ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಪ್ರತಿಭಟಿಸಿದ ಕಾರ್ಮಿಕರು

ಕುಂದಾಪುರ: ದೇಶದ ಹತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ದೇಶದ ಪರಿಸ್ಥಿತಿ ಗಮನಿಸಿ ಜುಲೈ -09 ಕ್ಕೆ ಮುಂದೂಡಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ಕೇಂದ್ರ

ಅವರು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆ ರದ್ದತಿ ಹಾಗೂ ನೂತನ ಕಾರ್ಮಿಕ ಸಂಹಿತೆ ವಿರುದ್ಧ ಸಂಹಿತೆ ದಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ದೇಶದ ಕಾರ್ಮಿಕ ವರ್ಗ ಕಷ್ಟಪಟ್ಟು ಗಳಿಸಿದ ಕಾರ್ಮಿಕರ ಕಾನೂನು ಬಂಡವಾಳಗಾರರ ಪಾದದಡಿಯಲ್ಲಿಟ್ಟು ನವಗುಲಾಮಗಿರಿಗೆ ತಳ್ಳುವ ಸಂಹಿತೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿತ: ಅಂಕಿ-ಅಂಶ

ನಾಲ್ಕು ಕೇಂದ್ರದ ಸಂಹಿತೆ ಪ್ರತಿಗಳನ್ನು ಕಾರ್ಮಿಕ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ ಸಂಘದ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ವಿಜೇಂದ್ರ ಕೋಣಿ, ಸುಧೀರ್ ಕುಮಾರ್, ಶಶಿಕಾಂತ್ ಎಸ್, ರಾಘವೇಂದ್ರ ಡಿ, ಮೊದಲಾದವರಿದ್ದರು.

ಹಂಚು ಕಾರ್ಖಾನೆಗಳ ಗೇಟ್ ಮೀಟಿಂಗ್ ನಲ್ಲಿ ಸಂಹಿತೆ ದಹನ:

ಕೇಂದ್ರ ಸರ್ಕಾರದ ನೂತನ ಸಂಹಿತೆಗಳು ವೇತನ ಪಾವತಿ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಬೋನಸ್ ಪಾವತಿ ಕಾಯಿದೆ,ಸಮಾನ ಸಂಭಾವನೆ ಕಾಯ್ದೆಯನ್ನು 2019 ರ ನೂತನ ಸಂಹಿತೆ ರದ್ದುಗೊಳಿಸುತ್ತದೆ ಹಾಗೂ ಟ್ರೇಡ್ ಯೂನಿಯನ್ಸ್ ಕಾಯಿದೆ, ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ಕಾಯಿದೆ ಮತ್ತು ಕೈಗಾರಿಕಾ ವಿವಾದಗಳ ಕಾಯಿದೆಗಳನ್ನು 2020 ರಲ್ಲಿ ತಂದ ನೂತನ ಸಂಹಿತೆ ರದ್ದುಗೊಳಿಸುತ್ತದೆ ಇದು ಕಾರ್ಮಿಕರಿಗೆ ಕಾನೂನಿನ ರಕ್ಷಣೆ ಇಲ್ಲದಂತೆ ಮಾಡುತ್ತದೆ ಎಂದು ಹಂಚು ಕಾರ್ಮಿಕರು ಪ್ರತಿಗಳನ್ನು ದಹಿಸಿದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ 158|‌ ಹಲವು ಸಿನಿಮಾಗಳ ಪಕ್ಷಿನೋಟ |ಮ. ಶ್ರೀ. ಮುರಳಿಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *