ನವದೆಹಲಿ: ಸೇವೆಗಳ ಮೇಲಿನ ನಿಯಂತ್ರಣ ಕುರಿತಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವೆ ನಡೆಯುತ್ತಿರುವ ತೀವ್ರ ತಿಕ್ಕಾಟದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದ ವಿಸ್ತರಣೆಯೇ ಆಗಿರುತ್ತವೆ. ಹೀಗಾಗಿ ಅವುಗಳ ಆಡಳಿತ ತನ್ನ ಕೈಯಲ್ಲಿ ಇರಬೇಕಾಗುತ್ತದೆ ಎಂದು ಪ್ರತಿಪಾದಿಸುವುದು ಎಷ್ಟು ಸರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ದೆಹಲಿಯು ರಾಷ್ಟ್ರ ರಾಜಧಾನಿಯಾಗಿ ವಿಶಿಷ್ಟ ಮಾನ್ಯತೆಯನ್ನು ಹೊಂದಿದೆ ಮತ್ತು ಎಲ್ಲ ರಾಜ್ಯಗಳ ನಾಗರಿಕರೂ ‘ತಮ್ಮದು’ ಎಂಬ ಭಾವನೆಯನ್ನು ಹೊಂದಿರುತ್ತಾರೆ ಎಂದು ಕೇಂದ್ರದ ಪರ ಹಾಜರಿದ್ದ ವಕೀಲರಿಗೆ ತಿಳಿಸಿದರು.
ಇದನ್ನು ಓದಿ: ದೆಹಲಿ ಸರ್ಕಾರ-ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸಮರ: 5 ಸದಸ್ಯರ ನ್ಯಾಯಪೀಠ ವಿಚಾರಣೆಗೆ ಸುಪ್ರೀಂ ಚಿಂತನೆ
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನು ಒಳಗೊಂಡ ನ್ಯಾಯಪೀಠ, ಇಡೀ ದಿನ ವಿಚಾರಣೆ ನಡೆಸಿದೆ. ದೆಹಲಿ ಸರ್ಕಾರಕ್ಕೆ ಕಾನೂನುಗಳನ್ನು ರೂಪಿಸುವ ಸಾಮರ್ಥ್ಯ ಇಲ್ಲದಿರುವ ವಿಷಯಗಳ ಕುರಿತಾದ ವಿಚಾರಣೆ ವೇಳೆ, ರಾಷ್ಟ್ರ ರಾಜಧಾನಿಯಲ್ಲಿನ ಸೇವೆಗಳ ನಿಯಂತ್ರಣದ ಮೇಲಿನ ಕಾನೂನಾತ್ಮಕ ಹಾಗೂ ಸಾಂವಿಧಾನಿಕ ಸ್ಥಿತಿಗಳ ಕುರಿತು ಪ್ರಶ್ನೆಗಳ ಬಗ್ಗೆಯೂ ಚರ್ಚೆ ನಡೆದಿದೆ.
“ರಾಜ್ಯಗಳು ಹಾಗೂ ಸಹವರ್ತಿ ಪಟ್ಟಿಯ (ಏಳನೇ ಪರಿಚ್ಛೇದ) ದಾಖಲಾತಿಗಳ ಮೇಲೆ ಶಾಸನ ರೂಪಿಸುವ ಅಧಿಕಾರ ಸಂಸತ್ತಿಗೆ ಇದೆ. ದೆಹಲಿ ವಿಧಾನಸಭೆಯು ರಾಜ್ಯ ಪಟ್ಟಿಯಲ್ಲಿರುವ 1, 2, 18, 64, 65 (ಸಾರ್ವಜನಿಕ ವ್ಯವಸ್ಥೆ, ಪೊಲೀಸ್ ಮತ್ತು ಭೂಮಿ ಇತ್ಯಾದಿ) ಅಂಶಗಳನ್ನು ನಿಯಂತ್ರಿಸುವ ಅಧಿಕಾರ ಹೊಂದಿಲ್ಲ” ಎಂದು ಪೀಠ ಹೇಳಿತು.
ಇದನ್ನು ಓದಿ: ದೆಹಲಿ ಆಡಳಿತಾತ್ಮಕ ಸೇವೆಗಳ ವಿವಾದ; ಸಂವಿಧಾನ ಪೀಠಕ್ಕೆ ವರ್ಗಾವಣೆ
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದ ವಿಸ್ತರಣೆಯಾಗಿದೆ. ಕೇಂದ್ರಾಡಳಿತ ಪ್ರದೇಶದ ಭೌಗೋಳಿಕ ಪ್ರದೇಶವನ್ನು ಸೃಷ್ಟಿಸುವುದರ ಮೂಲ ಉದ್ದೇಶವೇ ಕೇಂದ್ರವು ಆ ಪ್ರದೇಶದ ಆಡಳಿತ ನಡೆಸಲು ಬಯಸಿದೆ ಎಂದು ವಾದಿಸಿದರು.
ಹಾಗಾದರೆ ದೆಹಲಿ ಚುನಾಯಿತ ಸರ್ಕಾರ ಹೊಂದುವುದರ ಉದ್ದೇಶವೇನಿದೆ? ಎಲ್ಲವೂ ಕೇಂದ್ರ ಸರ್ಕಾರದಿಂದ ನಡೆಯುವುದಾದರೆ, ಅಲ್ಲಿ ಸರ್ಕಾರ ಇರುವುದರ ಅಗತ್ಯವೇನು?” ಎಂದು ಮೌಖಿಕವಾಗಿ ನ್ಯಾಯಪೀಠ ಪ್ರಶ್ನಿಸಿತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