ಅಭಿಮಾನಿಗಳ ಬಳಗಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಹ್ಯಾಟ್ರಿಕ್‌ ಹೀರೋ

ಬೆಂಗಳೂರು : ಶಿವರಾತ್ರಿಗೆ ಶಿವಣ್ಣ ತಮ್ಮ ಅಭಿಮಾನಿಗಳ ಬಳಗಕ್ಕೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ.  ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ತಮ್ಮ125ನೇ ಸಿನಿಮಾ ಅನೌನ್ಸ್‌ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಶಿವರಾಜ್‌ ಕುಮಾರ್‌ ತಮ್ಮ 125 ನೇ ಸಿನಿಮಾಗೆ  ʼವೇದʼ ಎಂದು ಟೈಟಲ್‌ ಇಡಲಾಗಿದೆ. ಮೊದಲ ಪೋಸ್ಟರ್‌ ನಲ್ಲಿ ಖಡಕ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ಕರುನಾಡು ಚಕ್ರವರ್ತಿಗೆ ಅಭಿಮಾನಿಗಳ ಬಳಗಕ್ಕೆ ಹುಚ್ಚೆಬಿಸಿದೆ.

ಮಹಾಶಿವರಾತ್ರಿಯಂದು ತಮ್ಮ 125 ನೇ ಸಿನಿಮಾ ಕುರಿತು ಶಿವಣ್ಣ ನಿನ್ನ ತಮ್ಮ ಫೇಸ್‌ ಬುಕ್‌ ನಲ್ಲಿ ವಿಡೀಯೂ ಮೂಲಕ ತಮ್ಮ ಹೊಸ ನಿಸಿಮಾ ಬಗ್ಗೆ ಸುಳಿವು ನೀಡಿದ್ದು, ಅದರಂತೆಯ ಇಂದು ತಮ್ಮ 125ನೇ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಂದನವನದಲ್ಲಿ ನೂರು ಸಿನಿಮಾಗಳನ್ನು ಪೂರೈಸಿ 125ನೇ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ಹೊಸ ಸಿನಿಮಾಕ್ಕೆ ಬಲು ಕುತುಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹ್ಯಾಟ್ರಿಕ್‌ ಹೀರೋ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನು ಓದಿ : ತೆರೆಯ ಮೇಲೆ ರಾರಾಜಿಸುತ್ತಿದೆ ರಾಬರ್ಟ್

ಇಂದು ಪೋಸ್ಟರ್ ರಿಲೀಸ್‌ ಆಗಿದ್ದು, ಮೊದಲು ಪೋಸ್ಟರ್ ನಲ್ಲಿಯೇ ಬಿಳಿ ಗಡ್ಡ ಹೋತ್ತು ಖಡಕ್‌ ಲುಕ್‌ ನಲ್ಲಿ  ಮಿಂಚಿರುವ ಹ್ಯಾಟ್ರಿಕ್‌ ಹೀರೋ ಹೊಸ ಲುಂಕ್‌ ಗೆ ಮತ್ತಷ್ಟು ಕೂತುಹಲ ಹೆಚ್ಚಿಸಿದೆ.

ಭಜರಂಗಿ ಸಿನಿಮಾ ಖ್ಯಾತಿಯ ಹರ್ಷ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಶಿವರಾಜ್‌ ಕುಮಾರ್‌ ಅವರ ಪತ್ನಿ ಸಿನಿಮಾದ ನಿರ್ಮಾಪಕರಾಗಿದ್ದಾರೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *