ಸಗಟು ಹಣದುಬ್ಬರ 13 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆ

ನವದೆಹಲಿ: ಭಾರತದ ಸಗಟು ಬೆಲೆಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ 12.54% ರಿಂದ ನವೆಂಬರ್‌ನಲ್ಲಿ 14.23% ನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಖನಿಜ, ಇಂಧನ ಮತ್ತು ವಿದ್ಯುತ್‌ ಶಕ್ತಿ ಮತ್ತು ತೈಲದ ಬೆಲೆಗಳ ಸತತ ಏರಿಕೆಯಿಂದಾಗಿ ಪ್ರಾಥಮಿಕ ಆಹಾರ ಹಣದುಬ್ಬರವು 13 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಭಾರತವು ಸತತ ಎಂಟನೇ ತಿಂಗಳಿನಲ್ಲಿ ಎರಡಂಕಿಯ ಹಣದುಬ್ಬರ ತಲುಪಿದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಇಂಧನದ ದರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ತೆರಿಗೆಗಳನ್ನು ಕಡಿತ ಮಾಡಿದ್ದರೂ, ಸರಕು ಸಾಗಣೆ ವೆಚ್ಚಗಳೊಂದಿಗೆ ತಾಳೆ ಮಾಡಿದಾಗ ಉತ್ಪಾದಕರಿಗೆ ದೊಡ್ಡ ಪರಿಹಾರವೇನೂ ನೀಡಲಿಲ್ಲ ಎಂಬುದು ಸಾಬೀತಾಗಿದೆ.

ಇಂಧನ ಮತ್ತು ವಿದ್ಯುತ್ ಮೇಲಿನ ಹಣದುಬ್ಬರವು ನವೆಂಬರ್‌ನಲ್ಲಿ ಶೇ.40% ರಷ್ಟು ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಶೇ.29.5% ರಷ್ಟು ದಾಖಲಾಗಿದ್ದ ಏರಿಕೆಯು ಎರಡು ತಿಂಗಳುಗಳಲ್ಲಿ ತೀವ್ರವಾಗಿ ದರ ಏರಿಕೆಯನ್ನು ಕಂಡಿದೆ.  ಇಂಧನದ ಬೆಲೆಗಗಳ ಏರಿಕೆಯಿಂದಾಗಿಯೂ ದೊಡ್ಡ ಜನವಿಭಾಗಕ್ಕೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ.

ಅಕ್ಟೋಬರ್‌ನಲ್ಲಿ ಹಣದುಬ್ಬರವು ಶೇ.12.04 ರಿಂದ ಶೇ.11.92ಕ್ಕೆ ಇಳಿಕೆ ಕಂಡಿದ್ದರೂ ಸಹ ಉತ್ಪಾದನಾ ಘಟಕಗಳಲ್ಲಿನ ಕನಿಷ್ಠ ಮಟ್ಟಕ್ಕೆ ಮಾತ್ರ ಕಡಿತಗೊಂಡಿದೆ. ಆದರೆ, ಸಗಟು ಆಹಾರ ಸೂಚ್ಯಂಕದ ಪ್ರಕಾರ ಆಹಾರ ಹಣದುಬ್ಬರವು ನವೆಂಬರ್‌ನಲ್ಲಿ ಶೇ.3.06 ರಿಂದ ಶೇ.6.7 ಕ್ಕೆ ದ್ವಿಗುಣಗೊಂಡಿದೆ. ದಿನಬಳಕೆಯ ಸಾಮಾನ್ಯ ವಸ್ತುಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ.5.2 ರಿಂದ ಶೇ.10.34ಕ್ಕೆ ದ್ವಿಗುಣಗೊಂಡಿದೆ.

ನವೆಂಬರ್ 2021ರಲ್ಲಿ ಶೇ.14.2 ರಷ್ಟು ದಾಖಲೆಯ ಹಣದುಬ್ಬರವು ಆಘಾತಕಾರಿಯಾಗಿದೆ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದ್ದಾರೆ.  ನವೆಂಬರ್ 2020ರಲ್ಲಿ 2.29% ರಷ್ಟು ಇದ್ದ ಹಣದುಬ್ಬರವು ಈ ಬಾರಿ ಅಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಡಬ್ಲ್ಯುಪಿಐ ಮಾನದಂಡಗಳು ತಿಳಿಸುತ್ತವೆ. ಅತ್ಯಧಿಕ ಸಾಮಾನ್ಯ ವರ್ಗಗಳ ಜೀವನಮಟ್ಟದ ಹಣದುಬ್ಬರ ದರವನ್ನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಠಿಣ ಪರಿಸ್ಥಿತಿಗೆ ನೂಕಲ್ಪಟ್ಟಿದೆ ಎಂದು ವಿವರಿಸಲಾಗಿದೆ.

ದಿನಬಳಕೆಯ ತರಕಾರಿ ಬೆಲೆಗಳಲ್ಲಿನ ಅಧಿಕ ಪ್ರಮಾಣದ ಏರಿಕೆಕಂಡಿದೆ. ಅಲ್ಲದೆ, ಮೊಟ್ಟೆ, ಮಾಂಸ ಮತ್ತು ಮೀನು ಮತ್ತು ಮಸಾಲೆ ಪದಾರ್ಥಗಳ ಬೆಲೆಗಳ ಏರಿಕೆಯಿಂದಾಗಿ ಹಣದುಬ್ಬರ ಅಧಿಕಗೊಂಡಿದೆ. ಸಾಮಾನ್ಯ ಆಹಾರ ಹಣದುಬ್ಬರವು  ನವೆಂಬರ್ 2021ರಲ್ಲಿ 13 ತಿಂಗಳ ಗರಿಷ್ಠ ಶೇ.4.9ಕ್ಕೆ ಏರಿಕೆ ಕಂಡಿದೆ.

ಆಹಾರ ಪದಾರ್ಥಗಳಾದ ಮೊಟ್ಟೆ, ಮಾಂಸ ಮತ್ತು ಮೀನಿನ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ. 1.98 ರಿಂದ ನವೆಂಬರ್‌ನಲ್ಲಿ ಶೇ. 9.66ಕ್ಕೆ ಏರಿಕೆ ಕಂಡಿದೆ. ಹಣ್ಣುಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ.8.2 ರಿಂದ ಶೇ.15.5 ದಾಖಲಾಗಿದೆ. ಗೋಧಿ ಬೆಲೆಗಳು ಅಕ್ಟೋಬರ್‌ನಲ್ಲಿ ಶೇ.8.14 ರಿಂದ ಶೇ.10.14ರಷ್ಟು ಏರಿಕೆ ಕಂಡಿದೆ. ತರಕಾರಿ ಬೆಲೆಗಳಲ್ಲಿಯೂ ಕನಿಷ್ಠ ಐದು ತಿಂಗಳ ಋಣಾತ್ಮಕ ಹಣದುಬ್ಬರದ ನಂತರ ಮತ್ತಷ್ಟು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ನವೆಂಬರ್‌ನಲ್ಲಿ ಶೇ.3.91ಕ್ಕೆ ಹಣದುಬ್ಬರ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *