ಜೆರುಸಲೇಂ : ಜೆನಿನ್ ನಗರದಲ್ಲಿ ಇಸ್ರೇಲಿ ದಾಳಿಗಳನ್ನ ವರದಿ ಮಾಡಲು ತೆರಳಿದ್ದ ಅಲ್ ಜಝೀರಾ ನೆಟ್ ವರ್ಕ್‌ನ ಪತ್ರಕರ್ತೆಯು ಇಸ್ರೇಲಿ ಸೇನೆಯ ಗುಂಡಿನದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಪ್ಯಾಲಿಸ್ತೇನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಲ್ ಜಝೀರಾ ನೆಟ್ ವರ್ಕ್‌ನ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರು ಬುಧವಾರ ಜೆನಿನ್ ನಗರದಲ್ಲಿ ನಡೆಯುತ್ತಿದ್ದಇಸ್ರೇಲಿ ದಾಳಿ ನಡೆಯುವುದನ್ನ ವರದಿ ಮಾಡುವ ಸಂದರ್ಭದಲ್ಲಿ ಗುಂಡುಬಿದ್ದಿದ್ದು ಅಬು ಅಕ್ಲೆಹ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇವರ ಜೊತೆ ಅಲ್-ಕುದ್ಸ್ ಪ್ಯಾಲಿಸ್ತೇನ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಗಾಯಗೊಂಡಿದ್ದು ಇವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರಗೆ ದಾಖಲುಮಾಡಲಾಗಿದೆ ಎಂದು ಪ್ಯಾಲಿಸ್ತೇನ್ ಆರೋಗ್ಯ ಸಚಿವಾಲಯ ಮತ್ತು ಅಲ್ ಜಝೀರಾ ಪತ್ರಕರ್ತರು ತಿಳಿಸಿದ್ದಾರೆ.
ಆದರೆ ಅಬು ಅಕ್ಲೆಹ್ ಅವರ ಸಾವಿನಸಂಗತಿಗಳು ಅಷ್ಟು ಸ್ಪಷ್ಟವಾಗಿ ಕಾಣದೆ ಇದ್ದರು , ಈ ದಾಳಿಯು ಸಡೆಯುತ್ತಿರು ಸಂದರ್ಭದಲ್ಲಿನ ವೀಡಿಯೊಗಳಲ್ಲಿ ಕಂಡುಬಂದಿರುವ ದೃಷ್ಯಾವಳಿಗಳನ್ನ ನೋಡುವುದಾದರೆ ಆಕೆಯ ತಲೆಗೆ ಗುಂಡುಬಿದ್ದಿರುವುದಾಗಿ ಕಂಡುಬಂದಿದ್ದು,ಇಸ್ರೇಲಿ ಸೇನೆಯ ಗುಂಡಿನದಾಳಿಗೆ ಅಲ್ ಜಝೀರಾ ಪತ್ರಕರ್ತೆ ಅಬು ಅಕ್ಲೆಹ್ ಸಾವನ್ನಪ್ಪಿದ್ದಾರೆ ಎಂದು ಅಲ್ ಜಝೀರಾದ ನಿದಾ ಇಬ್ರಾಹಿಂ ಹೇಳಿದ್ದಾರೆ.