ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ವೃದ್ದೆ ಸ್ಥಳದಲ್ಲೇ ಸಾವು.

ಹಾವೇರಿ -ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಓರ್ವ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಜನರು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದಲ್ಲಿ ನಡೆದಿದೆ

ಮೃತಳನ್ನು ದಾವಣಗೆರೆ ಜಿಲ್ಲೆ ಹರಿಹರದ ಗಾಂಧಿನಗರ ನಿವಾಸಿ 70 ವರ್ಷ ವಯಸ್ಸಿನ ಆಶಾ ಬಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಾಡುವ ವಲಸಿಗ ಫಿಲಂಗಳು -1: ‘ಕಾಣದ ನಾಡಿನತ್ತ’ ಮತ್ತು ‘ಸುಲೈಮಾನ್ ಕತೆ’

ಕಾರಿನಲ್ಲಿದ್ದ ಆರು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾನಗಲ್ ಕಡೆಯಿಂದ ಹಾವೇರಿ ಬರುತ್ತಿದ್ದ ಮತ್ತು ಹಾವೇರಿ ಕಡೆಯಿಂದ ಹಾನಗಲ್ ನತ್ತ ತೆರಳುತ್ತಿದ್ದ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಈ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜನಸಂಖ್ಯಾ ಹೆಚ್ಚಳವೂ ಪಿತೃಪ್ರಧಾನ ಮೌಲ್ಯಗಳೂ

 

Donate Janashakthi Media

Leave a Reply

Your email address will not be published. Required fields are marked *