ಸಹಕಾರಿ ಸಚಿವಾಲಯ ರಚನೆ ಫೆಡರಲ್ ಹಕ್ಕುಗಳನ್ನು ಉಲ್ಲಂಘಿಸುವ ಪ್ರಯತ್ನವಾಗಿದೆ – ಸೀತಾರಾಮ್ ಯೆಚೂರಿ

ನವದೆಹಲಿ : ಸಹಕಾರ ಸಚಿವಾಲಯದ ರಚನೆಯು ರಾಜ್ಯ ಸರ್ಕಾರಗಳ ಫೆಡರಲ್ ಹಕ್ಕುಗಳನ್ನು ಉಲ್ಲಂಘಿಸುವ ಪ್ರಯತ್ನವಾಗಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ನರೇಂದ್ರ ಮೋದಿ ಸರ್ಕಾರವನ್ನು ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ, ಸೀತಾರಾಮ್ ಯೆಚೂರಿ, ” ಈ ನಿರ್ಧಾರಕ್ಕೆ ಮೊದಲ ಆಕ್ಷೇಪವೆಂದರೆ, ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದ ಸಂವಿಧಾನದ ಮೂಲ ರಚನೆಯಾಗಿದೆ.”

“ಸಂವಿಧಾನದ ಏಳನೇ ವೇಳಾಪಟ್ಟಿ ಸಹಕಾರಿ ಸಂಘಗಳು ರಾಜ್ಯ ವಿಷಯವಾಗಿದೆ ಎಂದು ಹೇಳುತ್ತದೆ. ಆದ್ದರಿಂದ, ಆ ಹಕ್ಕುಗಳನ್ನು ಅತಿಕ್ರಮಣ ಮಾಡುವುದರ ಹಿಂದೆ ಸರ್ಕಾರದ ಉದ್ದೇಶವೇನು? ಸರ್ಕಾರ ಏಕೆ ಹಾಗೆ ಮಾಡುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಈಗಾಗಲೇ ಲೂಟಿ ಮಾಡಿದ್ದಾರೆ. ದೇಶವನ್ನು ತೊರೆದ ಜನರಿಗೆ ಮೋದಿ ಸರ್ಕಾರ ಭಾರಿ ಸಾಲ ನೀಡಿದೆ ಮತ್ತು ಆ ಹಣವೆಲ್ಲವೂ ಜನರ ಹಣವಾಗಿದೆ. ಲೂಟಿ ಮಾಡಲು ಇರುವುದು ಇನ್ನು ಸಹಕಾರಿ ಬ್ಯಾಮಕುಗಳು ಮಾತ್ರ. ಅದೊಂದೇ ಇವರಿಗೆ ಮಾರ್ಗ ಎಂದು ಆರೋಪಿಸಿದ್ದಾರೆ.

ಈ ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಜಾರಿಗೆ ತಂದರೆ ನಾವು ವಿರೋಧಿಸುತ್ತೇವೆ. ಇದರ ವಿರುದ‍್ಧವಾಗಿ ನಿಲ್ಲಲು ಎಲ್ಲಾ ವಿರೋಧ ಪಕ್ಷಗಳಿಗೆ ಕರೆ ನೀಡುತ್ತಿದ್ದೇವೆ. ಇದು ಸಹಕಾರಿ ಫೆಡರಲಿಸಂ ವಿರುದ್ಧ ಮತ್ತು ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ”. ರಾಜ್ಯಗಳ ಹಕ್ಕುಗಳು ಮತ್ತು ಸಹಕಾರಿ ಫೆಡರಲಿಸಂ ಮೇಲಿನ ದಾಳಿಯ ವಿರುದ್ಧ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.

ನೂತನ ಸಚಿವ ಸಂಪುಟದ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು, “ಸರ್ಕಾರವನ್ನು ಹೇಗೆ ನಡೆಸಬೇಕೆಂಬುದು ಅವರಿಗೆ ಗೊತ್ತಿದೆ. ಪ್ರಧಾನಿಯವರು ತಮ್ಮ ಸಚಿವ ಸಂಪುಟದಲ್ಲಿ ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೇ, ಪ್ರಧಾನಿ ಮೋದಿಯವರು ನೀಡಿದ ಮಹಿಳಾ ಮೀಸಲಾತಿ ಮಸೂದೆಯ ಭರವಸೆ ಇನ್ನೂ ಭರವಸೆಯಾಗಿಯೇ ಇದೆ ಎಂದು ವ್ಯಂಗ್ಯವಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *