ನವದೆಹಲಿ : ತಾನು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಭಾರತ ತೊರೆಯುವುದಿಲ್ಲ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹ ಸಂಸ್ಥೆಗಳು ವಂಚನೆ ಎಸಗಿರುವ ಆರೋಪ ಕುರಿತಂತೆ ನಡೆಯುತ್ತಿರುವ ತನಿಖೆಗೆ ಸಹಕರಿಸುತ್ತೇನೆ ಎಂದು ಉದ್ಯಮಿ ಅನಿಲ್ ಅಂಬಾನಿ ಅವರು ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ನೀಡಿದ್ದಾರೆ. [ಇಎಎಸ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] ಅನುಮತಿ
ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಅದರ ಸಮೂಹ ಸಂಸ್ಥೆಗಳು ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಇ ಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ. ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಇ ಎ ಎಸ್ ಶರ್ಮಾ ಅವರು ವಂಚನೆ ಸಂಬಂಧ ಪಿಐಎಲ್ ಸಲ್ಲಿಸಿದ್ದರು.
ತಾನು ಜುಲೈ 2025ರಿಂದ ಭಾರತ ತೊರೆದಿಲ್ಲ ಮತ್ತು ಅಗತ್ಯ ಬಂದರೆ ವಿದೇಶ ಪ್ರಯಾಣಕ್ಕೂ ಮುನ್ನ ನ್ಯಾಯಾಲಯದ ಅನುಮತಿ ಪಡೆಯುವುದಾಗಿ ಅನಿಲ್ ಅಂಬಾನಿ ತಿಳಿಸಿದ್ದಾರೆ. ಕಂಪನಿಗಳಲ್ಲಿ ತಾನು ಕಾರ್ಯನಿರ್ವಹಣೇತರ ಜವಾಬ್ದಾರಿಯನ್ನಷ್ಟೇ ನಿರ್ವಹಿಸುತ್ತಿದ್ದು ದೈನಂದಿನ ನಿರ್ವಹಣೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರೆದಿದೆ.
ಇದನ್ನೂ ಓದಿ : ಶಿವಾಜಿ ಯಾರು? ಜನತೆಯ ನಿಜ ನಾಯಕ
ಶರ್ಮಾ ಅವರ ದೂರಿನ ಪ್ರಕಾರ ಆರ್‌ಕಾಂ ಮತ್ತು ಅದರ ಅಂಗಸಂಸ್ಥೆಗಳಾದ ರಿಲಯನ್ಸ್ ಇನ್‌ಫ್ರಾಟೆಲ್ ಹಾಗೂ ರಿಲಯನ್ಸ್ ಟೆಲಿಕಾಂ, 2013ರಿಂದ 2017ರ ಅವಧಿಯಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ₹31,580 ಕೋಟಿ ಸಾಲ ಪಡೆದಿದ್ದವು. ಎಸ್‌ಬಿಐ ನೇಮಿಸಿದ್ದ ವಿಶೇಷ ಲೆಕ್ಕಪರಿಶೋಧನೆಯಿಂದ ನಿಧಿಗಳ ಭಾರೀ ದುರುಪಯೋಗ, ಸಂಬಂಧವಿರದ ಸಾಲಗಳ ಮರುಪಾವತಿ, ಸಂಬಂಧಿತ ಪಕ್ಷಕಾರರಿಗೆ ಹಣ ವರ್ಗಾವಣೆ, ಆವರ್ತನೀಯ ವಹಿವಾಟಿನ ಮೂಲಕ ಸಾಲ ಪಡೆದಿರುವುದನ್ನು ಶಾಶ್ವತವಾಗಿ ಮುಚ್ಚಿಹಾಕಿರುವುದು ಸೇರಿದಂತೆ ಗಂಭೀರ ಅಕ್ರಮಗಳು ಪತ್ತೆಯಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ದಲ್ಲದೆ, ವಿದೇಶಗಳಲ್ಲಿ ಹಣ ದುರ್ಬಳಕೆ ಮತ್ತು ಅಂತಾರಾಷ್ಟ್ರೀಯ ವಹಿವಾಟುಗಳ ಮೂಲಕ ಫೆಮಾ ಮತ್ತು ಪಿಎಂಎಲ್‌ಎ ಕಾಯಿದೆಯ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮತ್ತು ನಿಯಂತ್ರಕ ಸಂಸ್ಥೆಗಳ ಪಾತ್ರವನ್ನು ತನಿಖಾ ಸಂಸ್ಥೆಗಳು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ ಎಂದು ಅವರು ದೂರಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಸಾರ್ವಜನಿಕ ಹಣ ಒಳಗೊಂಡಿರುವ ಈ ಪ್ರಕರಣದಲ್ಲಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಲು ನ್ಯಾಯಾಲಯದ ಮೇಲ್ವಿಚಾರಣೆ ಅಗತ್ಯವೆಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
ಫೆಬ್ರವರಿ 4ರಂದು ಸುಪ್ರೀಂ ಕೋರ್ಟ್, ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ಇ ಡಿ ನಿರ್ದೇಶಿಸಿದ್ದು, ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರೆ ಅದನ್ನೂ ಪರಿಶೀಲಿಸುವಂತೆ ಸಿಬಿಐಗೆ ಸೂಚಿಸಿತ್ತು.
ಇದನ್ನೂ ನೋಡಿ : “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್ | ಯು.ಎಸ್. ಸಾಮ್ರಾಜ್ಯಶಾಹಿ Janashakthi Media
