6 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಾಮಾಜಿಕ ಜಾಲತಾಣ! – ಚಟಪಟಿಸಿದವರೆಷ್ಟು ಜನ ಗೊತ್ತೆ?

ನವದೆಹಲಿ : ಪ್ರಮುಖ ದಿನಬಳಕೆಯ ಸಾಮಾಜಿಕ ತಾಣಗಳಾದ ವಾಟ್ಸಪ್‌ ಮೆಸೆಂಜರ್‌, ಫೇಸ್‌ ಬುಕ್‌, ಇನ್ಸ್ಟಾ ಗ್ರಾಂ, ಫೇಸ್ಬುಕ್‌ ಮೆಸೆಂಜರ್‌ ಸೋಮವಾರ ರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.

ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡಿರುವ ಕುರಿತು ಫೇಸ್ಬುಕ್‌ ಸಂಸ್ಥೆಯು ಅಧಿಕೃತ ಮಾಹಿತಿ ನೀಡಿದ್ದು, ನಿಮ್ಮ ತಾಳ್ಮೆಗಾಗಿ ಧನ್ಯವಾದ. ಶೀಘ್ರವೇ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಈ ಹಿಂದೆಯೂ ಅನೇಕ ಬಾರಿ ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡು ಅಲ್ಪಸಮಯದಲ್ಲೇ ಮರುಸ್ಥಾಪನೆಗೊಳ್ಳುತ್ತಿತ್ತು.

ಫೇಸ್‌ಬುಕ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಂ ಸೋಮವಾರ ರಾತ್ರಿ 9:00 ಗಂಟೆಯ ಆಸುಪಾಸಿನಲ್ಲಿ ಸಂಪರ್ಕಕ್ಕೆ ಸಿಗುತ್ತಿಲ್ಲವೆಂಬ ಸಂದೇಶಗಳನ್ನು ಬಳಕೆದಾರರು ಟ್ವಿಟ್ಟರ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂರು ಜಾಲತಾಣಗಳು ಫೇಸ್‌ಬುಕ್ ಒಡೆತನಕ್ಕೆ ಸೇರಿದ್ದಾಗಿದ್ದು, ತ್ವರಿತ ಸಂದೇಶರವಾನೆ, ಫೋಟೋ ಶೇರಿಂಗ್ ಹಾಗೂ ಸೋಶಿಯಲ್ ನೆಟ್‌ವರ್ಕಿಂಗ್‌ಗಾಗಿ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಇನ್ನು Downdetector.com, ವೆಬ್ ಸೇವೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್, ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡುತ್ತಿದ್ದಾರೆ ಎಂದು ಹೇಳಿದೆ. ಪೋರ್ಟಲ್ ಪ್ರಕಾರ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಸಂಬಂಧಿಸಿದ 20,000 ಕ್ಕೂ ಹೆಚ್ಚು ದೂರುಗಳು ವರದಿಯಾಗಿವೆ.

ವಾಟ್ಸಪ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಟೆಕ್ಟರ್ ಪ್ರಕಾರ, ಶೇ. 40 ರಷ್ಟು ಬಳಕೆದಾರರಿಗೆ ಆಪ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ ಶೇ. 30 ರಷ್ಟು ಜನರಿಗೆ ಸಂದೇಶ ಕಳುಹಿಸಲು ತೊಂದರೆಯಾಗಿದೆ ಮತ್ತು ಶೇ. 22 ರಷ್ಟು ಜನರು ವೆಬ್ ಆವೃತ್ತಿಯಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆ.

ಇದೀಗ 6 ಗಂಟೆ ನಂತರ ಫೇಸ್ ಬುಕ್, ವ್ಯಾಟ್ಸಪ್ ಮತ್ತು ಇನ್ ಸ್ಟಾಗ್ರಾಂ ಆಯಪ್ ಗಳ ಸೇವೆಗಳು ಪುನಾರಂಭಗೊಂಡಿದ್ದು, ಗ್ರಾಹಕರು ನಿಟ್ಟುಸಿರುವ ಬಿಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *