ಸರ್ಕಾರದಿಂದ ವೈದ್ಯಕೀಯ ನೆರವು ಪಡೆಯಲು ಜನಸಾಮಾನ್ಯರು ಅಧಿಕಾರಿಗಳಿಂದ ಜನಪ್ರತಿನಿಧಿಗಳ ನಂತರ ಅಲೆದಾಡಿ ಸುಸ್ತಾಗುತ್ತಾರೆಯೇ ಹೊರತು ನೆರವು ಸಿಗುವುದು ಕಷ್ಟ. ನೆರವು ಸಿಕ್ಕರೂ ಅದು ಪುಡಿಗಾಸು ಸಿಗುವಷ್ಟರಲ್ಲಿ ಚಪ್ಪಲಿ ಸವೆದಿರುವುದು ಮಾತ್ರವಲ್ಲ, ಅಲೆದಾಟಕ್ಕಾಗಿಯೇ ಅಷ್ಟು ಖರ್ಚು ಮಾಡಬೇಕಾಗುತ್ತದೆ.
ಆದರೆ ಜನಪ್ರತಿನಿಧಿಗಳು ಇದೇ ವೈದ್ಯಕೀಯ ವೆಚ್ಚವನ್ನು ಯಾವುದೇ ಖರ್ಚಿಲ್ಲದೇ ಲಕ್ಷಾಂತರ ರೂಪಾಯಿ ಜೇಬಿಗಳಿಸುತ್ತಿರುವ ಆಘಾತಕಾರಿ ವರದಿ ಆರ್ ಟಿಐನಲ್ಲಿ ಬಹಿರಂಗವಾಗಿದೆ.
ಹೌದು, 2023ರ ಮೇ 1 ರಿಂದ 2024ರ ಜುಲೈವರೆಗೆ ವಿಧಾನ ಪರಿಷತ್ ಸದಸ್ಯರು ಅನಾರೋಗ್ಯದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ವೈದ್ಯಕೀಯ ವೆಚ್ಚಕ್ಕಾಗಿ ಸರ್ಕಾರದಿಂದ ಪಡೆದಿದ್ದಾರೆ.
ನೈಜ ಹೋರಾಟಗಾರರ ವೇದಿಕೆ ಮುಖಂಡ ಎಚ್.ಎಂ. ವೆಂಕಟೇಶ್ ಆರ್ಟಿಐನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದವರೂ ಸಹ ತಮ್ಮ ಆರೋಗ್ಯಕ್ಕಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣ ಕ್ಲೈಮ್ ಮಾಡಿಕೊಂಡಿದ್ದಾರೆ.
ಬಿಜೆಪಿ ವಿಧಾನಪರಿಷತ್ ಸದಸ್ಯ ಭಾರತಿ ಶೆಟ್ಟಿ ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ 48.70 ಲಕ್ಷ ರೂ. ಹಣ ಖರ್ಚಿಗಾಗಿ ಸರ್ಕಾರದಿಂದ ನೆರವು ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಮಾಜಿ ಸಚಿವ ಸಿಪಿ ಯೋಗೇಶ್ವರ್ 39.64 ಲಕ್ಷ ರೂ. ಖರ್ಚು ಮಾಡಿ ಎರಡನೇ ಸ್ಥಾನದಲಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ 17.03 ಲಕ್ಷ ರೂ. ಖರ್ಚು ಮಾಡಿದ್ದಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಂಡು ಮೂರನೇ ಸ್ಥಾನದಲ್ಲಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು 7.26 ಲಕ್ಷ ರೂಪಾಯಿ ಸರ್ಕಾರದ ಹಣವನ್ನು ಖರ್ಚು ಮಾಡಿದ್ದಾರೆ. ಹಿರಿಯ ಶಾಸಕ ಲಕ್ಷ್ಮಣ್ ಸವದಿ ಆರೋಗ್ಯಕ್ಕಾಗಿ 2.41 ಲಕ್ಷ ರೂ. ಹಣವನ್ನು ಕ್ಲೈಮ್ ಮಾಡಿದ್ದಾರೆ. ಜೆಡಿಎಸ್ ಸದಸ್ಯ ಟಿ ಎ ಶರವಣ ಕೂಡ 2.14 ರೂಪಾಯಿ ಹಣ ಸರ್ಕಾರದಿಂದ ಪಡೆದುಕೊಂಡಿದ್ದಾರೆ.