ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ವೈದ್ಯಕೀಯ ಮಂಡಳಿ ರಚನೆಗೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ

ಪಶ್ಚಿಮ ಬಂಗಾಳ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಗರ್ಭಪಾತದ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳುವ ವೈದ್ಯಕೀಯ ಮಂಡಳಿಯನ್ನು ತಕ್ಷಣವೇ ರಚಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ ಗುರುವಾರ ಸೂಚಿಸಿದೆ.

24 ಗಂಟೆಗಳಲ್ಲಿ ನಾಲ್ವರು ತಜ್ಞರ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ನ್ಯಾಯಮೂರ್ತಿ ಭಟ್ಟಾಚಾರ್ಯ ಅವರು ನಿರ್ದೇಶನ ನೀಡಿದ್ದು, ಅವರು ಮುಂದಿನ 48 ಗಂಟೆಗಳಲ್ಲಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ನಾಲ್ವರು ಜನರಿರುವ ವೈದ್ಯಕೀಯ ತಂಡದಲ್ಲಿ ಒಬ್ಬ ಸ್ತ್ರೀರೋಗತಜ್ಞ ಮತ್ತು ಮಕ್ಕಳ ವೈದ್ಯರನ್ನು ಹೊಂದಿರಬೇಕು ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಅವರು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಗುಂಡುಹಾರಿಸಿ ನಾಲ್ವರನ್ನು ಹತ್ಯೆ ಮಾಡಿದ್ದ ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಸೇವೆಯಿಂದ ವಜಾ

ಈ ಸಂಬಂಧ ಆಗಸ್ಟ್ 21ರಂದು ಮತ್ತೆ ವಿಚಾರಣೆ ನಡೆಯಲಿದ್ದು, ವೈದ್ಯಕೀಯ ಮಂಡಳಿಯ ವರದಿ ಆಧರಿಸಿ ಗರ್ಭಪಾತದ ನಿರ್ಧಾರವನ್ನು ನ್ಯಾಯಾಲಯ ತೆಗೆದುಕೊಳ್ಳಲಿದೆ. ಪ್ರಕರಣದ ಸಂತ್ರಸ್ತೆ 11 ವರ್ಷದ ಅಪ್ರಾಪ್ತ ಬಾಲಕಿಯು 25 ವಾರಗಳ ಗರ್ಭಿಣಿಯಾಗಿದ್ದಾರೆ.

20 ವಾರ ಅಥವಾ ಅದಕ್ಕಿಂತ ಕಡಿಮೆ ಸಮಯದ ಗರ್ಭವಿದ್ದರೆ ಕಾನೂನಿನ ನಿಯಮಗಳ ಪ್ರಕಾರ ವೈದ್ಯರು ಗರ್ಭಪಾತ ಮಾಡಬಹುಶಹೊರ  ತೆಗೆದುಕೊಳ್ಳಬಹುದು. ಹಾಗಾಗಿ ಈ ಪ್ರಕರಣದಲ್ಲಿ ಅವಧಿ ಮೀರಿರುವುದರಿಂದ ಸಂತ್ರಸ್ತೆಯ ಪೋಷಕರು ಗರ್ಭಪಾತಕ್ಕೆ ಅನುಮತಿ ಕೋರಿ ಕಲ್ಕತ್ತಾ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಅಪ್ರಾಪ್ತ ಬಾಲಕಿ ತನ್ನ ಊರಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದರು. ಗರ್ಭಾವಸ್ಥೆಯ ಲಕ್ಷಣಗಳು ಕಾಣಿಸಿಕೊಂಡ ನಂತರವೇ ಅವರ ಪೋಷಕರಿಗೆ ಘಟನೆ ತಿಳಿದು ಬಂದಿದೆ. ಆದರೆ ಅಷ್ಟು ಹೊತ್ತಿಗೆ ಸಾಕಷ್ಟು ಸಮಯ ಕಳೆದಿದ್ದು, ಪೋಷಕರು ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಮೂವರು ಆರೋಪಿಗಳು ಬಾಲಾಪರಾಧಿಗಳ ಸುಧಾರಣಾ ಗೃಹದಲ್ಲಿದ್ದಾರೆ.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಹೋರಾಟದ ದಾರಿ ತಪ್ಪಿಸುತ್ತಿದೆಯಾ ಬಿಜೆಪಿ?! Janashakthi Media

Donate Janashakthi Media

Leave a Reply

Your email address will not be published. Required fields are marked *