ಆರ್.ರಾಮಕೃಷ್ಣ
ಸಂಪುಟ – 06, ಸಂಚಿಕೆ 31, ಜುಲೈ 29, 2012
ಒಂದೂರಿನಲ್ಲಿ ಒಂದು ಅಪಾಟರ್್ಮೆಂಟ್. ಅಲ್ಲಿ ಒಬ್ಬಳು ಹುಡುಗಿ, ಒಬ್ಬ ಹುಡುಗ ಇರುತ್ತಾರೆ. ಅವರು ಪರಸ್ಪರ ಪ್ರೀತಿಸುತ್ತಿರುತ್ತಾರೆ. ಅವರು ಸಿನಿಮಾ ನಾಯಕಿ ಮತ್ತು ನಾಯಕ. ಎಂದಿನಂತೆ ಇಲ್ಲೊಬ್ಬ ಖಳ ನಾಯಕ. ಅವನೊಬ್ಬ ಹೆಣ್ಣು ಬಾಕ. ಅವನ ಕಣ್ಣು ಹುಡುಗಿಯ ಮೇಲೆ. ಖಳ ಹುಡುಗಿಯ ಪ್ರಿಯತಮನನ್ನು ಬಡಿದು ಕುತ್ತಿಗೆ ತುಳಿದು ಕೊಲ್ಲುತ್ತಾನೆ.
ಮುಂದೆ ಹುಡುಗಿಗೆ ಖಳನ ಕಾಟ ಹೆಚ್ಚುತ್ತದೆ. ಅವನು ಹುಡುಗಿಯ ಮೈ ಮೇಲೆ ಕೈ ಹಾಕುತ್ತಾನೆ…. ಅವನು ಬಯಸಿದ ಯಾರನ್ನೂ ಹಾಗೇ ಬಿಡುವವನಲ್ಲ. ಅದರಲ್ಲೂ ತನ್ನನ್ನು ತಿರಸ್ಕರಿಸಿದ ಹುಡುಗಿಯನ್ನು ಅವನು ಬಿಡುವವನೇ ಅಲ್ಲ. ಆದರೆ ಅದೇನೋ ಇಂಥಾ ಪ್ರಸಂಗದ ನಿಣರ್ಾಯಕ ಕ್ಷಣದಲ್ಲಿ ಆತನ ಕಿವಿಯೊಳಗೋ ಅಥವಾ ಮೂಗಿನ ಹೊಳ್ಳೆಯೊಳಗೋ ಸೇರಿಕೊಂಡಿರುವ ನೊಣವೊಂದು ಖಳನ ಯೋಜನೆಯನ್ನೆಲ್ಲಾ ಹಾಳು ಮಾಡಿ ಬಿಡುತ್ತಿದೆೆ. ಅರರೆ… ಏನಿದು ? ಖಳನಿಗೆ ಆಶ್ಚರ್ಯ !!
….ಎಸ್. ನಿಮ್ಮ ಊಹೆ ಸರಿ. ಪ್ರೇಮಿ ಸತ್ತು ನೊಣವಾಗಿ ಹುಟ್ಟಿದ್ದಾನೆ. ಆಮೇಲೂ ಸಹ ಪ್ರಿಯತಮೆಯ ರಕ್ಷಣೆಯ `ಕರ್ತವ್ಯ’ ಮರೆತಿಲ್ಲ. ಇದು ಕತೆಯ ಅರ್ಧ ಭಾಗ.
ದೊಡ್ಡ ಬಿಸಿನೆಸ್ ಮನ್ ಆಗಿರುವ ಖಳ ನೊಣದ ಕಾಟದಿಂದ ತಪ್ಪಿಸಿಕೊಳ್ಳಲು ಏನೇನು ತಂತ್ರ ಮಾಡುತ್ತಾನೆ, ಪಾಡು ಪಡುತ್ತಾನೆ. ಅದರಲ್ಲಿ ಹೇಗೆ ವಿಫಲನಾಗುತ್ತಾನೆ. ನೊಣ ಹೇಗೆ ಅವನನ್ನು, ಅವನ ವೈಭವೋಪೇತ ಕಛೇರಿಯನ್ನು ಸುಟ್ಟು ಭಸ್ಮ ಮಾಡುತ್ತದೆ ಎಂಬುದು ಚಿತ್ರದ ಇನ್ನರ್ಧ ಭಾಗ.
