ಬಿಜೆಪಿ ಪಕ್ಷದೊಳಗಿನ ಬಂಡಾಯ ಜನತೆಯೊಳಗೆ ತೀವ್ರ ಮಡುಗಟ್ಟಿರುವ ಅತೃಪ್ತಿಯ ಪ್ರತಿಫಲನವೂ ಹೌದು!

ಎಸ್.ವೈ.ಜಿ.

ಸ್ಪೋಟಗೊಳ್ಳುತ್ತಿರುವ ಒಳ ಬಂಡಾಯಗಳು ರಾಜ್ಯದ ರಾಜಕಾರಣದಲ್ಲಿ ಬಿಜೆಪಿ ಪಕ್ಷದೊಳಗಿನ ಈ ಬಾರಿ ಬಂಡಾಯ ಬಹಳ ಮಹತ್ವದ ಅಂಶ. ಇದು ಜನತೆಯೊಳಗೆ ತೀವ್ರ ಮಡುಗಟ್ಟಿರುವ ಅತೃಪ್ತಿಯ ಒಂದು ಮಟ್ಟಿನ ಪ್ರತಿಫಲನವೂ ಕೂಡ. ಅಧಿಕಾರದ ಕುರ್ಚಿಗೆ `ದಸ್ತಿ ಹಾಕಿರುವ ಮುಖ್ಯವಾಗಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಬಿಡುಗಡೆ ಮಾಡಿವೆ. ಉಳಿದಿರುವ ಕೆಲವು `ಕುತೂಹಲ&#೩೯; ಉಳಿಸಿಕೊಂಡಿರುವ ಕ್ಷೇತ್ರಗಳಂತೆ! ಎದುರಾಳಿ ಯಾರಿರುತ್ತಾರೆ ಎನ್ನುವುದನ್ನು ನೋಡಿಕೊಂಡು ಅಭ್ಯರ್ಥಿಯನ್ನು ಆಯ್ಕೆಮಾಡುವರಂತೆ. ಆಯಾ ಪಕ್ಷಗಳು ಅನುಭವಿ, ಜನಾನುರಾಗಿಯನ್ನು ಅಭ್ಯರ್ಥಿಯನ್ನಾಗಿಸುವ ಪದ್ಧತಿ ಹೊರಟೇ ಹೋಗಿ ಗೆಲ್ಲುವ `ಮಾನದಂಡವೇ ಮೇಲುಗೈ ಸಾಧಿಸಿರುವಾಗ ಚುನಾವಣೆಗೂ ಮೊದಲೇ ಅಭ್ಯರ್ಥಿ ಆಯ್ಕೆಯೇ ಕುತೂಹಲಕಾರಿಯೂ, ರೋಮಾಂಚಕಾರಿಯೂ ಆಗಿರುತ್ತದೆ. ಎಲ್ಲವನ್ನೂ ಹೈ ಕಮಾಂಡಿಗೆ ಒಪ್ಪಿಸಿರುವುದರಿಂದ ಕೆಳಗಿನಿಂದ ಮೇಲಿನವರೆಗೂ ಆಕಾಂಕ್ಷಿಗಳು ಲಾಬಿ ಮಾಡಬೇಕು. ಅರ್ಜಿ ತುಂಬಿ ನಾಯಕರ ಸಂದರ್ಶನಗಳನ್ನು ಎದುರಿಸಬೇಕು.

ಇದಕ್ಕೂ ಮೊದಲು ಆಯಾ ಪಕ್ಷದ ಹೈ ಮತ್ತು ಲೋ ಕಮಾಂಡ್ ಗಳು ಕ್ಷೇತ್ರ ಸರ್ವೆ ಮಾಡಿಸಬೇಕು, ಅದೂ ಸಾಲದೇ ಆಕಾಂಕ್ಷಿ ಅಭ್ಯರ್ಥಿಗಳು ಸಹ ತಮ್ಮ ಬಗ್ಗೆ, ಬಯಸುವ ಪಕ್ಷದ ಅಲೆ ಬಗ್ಗೆಯೂ ಮಾಡಿಸಿಕೊಳ್ಳುತ್ತಾರೆ! ಇಂತಹ ಸರ್ವೆಗಳು ಸುಮ್ಮನೇ ಆಗುತ್ತವೆಯೇ? ಕೋಟಿ ಅಲ್ಲದಿದ್ದರೂ, ಅದಕ್ಕೂ ಹಲವು ಲಕ್ಷಗಳನ್ನು ಸುರಿಯಬೇಕು! ಚುನಾವಣೆ, ಅಧಿಕಾರ ಅನ್ನುವುದು ಸುಲಭ ಅಲ್ಲ ನೋಡಿ. ಅದು ಭರ್ಜರಿ ಬಂಡವಾಳ ಹೂಡುವ ಉದ್ಯಮ. ಉದಾರೀಕರಣ, ಕಾರ್ಪೋರೇಟ್ ರಾಜಕಾರಣದ ಕಾಲದಲ್ಲಿ ಯಾವುದೂ ಸುಲಭವೂ ಅಲ್ಲ, ಪುಕ್ಕಟೆ ಸಿಗುತ್ತದೆ ಎಂದು ಭಾವಿಸುವಂತಿಲ್ಲ!

