ಬೆಂಗಳೂರು: ಎಂ. ಜಿ. ಹೆಗಡೆ ಅವರ ಹೊಸ ಕೃತಿ “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?” ಪುಸ್ತಕ ಬಿಡುಗಡೆ ಸಮಾರಂಭವು ಫೆಬ್ರವರಿ 22ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ವಿನೋಭಾ ಕೇಂದ್ರ, ಗಾಂಧಿ ಭವನದಲ್ಲಿ ನಡೆಯಲಿದೆ. ಭಾರತ
ಕಾರ್ಯಕ್ರಮದಲ್ಲಿ ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಹಿರಿಯ ವಕೀಲರಾದ ವಿ. ಎಸ್. ಉಗ್ರಪ್ಪ ಅವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: ಬಜೆಟ್‌ನ ವಿಕೃತ ಕಾರ್ಯತಂತ್ರ-ಜನರ ಪರಿಸ್ಥಿತಿಗಳು ಇನ್ನಷ್ಟು ಹದಗೆಡಲಿವೆ
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಬಿ. ಎಂ. ಹನೀಫ್, ಬೆಂಗಳೂರು ಮೂಲದ ಶಿವಸುಂದರ, ಸಿನಿಮಾ ನಿರ್ದೇಶಕ ಸುಧಾಕರ ಬನ್ನಂಜೆ ಹಾಗೂ ಕ್ರಿಯಾ ಮಾಧ್ಯಮ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ವಿಮಲಾ ಕೆ. ಎಸ್. ಭಾಗವಹಿಸಲಿದ್ದಾರೆ.
ಎಂ. ಜಿ. ಹೆಗಡೆ ಗೆಳೆಯರ ಬಳಗ, ಬೆಂಗಳೂರು ಇದರ ಆಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ನ್ಯಾಯವಾದಿ ಸ್ವಯಂಪ್ರಕಾಶ ಭಟ್ ಪರವಾಗಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ.
ಇದನ್ನೂ ನೋಡಿ: “ಪಶುಗಳು ಮೇವು ತಿನ್ನುವುದಿಲ್ಲವೇ? ಕಾರಣಗಳೇನು?” | ಡಾ. ಎನ್. ಬಿ ಶ್ರೀಧರ Janashakthi Media