ಮಾಡಿದರೆ, ಪುಟಾಣಿ ಶಾಲಾ ಮಕ್ಕಳಿಗೆ ಅರ್ಧ ಗಂಟೆಯ ಕಾಟರ್ೂನ್ ಸಿನಿಮಾ ಮಾಡಬಹುದಾದ ಕತೆಯೊಂದನ್ನು ಹೀಗೆ ಸುದೀಪ್(ವಿಲನ್), ನಾನಿ(ನಾಯಕ), ಸಮಂತ( ನಾಯಕಿ)ರಂತಹ ಜೀವಂತ ನಟರನ್ನು ಹಾಕಿಕೊಂಡು ಎರಡೂವರೆ ಗಂಟೆ ಎಳೆದು, ಅಪಾರ ಆಸ್ತಿ ಪಾಸ್ತಿ ಸುಟ್ಟು ಭಸ್ಮ ಮಾಡಿ, ಇಂಥದ್ದೊಂದು ಸಿನಿಮಾ ಮಾಡಬೇಕಾ ? ಅಂತ ಪ್ರಶ್ನೆ ಕೇಳಬಾರದು. ಏಕೆಂದರೆ ಸಿನಿಮಾ ಥಿಯೇಟರ್ ಮುಂದೆ ಕಾಲೇಜ್ಗೆ ಬಂಕ್ ಹಾಕಿ ಬಂದ ಕಾಲೇಜು ಹುಡುಗ, ಹುಡುಗಿಯರ ಹಿಂಡು ಹಿಂಡು…. ಟಿಕೆಟ್ ತೆಗೆದುಕೊಳ್ಳಲು ಆಗುತ್ತಿರುವ ನೂಕು ನುಗ್ಗಲು, ಥಿಯೇಟರ್ ಒಳಗೆ ಶಿಳ್ಳೆ ಕೇಕೇಗಳು ನೀವು ಈ ಪ್ರಶ್ನೆ ಎತ್ತಲು ಬಿಡುವುದಿಲ್ಲ.
ಗ್ರಾಫಿಕ್ ಮೂಲಕ ಸೃಷ್ಟಿಸಲಾಗಿರುವ ನೊಣ ಇಲ್ಲಿ ಒಂದು ಮುಖ್ಯ ಪಾತ್ರ. ಹುಡುಗಿ ಒಮ್ಮೆ ಬೂತ ಗನ್ನಡಿಯ ಮೂಲಕ ನೊಣವನ್ನು ನೋಡಿದಾಗ ನೊಣ …ನಾನು ನಿನ್ನ ಪ್ರಿಯತಮ ….ಹಳೇ ಜನ್ಮದಲ್ಲಿ ನಾನು ಅಪಘಾತದಲ್ಲಿ ಸಾಯಲಿಲ್ಲ…. ನನ್ನನ್ನು ಕೊಲ್ಲಲಾಯಿತು…ಎಂದು ತನ್ನ ಕೈ ಸನ್ನೆಯ ಮೂಲಕ ಹುಡುಗಿಗೆ ಮನವರಿಕೆ ಮಾಡಿಕೊಡುವುದು…`ಯುವ ಪ್ರೇಮಿ’ಗಳು ಒಂದಾಗಿ ಹೊರಗೆಲ್ಲಾ ಸುತ್ತುವುದು, ಆ ಮೇಲೆ ಈ ಪ್ರೇಮಿಗಳು ಹೋಟೆಲ್ಗೆ ಹೋಗಿ ಎರಡು ಕಪ್ ಕಾಫಿ ಆರ್ಡರ್ ಮಾಡಿ, ಹುಡುಗಿ ತಾನು ಒಂದು ಕಪ್ ಕುಡಿಯುವುದು, ಇನ್ನೊಂದು ಕಪ್ ಕಾಫಿಯನ್ನು ಸಾಸರ್ಗೆ ಹಾಕಿ `ಪ್ರಿಯತಮ’ನಿಗೆ ಕುಡಿಸುವುದು ಮುಂತಾದ `ಮನೋಗ್ನ’ ದೃಶ್ಯಗಳನ್ನು ನೋಡಬಹುದು.
ನೊಣ ಮೊಟ್ಟೆಯೊಡೆದು ಹೊರ ಬರುವುದು, ಕಾರು, ಜೀಪು, ಬಸ್ ಕೆಳಗೆ ತೂರಿ, ಹಾರಿ ಹೊರಬರುವುದು, ಕಿಟಕಿ, ಪೈಪು ಕಿಂಡಿಯೊಳಗೆ….ಮುಂತಾಗಿ ಇರುಕಿನ ಜಾಗದೊಳಗೆ ಹೋಗಿ ಹೊರಬರುವುದು…ನೊಣ ಹೋದಲ್ಲೆಲ್ಲಾ ನಮ್ಮ ಕಣ್ಣ ಕ್ಯಾಮರಾವೇ ಹಿಂಬಾಲಿಸಿದಂತೆ ಕಾಣಿಸಲು ಶ್ರಮಿಸಿರುವ ತಾಂತ್ರಿಕತೆ ಹಲವರಿಗೆ ವಿಶೇಷ ಆಕರ್ಷಣೆ. ಇಂಥಾ ಕಡೆ ಒಂದಷ್ಟು ಕ್ಯಾಮರಾ ಚಮತ್ಕಾರ, ಗ್ರಾಫಿಕ್ ಕೈಚಳಕಗಳನ್ನು ನೋಡಿ ಖುಷಿಪಡುವವರು ಪಡಬಹುದು.
ಚಿತ್ರದಲ್ಲಿ ಕಾಣುವ ಮನೆ, ಕಚೇರಿಗಳು, ವಾಹನಗಳು ಎಲ್ಲವೂ `ಅತ್ಯಾಧುನಿಕ’. ಥಳಥಳಿಸುತ್ತವೆ. ಆದರೆ ಕತೆಯ ಹೂರಣ ? ಸ್ಕ್ಯಾಚ್ ವಿಸ್ಕಿ ಬಾಟಲಿಯೊಳಗೆ ಹಳೇ ಹೆಂಡ ತುಂಬಿಕೊಟ್ಟಂತೆ, ಅದೇ `ಪುನರ್ ಜನ್ಮ’ದ ಹಳಸಲು ಸರಕು. ಹುಡುಗಿ ತನ್ನನ್ನು ಕಾಪಾಡಿಕೊಳ್ಳಲು ಸ್ನೇಹಿತರೋ, ತಂದೆ ತಾಯಿಗಳದ್ದೋ, ಬಂಧುಗಳದ್ದೋ, ಪೋಲೀಸರದ್ದೋ ಸಹಾಯ ಪಡೆದುಕೊಂಡರೆ ಅಂತಹ ಕತೆಯಲ್ಲಿ ಏನು ಸ್ವಾರಸ್ಯ ಇರಲು ಸಾಧ್ಯ ಅಲ್ಲವೇ ?
ಅಂದ ಹಾಗೆ `ಈಗ’ ಅಂದರೆ ತೆಲುಗಿನಲ್ಲಿ `ನೊಣ’ ಅಂತ. ಇದು ತೆಲುಗು ಸಿನಿಮಾ. ಕನ್ನಡದ ಜನಪ್ರಿಯ ನಟ ಸುದೀಪ್ ನಾಯಕ. ಅವರ ಅಭಿನಯ ಕೊಂಚ ಸುಧಾರಿಸಿರುವುದಕ್ಕೆ ಇಲ್ಲಿ ಸಾಕ್ಷಿ ಇದೆ. ನಾಯಕಿ. ಕಿವಿಯ ತಮಟೆ ಹರಿದು ಹೋಗುವಂತಹ `ಸೌಂಡ್ ಎಫೆಕ್ಟ್’ ಬಗೆಗೆ ಸಿನಿಮಾ ಥಿಯೇಟರ್ ಮಾಲಿಕರನ್ನು ಹೊಣೆ ಮಾಡಬೇಕೋ ಅಥವಾ ಸಿನಿಮಾ ನಿಮರ್ಾಪಕ ರಾಜಮೌಳಿ ಅವರನ್ನೋ ಗೊತ್ತಾಗಲಿಲ್ಲ.
0