- ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ
- ಇಂದು ಜಗತ್ತಿನಾದ್ಯಂತ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾ
ಬೆಂಗಳೂರು : ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ವಿಕ್ರಾಂತ್ ರೋಣ’ ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 3200 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿದೆ. ಎಲ್ಲೆಡೆಯಿಂದ ಭರ್ಜರಿ ರಿಸ್ಪಾನ್ಸ್ ಬರುತ್ತಿದೆ. ಹಾಗಾದರೆ ಕಿಚ್ಚ ಸುದೀಪ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಹಿಂದಿಯಲ್ಲಿ ಈಗಾಗಲೇ 70 ಲಕ್ಷ ರೂಪಾಯಿಯಷ್ಟು ಟಿಕೆಟ್ ಸೋಲ್ಡ್‌ಔಟ್, ಕನ್ನಡದ ಬಹುತೇಕ ಶೋಗಳು ಹೌಸ್‌ಫುಲ್ ಆಗಿವೆ.
ಹಿಂದಿಯಲ್ಲಿ ಸಲ್ಮಾನ್ ಖಾನ್ ವಿಕ್ರಾಂತ್ ರೋಣ ಸಿನಿಮಾ ವಿತರಣೆ ಹಕ್ಕು ಪಡೆದಿದ್ದಾರೆ. ತೆಲುಗು, ತಮಿಳು ಭಾಷೆಯಲ್ಲಿಯೂ ಕೂಡ ಈ ಚಿತ್ರ ಉತ್ತಮ ಓಪನಿಂಗ್ ಪಡೆದಿದೆ. ಸಿನಿಮಾದ ಮೊದಲ ವಿಮರ್ಶೆ ಬರುತ್ತಿದ್ದಂತೆ ಕೇರಳದಲ್ಲಿ ಶೋಗಳು ಬುಕ್ ಆಗಲು ಆರಂಭಿಸಿವೆ.
ಎಲ್ಲೆಲ್ಲಿ? ಎಷ್ಟೆಷ್ಟು? ಚಿತ್ರಮಂದಿರಗಳು
ಕರ್ನಾಟಕದಲ್ಲಿ – 400
ಆಂಧ್ರ ಮತ್ತು ತೆಲಂಗಾಣ – 450
ಉತ್ತರ ಭಾರತ – 900
ಭಾರತದಲ್ಲಿ ಒಟ್ಟಾರೆ – 2600
ಗಲ್ಪ್ ರಾಷ್ಟ್ರಗಳಲ್ಲಿ – 220
ಜಗತ್ತಿನಾದ್ಯಂತ – 3500
ವಿಕ್ರಾಂತ್ ರೋಣ ಮೊದಲ ದಿನ ಭಾರತದಲ್ಲಿ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕಿಚ್ಚ ಸುದೀಪ್ ಸಿನಿಮಾಗೆ ಫ್ಯಾಮಿಲಿ ವೀಕ್ಷಕರ ಸಂಖ್ಯೆ ಸಹ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ನೋಡುವವರು ಹೆಚ್ಚಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿ ಜಾಕ್ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ.
ಬಾಲಿವುಡ್, ಟಾಲಿವುಡ್ ಸೇರಿದಂತೆ ಭಾರತ ಸಿನಿರಂಗದ ಖ್ಯಾತನಾಮರು ವಿಕ್ರಾಂತ್ ರೋಣನಿಗೆ ಸಾಥ್ ನೀಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್ ಡಿಕೋಸ್ಟ ಉರ್ಫ್ ಗಡಂಗ್ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಸದ್ಯ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.