ಶಿಕ್ಷಣ ಮಾರಾಟದ ಮುಖವನ್ನು ಕಳಿಚಿದ ಯುವರತ್ನ

ಖಾಸಗಿಯವರ ಲಾಬಿಗೆ ಆಳುವ ಸರ್ಕಾರಗಳು ಕೈಜೊಡಿಸಿದರೇ ಎಂತಹ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ಈ ಸಿನಿಮಾ ಮಾದರಿಯಾಗಿದೆ. ಈ ಸಿನಿಮಾದಲ್ಲಿ ಶಿಕ್ಷಣ ಮಂತ್ರಿಯಾಗಿ ಸಾಯಿಕುಮಾರ್ ಇದಕ್ಕೆ ಸಾಕ್ಷಿಯಾಗಿ ತೋರಿಸಿಕೊಟ್ಟಿದ್ದಾರೆ.

ಕೊರೊನಾ ಲಾಕ್‌ಡೌನ್ ನಂತರದಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಸಾಮಾಜಿಕ ಕಳಕಳಿಯ Act-1978 ಸಿನಿಮಾ ನಂತರದಲ್ಲಿ ಬಿಡುಗಡೆಯಾದ ಮತ್ತೊಂದು ಚಲನಚಿತ್ರವೆಂದರೆ ಯುವರತ್ನ.

ಮುಚ್ಚುತ್ತಿರುವ ಸರ್ಕಾರಿ ಶಾಲಾ-ಕಾಲೇಜು-ವಿವಿ ಬಲಪಡಿಸಿ ಎಂದು ದೇಶಾದ್ಯಂತ ಹಲವಾರು ಚಳುವಳಿಗಳು ನಡೆದಿವೆ, ನಡೆಯುತ್ತಿವೆ ಕೂಡಾ, ಅಂತಹ ಸನ್ನಿವೇಶವೊಂದನ್ನ ನಿರ್ದೇಶಕ ಸಂತೋಷ ಆನಂದರಾಮ್ ಯುವರತ್ನ ಸಿನಿಮಾದಲ್ಲಿ ಬಳಸಿ ಸರ್ಕಾರಿ ಕಾಲೇಜುಗಳನ್ನ ಬಲಪಡಿಸಿ ಎಂದು ಕರೆ ನೀಡಿದ್ದಾರೆ. ನಟ ಪುನೀತ್‌ರಾಜ್‌ಕುಮಾರ ನಾಯಕನ ಪಾತ್ರಕ್ಕೆ ಜೀವ ತುಂಬಿದರೆ, ಖಾಸಗಿಯವರ ಲಾಬಿಗೆ ಬಲಿಯಾಗುತ್ತಿರುವ ಸರ್ಕಾರಿ ಕಾಲೇಜನ್ನು ಉಳಿಸಿಕೊಳ್ಳಲು ಹೊರಾಡುತ್ತಿರುವ ಪ್ರಿನ್ಸಿಪಾಲ್ ಪಾತ್ರದಲ್ಲಿ ಪ್ರಕಾಶ್ ರೈ ಅದ್ಬುತ ನಟನೆಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಖಾಸಗಿಯವರ ಲಾಬಿಗೆ ಆಳುವ ಸರ್ಕಾರಗಳು ಕೈಜೊಡಿಸಿದರೇ ಎಂತಹ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ಈ ಸಿನಿಮಾ ಮಾದರಿಯಾಗಿದೆ. ಈ ಸಿನಿಮಾದಲ್ಲಿ ಶಿಕ್ಷಣ ಮಂತ್ರಿಯಾಗಿ ಸಾಯಿಕುಮಾರ್ ಇದಕ್ಕೆ ಸಾಕ್ಷಿಯಾಗಿ ತೋರಿಸಿಕೊಟ್ಟಿದ್ದಾರೆ.

ಈ ಸಿನಿಮಾವು ಪ್ರಸಕ್ತ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಕಥೆಯನ್ನು ಒಳಗೊಂಡಿದೆ. ಅಂಕಗಳೆ ಮಾನದಂಡವಾಗಿಸಿದಾಗ  ಶೈಕ್ಷಣಿಕ ಹತ್ಯೆಗಳಿಗೆ ಸಮೀರಾ ಎಂಬ ವಿದ್ಯಾರ್ಥಿನಿ ಬಲಿಯಾಗುತ್ತಾಳೆ. ಇವಳ ಸಾವಿಗೆ ನ್ಯಾಯಕ್ಕಾಗಿ ಸಿಡಿದೆದ್ದ  ಪ್ರಿನ್ಸಿಪಾಲ್ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ  ಯುವ ಶಕ್ತಿ ಮೂಲಕ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುವ ಸಂದರ್ಭ. ಮತ್ತು ಅದೇ ಸಮಯದಲ್ಲಿ ಕಾರ್ಪೊರೇಟ್ ಯುಗದ ದಬ್ಬಾಳಿಕೆಯ ಎರಡು ಚಿತ್ರಣಗಳನ್ನು ನಿರ್ದೇಶಕ ಭಿನ್ನವಾಗಿ ಹೆಣೆಯುತ್ತಾ ಹೋಗಿದ್ದಾನೆ.

ಮುಂದುವರೆದು ನಿರ್ದೇಶಕ ಕಾಲೇಜುಗಳಲ್ಲಿ  ನಡೆಯುವ‌ ರ‍್ಯಾಗಿಂಗ್, ಗಾಂಜಾ-ಡ್ರಗ್ಸ್ ಮಾದಕ ವಸ್ತುಗಳ ಸೇವನೆಯಿಂದ ಬದುಕು ಕಳೆದುಕೊಳ್ಳುವ ವಿದ್ಯಾರ್ಥಿಗಳು, ಇದರ ಹಿಂದಿರುವ ಖಾಸಗಿ ಕೃಪಾಪೋಷಿತ ಒಳಜಗತ್ತನ್ನು ಎಳೆ ಎಳೆಯಾಗಿ ತೋರಿಸುತ್ತಾ ಹೋಗಿದ್ದಾರೆ.

ಒಂದೆಡೆ ಮುಚ್ಚುತ್ತಿರುವ ಸರ್ಕಾರಿ ಶಾಲಾ -ಕಾಲೇಜು ಉಳಿವಿಗಾಗಿ ಹೋರಾಟ, ಇನ್ನೊಂದೆಡೆ ಇವುಗಳನ್ನು ಮುಚ್ಚಲೇಂದೆ ಶತಪ್ರಯತ್ನ ಮಾಡುತ್ತಿರುವ ಸರ್ಕಾರ. ಖಾಸಗೀಯವರ ಲಾಬಿಗೆ ಮಣಿದು ಅವರ ಕೈಗೊಂಬೆಯಂತೆ ಆಡುತ್ತಿರುವ ಸರ್ಕಾರದ ಪ್ರತಿನಿಧಿಗಳ ಒಟ್ಟು ಚಿತ್ರಣವನ್ನು ಚಿತ್ರ ತಂಡ ಪ್ರೇಕ್ಷಕರ ಮುಂದೆ ಇಟ್ಟಿದೆ.

ಕಾಲೇಜಿನ ವಿದ್ಯಾರ್ಥಿಗಳನ್ನು ದಾರಿತಪ್ಪಿಸುವುದರಿಂದ ಹಿಡಿದು, ಸರಿಯಾಗಿ ಸಾಗುತ್ತಿರುವ ಕಾಲೇಜುಗಳನ್ನು ಸರ್ವನಾಶ ಮಾಡುವ ತನಕ ಹಲವು ಹುನ್ನಾರಗಳನ್ನು ಮಾಡುತ್ತಿರುವುದನ್ನು ಸಿನಿಮಾ ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸುಂದರವಾದ ಕಾಲೇಜು, ಸಂಭ್ರಮ, ಸಂಗೀತ ಮತ್ತು ಗಮ್ಮತ್ತು ಅನ್ನುತ್ತಲೇ ಅದನ್ನು ಕೊಡಲಿಕ್ಕೆ ನಿಂತಿರುವ ಶಿಕ್ಷಣದ ವ್ಯಾಪಾರಿಕರಣ ಮತ್ತು ಮುರಿದ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿ ಒಳ್ಳೆಯ ಪಾಠ ಕಲಿಯುವುದಿಲ್ಲ ಅಂತೇನಿಲ್ಲ ಎಂದು ನಂಬಿರುವ ಪ್ರಿನ್ಸಿಪಾಲರ ನಡುವಿನ ಹೋರಾಟದ ಕಥೆಯನ್ನು ಯುವರತ್ನ ಕೊಟ್ಟಿದೆ.

ಚಿತ್ರ ವಿಮರ್ಶೆ: ಸುಮಾ, ಶಿಗ್ಗಾಂವಿ

Donate Janashakthi Media

Leave a Reply

Your email address will not be published. Required fields are marked *