ಯಸ್ ಚಂಡಮಾರುತ: ಬಂಗಾಳದಲ್ಲಿ ಅತೀ ಹೆಚ್ಚಿನ ಹಾನಿ ಸಂಭವಿಸಿದೆ

ಕೋಲ್ಕತ್ತಾ: ಯಸ್‌ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ರಾಜ್ಯದ ಹಲವೆಡೆ ಭಾರೀ ಮಳೆ ಗಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ.

ಬುಧವಾರದಂದು ಒಡಿಶಾದ ದಮ್ರಾ ಬಂದರಿಗೆ ಅತ್ಯಂತ ರಭಸವಾಗಿ ಅಪ್ಪಳಿಸಿದ ಅಲೆಯಿಂದಾಗಿ ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ಹೆಚ್ಚಿನ ಹಾನಿ ಸಂಭವಿಸಿದ್ದು ಸಮುದ್ರ ತೀರ ಸಮೀಪದ ಹಲವು ರಸ್ತೆಗಳಲ್ಲಿ ತುಂಬಾ ಎತ್ತರದಲ್ಲಿ ನೀರು ನಿಂತಿದೆ. ಪೂರ್ವ ಮೇದಿನಿಪುರದಲ್ಲಿ ಮನೆಗಳಿಗೆ ಹಾನಿಯಾಗಿದೆ.

ಯಸ್‌ ಚಂಡಮಾರುತದಿಂದ ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಎದೆಯವರೆಗೂ ನೀರು ನಿಂತಿದ್ದು ರಸ್ತೆಗಳಲ್ಲೇ ಜನರು ನಡೆದುಕೊಂಡು ಸರುಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.  ಪೂರ್ವ ಮೇದಿನಿಪುರದ ಕೆಲವು ಭಾಗಗಳಲ್ಲಿ ಸೇನೆಯ ಯೋಧರು ಧಾವಿಸಿ, ಸ್ಥಳೀಯರನ್ನು ರಕ್ಷಿಸಿದ್ದಾರೆ. ಶಂಕರಪುರ ಕರಾವಳಿಯಲ್ಲಿದ್ದ ಒಂದು ಶಾಲೆಯೇ ಕೊಚ್ಚಿಹೋಗಿದೆ.

ಒಡಿಶಾದ ಬಂದರಿನಿಂದ ಪ್ರಾರಂಭವಾದ ಯಸ್‌ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಹಾನಿ ಮಾಡಿದ್ದು ಸದ್ಯ ಜಾರ್ಖಂಡ್‌ನತ್ತ ಮುಖ ಮಾಡಿದೆ.

ಪ್ರಕೃತಿ ವಿಕೋಪದಿಂದಾಗಿ ಹವಾಮಾನ ಬದಲಾವಣೆಯಿಂದಾಗಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಕುಂಟಾಗುತ್ತಿದೆ. ಚಂಡಮಾರುತದಿಂದ ಆದಷ್ಟು ಜನರನ್ನು ಸುರಕ್ಷಿತಾ ಸ್ಥಳಗಳಿಗೆ ರವಾನಿಸಲು ಹಗಲಿರುಳು ಪ್ರಯತ್ನಿಸಲು ಆಡಳಿತಾಧಿಕಾರಿಗಳು, ಸಿಬ್ಬಂದಿ ಮುಂದಾಗಿದ್ದಾರೆ.

ಬಂಗಾಳದ ದಕ್ಷಿಣ 24 ಪರಾಗಣ ಸುಂದರ್ ಬನ್ ಪ್ರದೇಶದ ಕಾಡುಪಾರ ಗ್ರಾಮದಲ್ಲಿ ನೀರು ಅಪಾಯದ ಮಟ್ಟಕ್ಕೇರಿ ಹರಿಯುತ್ತಿವೆ. ಮನೆಯೊಳಗೆ ನುಗ್ಗಿದ ನೀರು ನುಗ್ಗಿದ ಪರಿಣಾಮವಾಗಿ ಜನರಲ್ಲಿ ಆತಂಕದ ಮನೆ ಮಾಡಿದೆ. ಚಂಡಮಾರುತದಿಂದಾಗಿ ಬೃಹದಾಕಾರದ ಅಲೆಗಳನ್ನು ನೋಡಿದಾಗ ಜನತೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ರಾಜ್ಯ ಸರಕಾರ ಹೇಳಿದೆ.

ಕಡುಪರಾ ಲಕ್ಷ್ಮಿ ಮಜ್ಹಿ ಎಂಬವರು ಪರಿಸ್ಥಿತಿಯ ಸಂಕಷ್ಟದ ಬಗ್ಗೆ ತಿಳಿಸುತ್ತಾ, ಅಧಿಕಾರಿಗಳು ಯಾರೂ ನಮ್ಮನ್ನು ಬಂದು ಇದುವರೆಗೆ ಭೇಟಿ ಮಾಡಿಲ್ಲ. ನಾವು ಹಸಿವಿನಿಂದ ಬಳಲುತ್ತಿದ್ದೇವೆ. ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಅವರು ತಮ್ಮ ಮೂವರು ಮಕ್ಕಳೊಂದಿಗೆ ಮನೆಯ ಹೊರಗೆ ಪ್ರವಾಹಕ್ಕೆ ಸಿಲುಕಿದ ಅಂಗಳದಲ್ಲಿ ನಿಂತಿದ್ದಾರೆ.

ನಮ್ಮನ್ನು ಹತ್ತಿರದ ಶಾಲಾ ಶಿಬಿರಕ್ಕೆ ಧಾವಿಸುವಂತೆ ಆಡಳಿತ ಕೇಳಿಕೊಂಡಿತು. ಆದರೆ ನಾವು ಹೇಗೆ ಹೋಗಲು ಸಾಧ್ಯವಿದೆ? ಶಿಬಿರವನ್ನು ತಲುಪಲು ನಮಗೆ 30 ನಿಮಿಷಗಳು ಬೇಕಾಗುತ್ತದೆ. ನನ್ನ ಮನೆ ಮತ್ತು ವಸ್ತುಗಳನ್ನು ಬಿಟ್ಟು ನನ್ನ ಮಕ್ಕಳೊಂದಿಗೆ ಪ್ರವಾಹಕ್ಕೆ ಸಿಲುಕಿದ ರಸ್ತೆಗಳಲ್ಲಿ ನಾನು ಹೇಗೆ ಓಡಾಡುವುದು? “ಅದೇ ಹಳ್ಳಿಯ ವಲಸೆ ಕಾರ್ಮಿಕ ಬಾಪನ್ ಲಸ್ಕರ್, ಲಾಕ್‌ಡೌನ್ ಮಧ್ಯೆ ಎದುರಾದ ಮತ್ತೊಂದು ಸಂಕಷ್ಟವನ್ನು ಎದುರಿಸಲಾಗದೆ ಚಂಡಮಾರುತವು ದುಃಖಗಳನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ರೆಸಾರ್ಟ್ ಪಟ್ಟಣವಾದ ಮಂದರ್ಮೋನಿಯಲ್ಲಿನ ಹಲವಾರು ಹೋಟೆಲ್‌ಗಳು ಸಹ ವ್ಯಾಪಕ ಹಾನಿಗೊಳಗಾದವು. ಹಾನಿಗೊಳಗಾದ ಪ್ರದೇಶಗಳನ್ನು ಸರಿಪಡಿಸುವ ಕೆಲಸವು ಒಂದು ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ದಿಘಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಹಾರ ಮತ್ತು ಅದರ ಪಕ್ಕದ ಜಾರ್ಖಂಡ್‌ನ ಮೇಲೆ ಯಸ್ ಚಂಡಮಾರುತ ಇಂದು ಬೆಳಗಿನ ಜಾವ ಬಿಹಾರದ ಪಕ್ಕದ ಪೂರ್ವ ಉತ್ತರ ಪ್ರದೇಶದಲ್ಲಿ ಪ್ರಭಾವ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಸಮಗೊಂಡಿದೆ. ಅವುಗಳ ತೆರವು ಕಾರ್ಯವೂ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಪ್ರಧಾನಿ ಮೋದಿ ಭೇಟಿ: ಯಸ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆಯನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಪಶ್ಚಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಲೈಕುಂಡ ವಾಯುನೆಲೆಯಲ್ಲಿ ಬರಮಾಡಿಕೊಳ್ಳಲಿದ್ದಾರೆ. ಚಂಡಮಾರುತದಿಂದ ಆಗಿರುವ ಹಾನಿ ಬಗ್ಗೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚರ್ಚೆ ನಡೆಸಲಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ಇಂದು ರಾಜ್ಯದಲ್ಲಿ ಚಂಡಮಾರುತದಿಂದ ಆಗಿರುವ ಹಾನಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ನಂತರ ಪ್ರಧಾನಿಯವರು ಒಡಿಶಾಕ್ಕೆ ತೆರಳಲಿದ್ದು ಅಲ್ಲಿಯೂ ಯಸ್‌ ಚಂಡಮಾರುತದ ಹಾನಿಯ ಬಗ್ಗೆ ವಿವರಗಳನ್ನು ಪಡೆದುಕೊಳ್ಳಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *