನ್ನಷ್ಟು ಶ್ರೀಮಂತವಾಗಿದೆ. 2023ನೇ ಸಾಲಿನಲ್ಲಿ ಐಪಿಎಲ್ ನಿಂದ ಬಿಸಿಸಿಐಗೆ 5120 ಕೋಟಿ ರೂ. ಆದಾಯ ಗಳಿಸಿ ಹೊಸ ದಾಖಲೆ ಬರೆದಿದೆ.
2023ನೇ ಸಾಲಿನಲ್ಲಿ ತನ್ನ ಲಾಭಂಶದಲ್ಲಿ ಬಿಸಿಸಿಐಗೆ ಐಪಿಎಲ್ 5120 ಕೋಟಿ ರೂ. ನೀಡಿದೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಶೇ.116ರಷ್ಟು ಹೆಚ್ಚಳವಾಗಿದೆ. 2022ರಲ್ಲಿ ಬಿಸಿಸಿಐಗೆ 2367 ಕೋಟಿ ರೂ.ವನ್ನು ಐಪಿಎಲ್ ಪಾವತಿಸಿತ್ತು.
ಐಪಿಎಲ್ ಗೆ ಅತೀ ದೊಡ್ಡ ಆದಾಯದ ಮೂಲ ವಿವಿಧ ಪ್ರಾಯೋಜಕತ್ವಗಳಿಂದ ಆಗಿದೆ. ಐಪಿಎಲ್ ಪ್ರಾಯೋಜಕತ್ವವನ್ನು 2023-2027ವರೆಗಿನ ಅವಧಿ ವರೆಗೆ 48,390 ಕೋಟಿ ರೂ.ಗೆ ನೀಡಲಾಗಿದೆ. ಐಪಿಎಲ್ ಟಿವಿ ಪ್ರಸಾರ ಹಕ್ಕು ಮಾರಾಟ ಹಕ್ಕನ್ನು ಡಿಸ್ನಿಗೆ ನೀಡಲಾಗಿದ್ದು, 2027ರವರೆಗಿನ ಒಪ್ಪಂದದಿಂದ 23,575 ಕೋಟಿ ರೂ. ಆದಾಯ ಗಳಿಸಿದೆ.
ಡಿಜಿಟಲ್ ಮಾರಾಟ ಹಕ್ಕು ಜಿಯೋಗೆ 23,758 ಕೋಟಿ ರೂ.ಗೆ ನೀಡಲಾಗಿದ್ದು, ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು 2500 ಕೋಟಿ ರೂ.ಗೆ ಟಾಟಾಗೆ ನೀಡಲಾಗಿದೆ.
ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಿಲ್ಲ. ದುಬೈನಂಥ ತಟಸ್ಥ ಸ್ಥಳದಲ್ಲಿ ಪಂದ್ಯ ಆಡುವ ಬಿಸಿಸಿಐ ಪ್ರಸ್ತಾಪ ಇನ್ನೂ ಅಂತಿಮಗೊಂಡಿಲ್ಲ. ಇದರಿಂದ ಐಸಿಸಿ ಪಾಲಿನಲ್ಲಿ ಕಡಿಮೆ ಆಗುವ ಸಾಧ್ಯತೆ ಇದ್ದು, ಬಿಸಿಸಿಐ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.