ಪೈಲೆಟ್ ಸೇರಿದಂತೆ ಅರ್ಹತೆ ಇಲ್ಲದ ಸಿಬ್ಬಂದಿ ನೇಮಕ ಮಾಡಿಕೊಂಡ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಂಪನಿಗೆ 99 ಲಕ್ಷ ರೂ. ದಂಡ ವಿಧಿಸಲಾಗಿದೆ.
ವೈಮಾನಿಕ ನಿಯಂತ್ರಕ ಸಂಸ್ಥೆ (ಡಿಜಿಸಿಎ) 90 ಲಕ್ಷ ರೂ. ದಂಡ ವಿಧಿಸಿದೆ. ಇದರ ನಡುವೆ ಲೋಪಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಾರ್ಯಾಚರಣೆ ನಿರ್ದೇಶಕರು ಮತ್ತು ತರಬೇತಿ ನಿರ್ದೇಶಕರ ಸೂಚನೆ ಮೇರೆಗೆ ಪ್ರತ್ಯೇಕವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಈ ಲೋಪಗಳು ಕಂಡುಬರದೇ ನಿಯಮ ಪಾಲಿಸಬೇಕು ಎಂದು ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ ಸೂಚನೆ ನೀಡಿದೆ.