ಅವಿರೋಧ ಆಯ್ಕೆಗೆ 1 ಕೋಟಿ ರೂ ಆಫರ್ ನೀಡಿದ ಕೆಕೆಆರ್‌ಡಿಬಿ ಅಧ್ಯಕ್ಷ

ಪಾಟೀಲ್ ಆಫರ್ ಗೆ ಸಾರ್ವಜನಿಕರ ವಿರೋಧ

ಕಲಬುರ್ಗಿ :  ಗ್ರಾಮ ಪಂಚಾಯತ್​​ನ ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಗ್ರಾಮ ಪಂಚಾಯತ್​​ಗಳಿಗೆ ವರ್ಷಕ್ಕೆ 20 ಲಕ್ಷದಂತೆ ಐದು ವರ್ಷಗಳಲ್ಲಿ ಒಂದು ಕೋಟಿ ಹೆಚ್ಚುವರಿ ಅನುದಾನ ನೀಡಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಘೋಷಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಚುನಾವಣೆಯಿಂದ ಗ್ರಾಮಗಳಲ್ಲಿ ಉಂಟಾಗುವ ಅಶಾಂತಿ, ಚುನಾವಣಾ ಆಯೋಗದ ದುಂದುವೆಚ್ಚ ತಪ್ಪಿಸಲು ಮತ್ತು ಯುವ ಸಮುದಾಯಕ್ಕೆ ಮಾದರಿಯಾಗಲು ಈ ಯೋಜನೆ ಘೋಷಣೆ ಮಾಡಲಾಗಿದೆ ಎಂದು ದತ್ತಾತ್ರೇಯ್ ಪಾಟೀಲ್ ತಿಳಿಸಿದ್ದಾರೆ.

ದತ್ತಾತ್ರೇಯ ಪಾಟೀಲ್ ಕೆಕೆಆರ್ಡಿಬಿ ಅಧ್ಯಕ್ಷ

ಶಾಂತಿ ಸ್ನೇಹದಿಂದ ಅವಿರೋಧ ಆಯ್ಕೆ ಮಾಡಿ ಇತರರಿಗೆ ಮಾದರಿಯಾಗಲಿ ಎನ್ನುವ ಕಾರಣಕ್ಕೆ ನಾವು ಈ ರೀತಿ ಮಾಡುತ್ತಿದ್ದೇವೆ ಅಂತ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಸೇರಿ 6 ಜಿಲ್ಲೆಯ 1,400 ಗ್ರಾಮ ಪಂಚಾಯತ್​​ಗೆ ಕೆಕೆಆರ್‌ಡಿಬಿ ಈ  ವಿಶೇಷ ಅನುದಾನ ಅನ್ವಯವಾಗಲಿದೆ.

ಶಬ್ಬೀರ್ ಜಾಲಹಳ್ಳಿ ಕೆ.ಪಿಆರ್.ಎಸ್. ಮುಖಂಡ

ದತ್ತಾತ್ರೇಯ್  ಪಾಟೀಲ್ ರವರ ಈ ನಡೆಗೆ ಪರ ವಿರೋಧದ ಚರ್ಚೆಗಳು ನಡೆದಿವೆ. ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೆ ಅದನ್ನು ದುರುಪಯೋಗ ಮಾಡಿಕೊಂಡಿದ್ದೆ ಹೆಚ್ಚು. ಈ ಬಾರಿ ಬಜೆಟ್ ಘೊಷಿಸಿದ್ದ 1000 ಕೋಟಿ ರೂ ನಲ್ಲಿ  1 ರೂ  ಕೂಡಾ  ಬಂದಿಲ್ಲ  ಎಂದು ರೈತ ಮುಖಂಡ ಶಬ್ಬೀರ್ ಆರೋಪಿಸಿದ್ದಾರೆ. ಈಗಾಗಲೆ ಹಣ ಹರಾಜಿನ ಮೂಲಕ ಸದಸ್ಯ ಸ್ಥಾನಗಳನ್ನು ಮಾರಾಟ ಮಾಡಲಾಗುತ್ತಿದೆ.  ಇದು ಎಲ್ಲಾ ಗ್ರಾ.ಪಂ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹುನ್ನಾರವೇ ಹೊರತು ಯಾವ ಅನುದಾನವನ್ನು ಕೊಡುವ ಮನಸ್ಸು ಅವರಿಗಿಲ್ಲ. ಈ  ಬಾಗದ ರಾಜಕಾರಣಿಗಳು 371 (ಜೆ) ಕಲಂ ಹೆಸರಲ್ಲಿ ಮಾಡಿಕೊಂಡ ರಾಜಕೀಯ ಲಾಭಗಳು ಸಾಕಷ್ಟಿವೆ. ಅವರಿಗೆ ಕ್ಷೇತ್ರದ ಅಭಿವೃದ್ಧಿಗಿಂತ  ಅಧಿಕಾರ ಮುಖ್ಯವಾಗಿದೆ. ಇದು ಅಧಿಕಾರ ಪಡೆಯಲು ಮಾಡಿರುವ ಗಿಮಿಕ್ ಎಂದು ಶಬ್ಬೀರ್ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *