ವಸಂತರಾಜ ಎನ್.ಕೆ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಈ ಕುರಿತಾಗಿ ವಿವರವಾದ ಮಾಹಿತಿಯುಳ್ಳ ಲೇಖನವನ್ನು ಓದುಗರಿಗೆ ನೀಡಲಾಗುತ್ತಿದೆ. ಭಾಗ 1 ರಲ್ಲಿ ಸಾಮಾನ್ಯ ಚುನಾವಣಾ ಮಾಹಿತಿಗಳನ್ನು ನೋಡಿದ್ದೇವು. ಈ ಭಾಗದಲ್ಲಿ ಬಿಜೆಪಿ ಸೋಲಲು ಕಾರಣವಾದ ಅಂಶಗಳ ಬಗ್ಗೆ ತಿಳಿಯೋಣ
ಬಿಜೆಪಿಯ ಸೋಲಿಗೆ ಕಾರಣಗಳು ಸಾಕಷ್ಟು ಸ್ಪಷ್ಟವಾಗಿವೆ. ಒಪಿನಿಯನ್ ಮತ್ತು ಎಕ್ಸಿಟ್ ಪೋಲ್ ಗಳ ಕೆಲವು ಸಮೀಕ್ಷೆಗಳು ಸಂಗ್ರಹಿಸಿದ ವಿವರವಾದ ಪ್ರತಿಕ್ರಿಯೆಗಳು ಮತ್ತು ಮತದಾರರ ವಿವರಗಳಿಂದ ಇವುಗಳನ್ನು ದೃಢೀಕರಿಸಿವೆ. ಚುನಾವಣೆಯ ಪ್ರಮುಖ ಅಂಕಿಅಂಶಗಳು ಸಹ ಅವುಗಳನ್ನು ಖಚಿತಪಡಿಸುತ್ತವೆ.
ಬಿಜೆಪಿ ಸರ್ಕಾರಗಳ ವಿರುದ್ಧ (ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ) ಅಭೂತಪೂರ್ವ ಬೃಹತ್ ಆಡಳಿತ-ವಿರೋಧಿ ಅಲೆ ಇತ್ತು. ಅದಕ್ಕೆ ಕಾರಣಗಳು ಹಲವು – ‘40% ಸರ್ಕಾರ್’ ಸಂಕೇತಿಸುವ ಅತಿರೇಕದ ಭ್ರಷ್ಟಾಚಾರ; ಕೋವಿಡ್ನಿಂದ ಉಂಟಾದ ಆರೋಗ್ಯ ಮತ್ತು ಆರ್ಥಿಕ ವಿಪತ್ತನ್ನು ನಿಭಾಯಿಸುವಲ್ಲಿ ಸಂಪೂರ್ಣ ವೈಫಲ್ಯ; ಭಾರೀ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಪರಿಹಾರ ಮತ್ತು ತಡೆಕ್ರಮಗಳ ಬದಲಿಗೆ, ಅಸ್ತಿತ್ವದಲ್ಲಿರುವ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸುವುದು ಅಥವಾ ದುರ್ಬಲಗೊಳಿಸುವುದು; ರೈತ-ವಿರೋಧಿ, ಕಾರ್ಮಿಕ-ವಿರೋಧಿ ಮತ್ತು ಜನವಿರೋಧಿ ನೀತಿಗಳ ಕಾನೂನುಗಳ ಕಟು ಜಾರಿ; ರಾಜ್ಯದ ಭಾಷಾ, ಸಾಂಸ್ಕೃತಿಕ ಗುರುತು, ಸ್ವಾಯತ್ತತೆ ಮತ್ತು ಕಾನೂನುಬದ್ಧ ಹಣಕಾಸಿನ ಹಿತಾಸಕ್ತಿಗಳ ಮೇಲೆ ತೀವ್ರವಾದ ದಾಳಿಗಳು. ಇವುಗಳಿಂದ ಜನರು ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಸರ್ಕಾರವನ್ನು ಕಿತ್ತು ಹಾಕಲು ಇದೊಂದೇ ಸಾಕಾಗಿತ್ತು. ಆದಾಗ್ಯೂ, ಹೆಚ್ಚಿನ ಪ್ರದೇಶಗಳಲ್ಲಿ ಬಿಜೆಪಿ ಗಣನೀಯ ಮತಗಳನ್ನು ಕಳೆದುಕೊಂಡಿದೆ, ಅದು ದಕ್ಷಿಣ ಕರ್ನಾಟಕ ಮತ್ತು ಬೆಂಗಳೂರು ಪ್ರದೇಶಗಳಲ್ಲಿನ ಲಾಭದಿಂದ ಮಾಡಿದೆ.
ಕೋಷ್ಟಕ 1 : ಕರ್ನಾಟಕದ ಸ್ಥಾನಗಳು/ಮತಗಳ % ಲೆಕ್ಕಾಚಾರ (2023, 18 ಕ್ಕಿಂತ ಹೆಚ್ಚಿನ ಏರಿಕೆ/ಇಳಿಕೆ)
ಪಕ್ಷ | ಸೀಟುಗಳು (2023) | +ಏರಿಕೆ/
-ಇಳಿಕೆ
|
ಮತಪ್ರಮಾಣ
% (2023) |
+ಏರಿಕೆ/
-ಇಳಿಕೆ
|
ಬಿಜೆಪಿ | 66 | -38 | 36 | -0.35 |
ಕಾಂಗ್ರೆಸ್ | 135 | +55 | 42.9 | +4.74 |
ಜೆಡಿ(ಎಸ್) | 19 | -18 | 13.3 | -5.0 |
ಇತರ | 4 | +1 | 7.8 | +0.4 |
ಕೋಷ್ಟಕ 2 : ಕರ್ನಾಟಕ ಪ್ರದೇಶವಾರು ಮತಗಳು % (2023, 2018 ಕ್ಕಿಂತ ಏರಿಕೆ/ಇಳಿಕೆ)
ಪ್ರದೇಶ | ಕಾಂಗ್ರೆಸ್ | ಬಿಜೆಪಿ | ಜೆಡಿ(ಎಸ್) | |||
ಮತಪ್ರಮಾಣ
% (2023) |
+ಏರಿಕೆ/
-ಇಳಿಕೆ
|
ಮತಪ್ರಮಾಣ
% (2023) |
+ಏರಿಕೆ/
-ಇಳಿಕೆ
|
ಮತಪ್ರಮಾಣ
% (2023) |
+ಏರಿಕೆ/
-ಇಳಿಕೆ
|
|
ಕರಾವಳಿ | 42.4 | +2.3 | 48.5 | -3.1 | 3.8 | -0.2 |
ಹೈದರಾಬಾದ್/
ಕಲ್ಯಾಣ |
46.4 | +4.2 | 35.8 | -3.4 | 10.5 | -0.2 |
ಮುಂಬಯಿ/ಕಿತ್ತೂರು | 44.6 | +5.9 | 39.7 | -4.5 | 5.3 | -2.9 |
ದಕ್ಷಿಣ+ಮಲೆನಾಡು | 40.8 | 6.5 | 25.5 | +3.1 | 26.1 | -8.6 |
ಬೆಂಗಳೂರು ನಗರ | 40.7 | +1.0 | 46.4 | +5.4 | 7.8 | -7.7 |
ಕೋಷ್ಟಕ 3 : ಕರ್ನಾಟಕ ಪ್ರದೇಶವಾರು ಸೀಟುಗಳ ಸಂಖ್ಯೆ (2023, 2018 ಕ್ಕಿಂತ ಏರಿಕೆ/ಇಳಿಕೆ)
ಪ್ರದೇಶ | ಕಾಂಗ್ರೆಸ್ | ಬಿಜೆಪಿ | ಜೆಡಿ(ಎಸ್) | ಪ್ರದೇಶ | ||||
ಸೀಟು (2023) | +ಏರಿಕೆ/
-ಇಳಿಕೆ
|
ಸೀಟು
(2023) |
+ಏರಿಕೆ/
-ಇಳಿಕೆ
|
ಸೀಟು (2023) | +ಏರಿಕೆ/
-ಇಳಿಕೆ
|
ಸೀಟು
(2023) |
+ಏರಿಕೆ/
-ಇಳಿಕೆ |
|
ಕರಾವಳಿ | 6 | +4 | 13 | -4 | 0 | 0 | 0 | 0 |
ಹೈದರಾಬಾದ್/
ಕಲ್ಯಾಣ |
26 | +5 | 10 | -5 | 3 | -1 | 1 | +1 |
ಮುಂಬಯಿ/ಕಿತ್ತೂರು | 44 | +24 | 18 | -23 | 1 | -1 | 1 | 0 |
ದಕ್ಷಿಣ+ಮಲೆನಾಡು | 47 | +26 | 9 | -12 | 15 | -14 | 2 | 0 |
ಬೆಂಗಳೂರು ನಗರ | 12 | -3 | 16 | +5 | 0 | -2 | 0 | 0 |
Total | 135 | +55 | 66 | -38 | 19 | -18 | 4 | +1 |
