ಅದಾನಿ ಸಮೂಹ ಸಂಸ್ಥೆಯ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಮಾಲೀಕತ್ವದ ಅದಾನಿ ಸಮೂಹ ಸಂಸ್ಥೆಗಳೊಂದಿನ ಎಲ್ಲಾ ವ್ಯವಹಾರಗಳು, ಸಾಲದ ವಿವರಗಳನ್ನು ಕಳುಹಿಸಿಕೊಡಿ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಲ್ಲಾ ಬ್ಯಾಂಕಿನ ಮುಖಸ್ಥರಿಗೆ ಸೂಚನೆ ನೀಡಿದೆ.

ಅದಾನಿ ಸಮೂಹ ಸಂಸ್ಥೆ ಮೂಲಕ ನಡೆದಿದೆ ಎನ್ನಲಾದ ಷೇರುಗಳ ತಿರುಚುವಿಕೆ ಹಾಗೂ ಲೆಕ್ಕಪತ್ರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಬಹಿರಂಗಗೊಂಡ ನಂತರದಲ್ಲಿ ಸಂಸ್ಥೆಗಳು ಇಕ್ಕಟ್ಟಿಗೆ ಸಿಲುಕಿದ್ದು, ನಂತರದಲ್ಲಿ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಮತ್ತು ಕಂಪನಿಯು 20,000 ಕೋಟಿ ರೂ. ಎಫ್‌ಪಿಒ ಹಿಂತೆಗೆದುಕೊಂಡಿದ್ದರಿಂದ ಆರ್‌ಬಿಐ ಈ ಕ್ರಮ ಅನುಸರಿಸಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಬಜೆಟ್‌ ಸಂಸತ್‌ ಅಧಿವೇಶನ: ಲೋಕಸಭೆಯಲ್ಲಿ ಅದಾನಿ ಸಂಸ್ಥೆ ವಿರುದ್ಧದ ಆರೋಪಗಳ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು

ನಂತರ ಅದಾನಿ ಸಮೂಹವು ಇಕ್ಕಟ್ಟಿನಲ್ಲಿ ಸಿಲುಕಿದೆ. ಈ ಮದ್ಯೆ ಅದಾನಿ ಸಂಸ್ಥೆಗಳು ತನ್ನ ಕಡೆಯಿಂದ ಎಲ್ಲವೂ ಸರಿಯಿದೆ ಎಂದು ಬಿಂಬಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಅದಾನಿ ಕಂಪನಿಗಳಿಗೆ ನೀಡಲಾದ ಸಾಲದ ವಿವರಣೆ ಹಾಗೂ ಸಂಸ್ಥೆ ಸಲ್ಲಿಸಿರುವ ದಾಖಲಾತಿಗಳ ವಿವರಣೆಯನ್ನು ಆರ್‌ಬಿಐ ಪಡೆದುಕೊಳ್ಳಲು ಬಯಸಿದೆ.

ಹಿಂಡೆನ್​ಬರ್ಗ್ ರಿಸರ್ಚ್ ಕಂಪನಿಯು ಜನವರಿ 24 ರಂದು ‘Adani Group: How The World’s 3rd Richest Man Is Pulling The Largest Con In Corporate History’ ಶೀರ್ಷಿಕೆಯ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹ ಸಂಸ್ಥೆಗಳು ತನ್ನ ಷೇರುಗಳಲ್ಲಿ ಭಾರಿ ಹಸ್ತಕ್ಷೇಪ ಮಾಡಿರುವುದು ಮತ್ತು ಲೆಕ್ಕಪತ್ರಗಳಲ್ಲಿ ವಂಚನೆ ಎಸಗಿರುವುದಾಗಿ ವರದಿಯಲ್ಲಿ ಉಲ್ಲೇಖಿತವಾಗಿದೆ. ಈ ವರದಿಯ ನಂತರ ಅದಾನಿ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿಯುತ್ತಿವೆ. ಕಳೆದ ಒಂದು ವಾರದಿಂದ ಕಂಪನಿಯ ಷೇರುಗಳ ಬೆಲೆ ಕುಸಿಯುತ್ತಲೇ ಇವೆ.

ಇದನ್ನು ಓದಿ: ಉದ್ಯಮಿ ಅದಾನಿ ಸಮೂಹ ಸಂಸ್ಥೆಗಳ ಷೇರು ಕುಸಿತ; ಎಲ್​​ಐಸಿಗೆ ರೂ. 18000 ಕೋಟಿ ನಷ್ಟ

ಹಿಂಡೆನ್​ಬರ್ಗ್ ರಿಸರ್ಚ್​ ವರದಿಯ ನಂತರ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು 90 ಶತಕೋಟಿ ಯುಎಸ್​ ಡಾಲರ್​ನಷ್ಟು ಮೌಲ್ಯ ಕಳೆದುಕೊಂಡಿವೆ. ಷೇರು ಮಾರುಕಟ್ಟೆಯಲ್ಲಿನ ದಿನನಿತ್ಯದ ಬದಲಾವಣೆಗಳಿಂದಾಗಿ ಏರಿಳಿತದ ಪ್ರಮಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಚಂದಾದಾರಿಕೆ ಹೊಂದಿರುವವರ ಎಫ್​ಪಿಒ ಷೇರು ಮಾರಾಟವನ್ನು ಹಿಂಪಡೆದಿರುವುದಾಗಿ ಕಂಪನಿ ತಿಳಿಸಿದೆ.

ಸೆಬಿಯತಹ ರೆಗ್ಯೂಲರಿಟಿಗಳು ಮಧ್ಯ ಪ್ರವೇಶ ಮಾಡುವ ಸಾಧ್ಯತೆಯಿದೆ ಎಂದು ಬ್ಯಾಂಕಿಂಗ್ ಮೂಲವೊಂದು ಹೇಳಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಈವರೆಗೂ ಅದಾನಿ ಷೇರು ಕುಸಿತ ಮತ್ತು 20,000 ಕೋಟಿ ರೂಪಾಯಿಗಳ ಎಫ್‌ಪಿಒ ಅನ್ನು ಹಿಂಪಡೆಯುವ ನಿರ್ಧಾರಗಳ ಬಗ್ಗೆ ಯಾವುದೇ ತನಿಖೆಯನ್ನು ಘೋಷಣೆ ಮಾಡಿಲ್ಲ.

ಪ್ರಸ್ತುತ ಅದಾನಿ ಗ್ರೂಪ್ ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಹೊಂದಿದೆ. ಈ ನಡುವೆ ಅದಾನಿ ಗ್ರೂಪ್ ಕಂಪನಿಗಳ ಬಾಂಡ್‌ಗಳನ್ನು ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ. ಈ ನಡುವೆ ಸಿಟಿಗ್ರೂಪ್ ಇಂಕ್‌ ಅದಾನಿ ಗ್ರೂಪ್ ಸೆಕ್ಯುರಿಟಿಗಳನ್ನು ಸಾಲಗಳಿಗೆ ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *