ನವದೆಹಲಿ: ಬಿ.ಎಸ್.ಎಫ್. (ಗಡಿ ಭದ್ರತಾ ಪಡೆ)ನ ವ್ಯಾಪ್ತಿ ಪ್ರದೇಶವನ್ನು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಲ್ಲಿ ಅಂತಾರಾಷ್ಟ್ರೀಯ ಗಡಿಗಳೊಳಗೆ ಈಗಿರುವ 15 ಕಿ.ಮೀ. ನಿಂದ 50 ಕಿ.ಮೀ. ವರೆಗೆ ವಿಸ್ತರಿಸುವ ಕೇಂದ್ರ ಸರಕಾರದ ನಿರ್ಧಾರ ರಾಜ್ಯಗಳ ಹಕ್ಕುಗಳ ಮತ್ತು ಒಕ್ಕೂಟ ನೀತಿಯೊಳಕ್ಕೆ ಮಾಡಿರುವ ಅತಿಕ್ರಮಣ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.
ರಾಜ್ಯಗಳೊಡನೆ ಸಮಾಲೋಚನೆ ನಡೆಸದೆಯೇ ಕೇಂದ್ರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಪೊಲೀಸ್ ವ್ಯವಹಾರ ಮತ್ತು ಕಾನೂನು-ವ್ಯವಸ್ಥೆ ರಾಜ್ಯ ಪಟ್ಟಿಯಲ್ಲಿರುವ ಒಂದು ವಿಷಯವಾಗಿದ್ದು, ಈ ನಿರ್ಧಾರ ನಮ್ಮ ಸಂವಿಧಾನದ ಒಂದು ಮೂಲ ಲಕ್ಷಣವಾದ ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತದೆ ಎಂದಿರುವ ಸಿಪಿಐ(ಎಂ) ಇದನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.