ಇಷ್ಟೆಲ್ಲ ಕಸರತ್ತುಗಳನ್ನು ಮಾಡಿದ ಬಳಿಕವೂ ಆಯಾ ಪಕ್ಷಗಳ ಒಳಗಡೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಭಿನ್ನಮತ ಸ್ಪೋಟಿಸಿದೆ. ಬಂಡಾಯದ ಸ್ವರೂಪ ಪಡೆದಿದೆ. ಈ ಚುನಾವಣೆಯ ಸರಣಿಯಲ್ಲಿ ಅಂತೂ ಅತಿ ಹೆಚ್ಚು ಅತೃಪ್ತಿ ಬಂಡಾಯಗಳು ನಡೆಯುತ್ತಿರುವುದು ಭಾರತೀಯ ಜನತಾ ಪಕ್ಷದಲ್ಲಿ. ಶಿಸ್ತು ಮತ್ತು ಸಿದ್ಧಾಂತಕ್ಕೆ ಬದ್ಧರು ಎಂದು ಹೇಳಿಕೊಂಡ ಬಿಜೆಪಿಯ ಅನೇಕ ಹಿರಿಯರು ಟಿಕೆಟ್ ವಂಚಿತರಾಗುತ್ತಲೇ ಸಿಡಿದೆದಿದ್ದಾರೆ. ಅವರಿಗೆ ಟಿಕೆಟ್ ಸಿಕ್ಕಿಲ್ಲ ಎನ್ನುವ ದೃಷ್ಟಿ ಒಂದು ಕಡೆ ಇರುವಾಗಲೇ ರಾಜ್ಯದ ರಾಜಕಾರಣದಲ್ಲಿ ಬರಲಿರುವ ಬಿರುಗಾಳಿ
ಬದಲಾವಣೆಗಳನ್ನು ಆಯಾ ಪಕ್ಷಗಳಲ್ಲಿ ಅವರು ಅಂದಾಜಿಸಿಕೊಂಡಂತಿದೆ. ಪ್ರಮುಖವಾಗಿ, ಆಡಳಿತರೂಢ ಬಿಜೆಪಿ ಪಕ್ಷ ಜನತೆಯ ಅತೃಪ್ತಿ, ಸಿಟ್ಟನ್ನು ಎದುರಿಸುತ್ತಿರುವಾಗಲೇ ಅತಿ ಪ್ರಭಾವಿ ನಾಯಕರುಗಳನ್ನು ಮೂಲೆಗೆ ತಳ್ಳಿ ಹೊಸಬರಿಗೆ ಟಿಕೆಟ್ ನೀಡಿರುವುದು ಮಹತ್ವದ ಅಂಶ. ಈ ಸಂದರ್ಭವನ್ನೇ ಬಳಸಿಕೊಂಡು ತಮಗೆ ಬೇಡವಾದ ನಾಯಕರುಗಳನ್ನು ಅಂದರೆ ಜನ ಸಮೂಹಗಳ ನಡುವಿನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ನಾಯಕರುಗಳನ್ನು ನೇಪಥ್ಯಕ್ಕೆ ಸರಿಸುವ ಮತ್ತುಕೇಶವ ಕೃಪಾದ ನೇರ ನಿಯಂತ್ರಣದಲ್ಲಿ ಇರುವವರನ್ನು ಗೆಲ್ಲಿಸಿ ಸಂಪೂರ್ಣ ಹಿಡಿತ ಸಾಧಿಸುವ ವರೆಸೆಯೂ ಇಲ್ಲಿದೆ. ಬಹು ಹಿಂದಿನಲ್ಲೇ ಲಿಂಗಾಯತರ ನಡುವಿನಲ್ಲಿ ಮತ್ತು ರಾಜ್ಯದ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಹಿಡಿತ ಹೊಂದಿದ್ದ ಬಿ.ಎಸ್.ಯಡಿಯೂರಪ್ಪನವರನ್ನು ಪೂರ್ಣ ಮೂಲೆಗೆ ತಳ್ಳಲು ಪ್ರಯತ್ನ ಆರಂಭಗೊಂಡಿತ್ತು. ಅಲ್ಪ ಕಾಲದ ನಂತರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನೇ ಬದಲಿಸುವುದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನಿಸಿತು. ಆ ಬಳಿಕ ಕೆ. ಎಸ್.ಈಶ್ವರಪ್ಪ, ಆರ್.ಅಶೋಕ, ಅವರು ಹಿಂದೆ ಸರಿಯುವಂತೆ ಒತ್ತಡ ಹೇರಲಾಗಿತ್ತು. ಇವ್ಯಾವನ್ನೂ ಕೇಳದೆ ಇರುವಾಗ ಒಂದೊಂದು  ಕಾರಣಗಳನ್ನು ಒಡ್ಡಿ ಸರಿಸುವ ಪ್ರಯತ್ನಗಳು ನಡೆದಿದ್ದವು. ಹಾಗೂ ಹೀಗೂ ಅಧಿಕಾರಕ್ಕೆ ಅಂಟಿಕೊಂಡಿದ್ದ ಆರ್.ಅಶೋಕ್ ಅವರಿಗೆ ಈಗ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ತನ್ನೊಂದಿಗೆ ತನ್ನ ಮಗನಿಗೆ ಸ್ಥಾನ ದೊರಕಿಸಿಕೊಡಬೇಕು ಎಂದು ಯತ್ನಿಸಿ ಇನ್ನೇನು ಬಿಜೆಪಿಯನ್ನು ಬಿಟ್ಟು ಹೊರಟೆ ಹೋದರು ಎನ್ನುವಂತೆ ಬಂಡಾಯದ ಬಾವುಟ ಹರಿಸುತ್ತಿದ್ದ ವಿ. ಸೋಮಣ್ಣನವರನ್ನು ಸಿದ್ದರಾಮಯ್ಯನವರ ಎದುರಿಗೆ ವರುಣಾದಲ್ಲಿ ಅಭ್ಯರ್ಥಿಯನ್ನಾಗಿಸಲಾಗಿದೆ. ಅಲ್ಲಿ ಚುನಾವಣೆಯ ಸ್ಪರ್ಧೆಯಲ್ಲಿ ಫಲಿತಾಂಶ ಏನಾಗುತ್ತದೆ ಎನ್ನುವುದು ಮುಂದಿನ ವಿಷಯ. ಆದರೆ ಅವರು ಹೋರಾಡಬೇಕಾಗಿರುವುದು ಎಂಥವರೊಂದಿಗೆ ಎನ್ನುವುದು ಸ್ಪಷ್ಟವಾಗಿರುವಂತದ್ದೇ. ಅಲ್ಲಿ ಸೆಣಸಾಡಿ ಉಳಿದು ಬಂದರೆ ಮುಂದೆ ಅಧಿಕಾರ. ಇಷ್ಟೇ ಅಲ್ಲವೇ ಅದರ ಸಂದೇಶ! ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ದಿಸಿದರೂ ಅಲ್ಲಿಯೂ ಒಳಬಂಡಾಯಗಳು ಸ್ಪೋಟಗೊಂಡಿವೆ. ವಿ.ಸೋಮಣ್ಣನವರ ಬರವಿಗೆ ಸ್ಥಳೀಯ ಬಿಜೆಪಿ ಟಿಕೆಟ್ ಆಕಾಂಕ್ಷಿಯ ನೇತೃತ್ವದಲ್ಲಿ ಧರಣಿ ನಡೆದಿದೆ. ವರುಣಾ ದಲ್ಲಿ ಬಿಎಸ್.ವೈ.ಯ ಬಲಗೈ ಬಂಟ ಸಿದ್ದಲಿಂಗಸ್ವಾಮಿಯ ಕೈ ಹಿಡಿದ ಸೋಮಣ್ಣ ನಿನ್ನನ್ನೇ ನಂಬಿ ಬಂದಿದ್ದೀನಿ ಕಣಯ್ಯಾ ಅಂತಾ ಗೋಗರೆದಿದ್ದಾರೆ.

ಮೋ-ಶಾ ತಂಡದ ತಲೆಯಲ್ಲಿ ಏನೇನು ಯೋಜನೆಗಳಿವೆ ಎನ್ನುವುದು ಅಲ್ಲಿಯ ನಾಯಕರಿಗೂ ಅಷ್ಟು ನಿಲುಕುತ್ತಿಲ್ಲ ಎನ್ನುವುದು ನಿಜ. ಆದರೆ ಬದಲಾವಣೆ ಅಷ್ಟಾಗಿ ನಿರೀಕ್ಷಿಸದಿದ್ದ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಇವರನ್ನು ಟಿಕೆಟ್ ನೀಡದೇ ಹೊರಗಿಟ್ಟಿದ್ದು ಮಾತ್ರ ವಿಶೇಷ, ಕುತೂಹಲಕಾರಿಯೂ ಆಗಿದೆ. ಅವರಿಗೆ ಟಿಕೆಟ್ ಒಂದು ಕೊನೆಯ ಬಾರಿ ನೀಡಬೇಕೆಂದು ಹಲವು ಮನವಿ ಮತ್ತು ಒತ್ತಡಗಳ ಬಳಿಕವೂ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಅಂದರೆ ಇಲ್ಲಿ ಎಲ್ಲವನ್ನು ನಿರ್ಧರಿಸುವ ಸಂಘ ಪರಿವಾರ ಮತ್ತು ವಿಶೇಷವಾಗಿ ಮೋ-ಶಾ ಹೈಕಮಾಂಡ್ ನಿಶ್ಚಿತವಾದ ಒಂದು ನೀಲಿನಕಾಶೆ ಯನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದೆ. ಇಂತಹದರ ಸುಳಿವು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅಂತವರಿಗೆ ಗೊತ್ತಿರಬಹುದು, ಗೊತ್ತಿಲ್ಲದೆ ಇರಬಹುದು. ಆದರೆ ತಾವು ಈ ಪಕ್ಷದಲ್ಲಿ ಇದ್ದರೆ ಇನ್ನು ಶೂನ್ಯಸಿಂಹಾಸನಾದೀಶರು ಆಗಬೇಕಾಗುತ್ತದೆ ಎನ್ನುವ ಅರಿವು ಮೂಡಿರುವುದಂತೂ ನಿಜ. ಹಾಗಾಗಿಯೇ ಆ ಪಕ್ಷಗಳಿಂದ ಹೊರ ನಡೆದಿರುವುದು, ತಮ್ಮ ಮುಂದಿನ ಭವಿಷ್ಯ ಉಳಿಸಿಕೊಳ್ಳಬೇಕು ಎನ್ನುವ ದೆಸೆಯಲ್ಲಿ. ಬಿಜೆಪಿ ಟಿಕೆಟ್ ಸಿಗದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮುಂತಾದವರು ಖಂಡಿತಕ್ಕೂ ಪ್ರಭಾವಿ ನಾಯಕರು ಎನ್ನುವುದು ನಿಜ. ಅದನ್ನು ಗಮನಿಸಿಯೇ ಇಂಥವರನ್ನು ತಮ್ಮ ಕಡೆಗೆ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಮತ್ತು ಅವರು ಸಹ ಸೇರ್ಪಡೆಗೊಳ್ಳುತ್ತಿದ್ದಾರೆ.

ರಾಜ್ಯದ ರಾಜಕಾರಣದಲ್ಲಿ ಬಿಜೆಪಿ ಪಕ್ಷದೊಳಗಿನ ಈ ಬಾರಿ ಬಂಡಾಯ ಬಹಳ ಮಹತ್ವದ ಅಂಶ ಮತ್ತು ಜನತೆಯೊಳಗೆ ತೀವ್ರ ಮಡುಗಟ್ಟಿರುವ ಅತೃಪ್ತಿಯ ಒಂದು ಮಟ್ಟಿನ ಪ್ರತಿಫಲನವೂ ಕೂಡ. ಪ್ರಶ್ನೆ ಎದುರಾಗಿರುವುದು ಈ ಹಿಂದೆ ಬಿಜೆಪಿ ಪಕ್ಷ ಮತ್ತು ಸಂಘ ಪರಿವಾರದ ಪ್ರತಿ ಕ್ರಮ ಮತ್ತು ನಿಲುವುಗಳನ್ನು, ಉಗ್ರಹಿಂದುತ್ವವಾದದ ಬಗ್ಗೆ ಬಹಳಷ್ಟು ಗಟ್ಟಿದನಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದವರು ಈಗ ಅದ್ಹೇಗೆ ಬದಲಾಗುತ್ತಾರೆ ಅಥವಾ ಅಂತಹವರನ್ನು ಸೇರಿಸಿಕೊಂಡ ಕಾಂಗ್ರೆಸ್ ಏನಾಗಬಹುದು ಎನ್ನುವ ಸಹಜ ಪ್ರಶ್ನೆಗಳಿವೆ. ಈ ನಾಯಕರು ಮಾತನಾಡುತ್ತಿದ್ದ ದಾಟಿಗಳನ್ನು ನೋಡಿದರೆ ಸಿದ್ಧಾಂತ ಪ್ರಖರತೆ ಅಧಿಕಾರ ಕುರ್ಚಿಗೆ ಸೀಮಿತವಾಗಿತ್ತೇನೋ ಎನಿಸುತ್ತದೆ. ಮುಂದೆ ಹೇಗೆ ಎನ್ನುವುದನ್ನು ಈಗ ಹೇಳಲಾಗುವುದಿಲ್ಲ. ಯಾಕೆಂದರೆ ಅವರು ಸೇರುವ ಪಕ್ಷದ ನೀತಿ ನಿಲುವುಗಳು ಅವರಿಗೆ ಗೊತ್ತಿಲ್ಲ ಎಂದೇನಲ್ಲ. ಆದರೆ ವಿವಿಧ ಪಕ್ಷಗಳಲ್ಲಿರುವ ನಾಯಕರು ಎಷ್ಟು ಸುಲಭದಲ್ಲಿ ಮತ್ತೊಂದು ಪಕ್ಷಕ್ಕೆ ಹಾರುವುದು ಮತ್ತು ಅದಾಗಿ ಪರಿವರ್ತಗೊಳ್ಳುವುದು ವಿಶೇಷ. ಅಂದರೆ ಇಂದಿನ ಕಾಲದಲ್ಲಿ ರಾಜಕೀಯ, ಸೈದ್ದಾಂತಿಕತೆ ಎನ್ನುವುದು ಕೂಡ ಉದ್ಯಮಕ್ಕೆ ಬೇಕಾಗುವ ರೀತಿಯಲ್ಲಿ ಪುನರ್ ರೂಪಿಸಿಕೊಳ್ಳಬಹುದಾದ ಒಂದು ಅರ್ಹ ಸಲಕರಣೆ ಅಂಶ ಎನ್ಮಬಹುದೇ?

ಇದನ್ನೂ ಓದಿ : ಬಿಜೆಪಿಯ ಆಂತರಿಕ ಸತ್ಯಗಳನ್ನ ನಗ್ನಗೊಳಿಸಿದ ಸತ್ಯ ಸಂಗತಿಗಳಿವು

ಬಿಜೆಪಿ ಸಿದ್ಧಪಡಿಸಿದ ಪಟ್ಟಿ ಮತ್ತು ಘಟಾನುಘಟಿ ನಾಯಕರಗಳನ್ನು ಹೊರ ದಬ್ಬಲು ಹೊರಟ ರೀತಿ ಇವೆಲ್ಲವುಗಳನ್ನು ಒಟ್ಟಿಗೆ ವಿಶ್ಲೇಷಿಸಿದರೆ ಕರ್ನಾಟಕ ರಾಜ್ಯದಲ್ಲಿ ಮುಂದಿನ ಚುನಾವಣೆ ಬಳಿಕ ರಚನೆಯಾಗುವ ಸರ್ಕಾರವನ್ನು ಕೇಶವ ಕೃಪ ಮತ್ತು ನಾಗಪುರಗಳು ನೇರವಾಗಿ ತಮ್ಮ ಸುಪರ್ದಿನಲ್ಲಿ ತೆಗೆದುಕೊಳ್ಳಲು ಮುಂದಾಗಿವೆ ಎನ್ನುವುದರ ಬಗ್ಗೆ ಅನುಮಾನವಿಲ್ಲ. ಲಿಂಗಾಯತರ ನಡುವಿನಲ್ಲಿ ಪ್ರಬಲರಾಗಿರುವವರನ್ನು ದುರ್ಬಲಗೊಳಿಸುತ್ತಾ ನಿಧಾನಕ್ಕೆ ಬ್ರಾಹ್ಮಣ್ಯದ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರಗಳು ಇವೆ ಎನ್ನಲಾಗುತ್ತಿದೆ. ಅದಕ್ಕೆ ಅತಿ ಸಣ್ಣ ಸಮುದಾಯವಾಗಿರುವ ಬ್ರಾಹ್ಮಣ ಜಾತಿಯಲ್ಲಿ ೧೨ ಜನರಿಗೆ ಅವಕಾಶ ಕಲ್ಪಿಸಿರುವುದು ಮತ್ತು ಬೇರೆಯವರಿಗೆ ಅನ್ವಯವಾದ ಅನರ್ಹತೆಯ ಮಾನದಂಡಗಳು ಅಲ್ಲಿರುವವರಿಗೆ ಅನ್ವಯಿಸದೇ ಇರುವುದು ಅದನ್ನು ಸೂಚಿಸುತ್ತಿವೆ ಎನ್ನಲಾಗುತ್ತಿದೆ. ಉಗ್ರ ಹಿಂದುತ್ವದ ಅಜೆಂಡಾದ ಜಾರಿ ಮತ್ತು ೨೦೨೫ರಲ್ಲಿ ಅದು ಅಂದುಕೊಂಡಂತೆ.

ಭಾರತವನ್ನು ಫ್ಯಾಶಿಸ್ಟ್ ಸ್ವರೂಪದ &#೩೯;ಹಿಂದೂ ರಾಷ್ಟ್ರ&#೩೯;ವನ್ನಾಗಿಸುವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ಭಾವಿಸುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಈ ಅಪಾಯವನ್ನು ಎಲ್ಲರೂ ಅತಿ ಗಂಭೀರವಾಗಿ ಪರಿಗಣಿಸಬೇಕು ಮತ್ತು ಎದುರಿಸಬೇಕು. ಇಂತಹ ಒಳ ಬಂಡಾಯಗಳಿAದ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಹೊರತಾಗಿಲ್ಲ. ಅಂತವರಿಗೆ ಒಂದು ಅಭಯದ ವಾತಾವರಣವಲ್ಲಂತೂ ಈ ರಾಜಕೀಯ ಪಕ್ಷಗಳು ಸೃಷ್ಟಿಸಿವೆ. ಅತಿ ಹೆಚ್ಚು ಬೇಡಿಕೆ ಇರುವ ಪಕ್ಷದಲ್ಲಿ ಸೀಟು ಸಿಗದೇ ಇದ್ದರೆ ತಕ್ಕಮಟ್ಟಿಗೆ ಇರುವ ಜೆಡಿಎಸ್ ಪಕ್ಷದತ್ತ ವಲಸೆ ಕಡಿಮೆ ಏನಿಲ್ಲ. ಒಟ್ಟಾರೆ, ಬಹುತೇಕ ಬಲಪಂಥೀಯ ರಾಜಕೀಯ ಪಕ್ಷಗಳು ತಮ್ಮದೇ ಆದಂತಹ ಸಿದ್ಧಾಂತ ಕಾರ್ಯಕ್ರಮ ಮತ್ತು ಜನತೆಗೆ ಬದ್ಧವಾದ ದೃಷ್ಟಿಕೋನಗಳನ್ನು ಪ್ರತಿನಿಧಿಸುವುದಾಗಲಿ, ಪ್ರತಿಪಾದಿಸುವುದಾಗಲಿ ಅಷ್ಟಾಗಿ ಇಲ್ಲ. ಹೀಗಾಗಿ ಈ ಪಕ್ಷಗಳಲ್ಲಿಯೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಲ್ಲಿದೆ. ಇವುಗಳ ನಡುವೆಯೇ ಕನಿಷ್ಠ ಕೋಮು ದ್ವೇಷ ಮುಕ್ತ ಸೌಹಾರ್ದ ಕರ್ನಾಟಕವನ್ನ ಉಳಿಸಿಕೊಳ್ಳುವುದು ಬಹುದೊಡ್ಡ ಸವಾಲು.

ಕೊನೆಯ ಮಾತು:
ಹೀಗೆ ಬಂಡಾಯ ನಡೆಸಿ ಪಕ್ಷ ಸೇರಿದ ನಾಯಕರು ಚುನಾವಣಾ ಫಲಿತಾಂಶದ ನಂತರ ಮಾತೃ ಪಕ್ಷಕ್ಕೆ ಮತ್ತೆ ಸುಲಲಿತವಾಗಿ ಮರಳದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಒಂದು ವೇಳೆ ಬಹುಮತ ತಮಗೆ ಸಿಗದೇ ಹೋದರೆ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಸಂಖ್ಯೆಯಲ್ಲಿ ಶಾಸಕರನ್ನ ಸೆಳೆಯುವ ಮೋ-ಶಾ `ಸಿ&#೩೯; ಯೋಜನೆ ಗುಜರಾತ್ ಚುನಾವಣೆ ವೇಳೆ ಸಿದ್ದಗೊಂಡಿತ್ತು ಎನ್ನುವುದು ಮರೆಯದ ಮಾತು.

Donate Janashakthi Media

Leave a Reply

Your email address will not be published. Required fields are marked *