ಈ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಮತ್ತು ಸಂಘಿ ಗ್ಯಾಂಗ್ ವ್ಯಾಪಕವಾದ ಮತೀಯ ದ್ವೇಷದ ಪ್ರಚಾರ, ಕೋಮು ಹಿಂಸಾಚಾರ ಮತ್ತು ಮತೀಯ ಧ್ರುವೀಕರಣವನ್ನು ಸೃಷ್ಟಿಸಲು ಪ್ರಯತ್ನಿಸಿತು. ದೈನಂದಿನ ಜೀವನದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸಂಪೂರ್ಣ ವೈಫಲ್ಯಗಳ ಜೊತೆಗೆ, ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ನಿರಂತರ ಕೋಮು ಪ್ರಚಾರವು ಜನರಿಗೆ ಸ್ವೀಕಾರಾರ್ಹವಾಗಿರಲಿಲ್ಲ. ಕೋಮು ಧ್ರುವೀಕರಣವನ್ನು ಬಳಸಿಕೊಂಡು ಚುನಾವಣೆ ಎದುರಿಸಲು ಬಯಸಿದಾಗ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನವೆದ್ದಿತ್ತು. ಈ ಅಸಮಧಾನವು ಸೋಲಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಬಿಜೆಪಿ ಸರ್ಕಾರವು ಒಡೆದು ಆಳುವ ಮತ್ತು ಚುನಾವಣಾ ತಂತ್ರವಾಗಿ ಮಾಡಿದ ಮೀಸಲಾತಿ ವ್ಯವಸ್ಥೆಯಲ್ಲಿ ಅವ್ಯವಸ್ಥಿತ ಮತ್ತು ಆತುರದ ರೀತಿಯಲ್ಲಿ ತಂದ ಪ್ರಮುಖ ಬದಲಾವಣೆಗಳು ಮತ್ತು ಇತರ ‘ಸಾಮಾಜಿಕ ಇಂಜಿನಿಯರಿಂಗ್ ಪ್ರಯತ್ನಗಳು ಕೆಲಸ ಮಾಡಲಿಲ್ಲ. ಮಾತ್ರವಲ್ಲ ಆದರೆ ಬಿಜೆಪಿ ವಿರುದ್ಧ ತಿರುಗೇಟು ನೀಡಿದವು. ವಿಶೇಷವಾಗಿ ಪರಿಶಿಷ್ಟ ಜಾತಿಗಳ ‘ಆಂತರಿಕ ಮೀಸಲಾತಿ’, ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸುವುದು ಮತ್ತು ಅದನ್ನು ಲಿಂಗಾಯತ/ಒಕ್ಕಲಿಗರ ನಡುವೆ ಹಂಚುವುದು, ಹೆಚ್ಚಿನ ವಿಭಾಗಗಳ ಜನರನ್ನು ಮನವೊಲಿಸುವ/ತೃಪ್ತಿಗೊಳಿಸುವ ಬದಲು ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತು. ಇದು ಸಮೀಕ್ಷೆಗಳಿಂದ ದೃಢಪಟ್ಟಿದೆ.
ಯಡಿಯೂರಪ್ಪ ಅವರ ಪದಚ್ಯುತಿ ಮತ್ತು ‘ಲಿಂಗಾಯತ ಅಭಿಮಾನ’ ವನ್ನು ಘಾಸಿಗೊಳಿಸಿರುವುದು ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಅನೇಕ ವಿಶ್ಲೇಷಕರು ಉಲ್ಲೇಖಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಮುಂದುವರಿಯಲು ಅವಕಾಶ ನೀಡಿದರೆ ಮತ್ತು ಮುಕ್ತ ಹಸ್ತವನ್ನು ಕೊಟ್ಟಿದ್ದರೆ, ಬಿಜೆಪಿ ಸೋಲುತ್ತಿರಲಿಲ್ಲ ಎಂದು ಈ ಉಲ್ಲೇಖಗಳ ಹಿಂದಿರುವ ಭಾವನೆ. ಆದರೆ ವಾಸ್ತವ ಅದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ರಾಜ್ಯ ಬಿಜೆಪಿಯಲ್ಲಿ ವ್ಯಾಪಕವಾದ ಗುಂಪುಗಾರಿಕೆ, ಯಾವುದೇ ಪ್ರಬಲ ಸ್ಥಳೀಯ ನಾಯಕತ್ವಕ್ಕೆ ಅವಕಾಶ ನೀಡದ ‘ಹೈಕಮಾಂಡ್’ ಹಾಗೂ ಪಕ್ಷ ಮತ್ತು ಸರ್ಕಾರವನ್ನು ನಿಯಂತ್ರಿಸಲು ಆರ್ಎಸ್ಎಸ್ ನಿರಂತರ ಪ್ರಯತ್ನಗಳು ವಾಸ್ತವವಾದ ಮೂಲ ಕಾರಣ. ಇವು ಆರೆಸ್ಸೆಸ್-ಬಿಜೆಪಿ ಸಂಯೋಜನೆಯ ಮೂಲ ಲಕ್ಷಣಗಳಾಗಿವೆ. ಇದೂ ಕೂಡ ದುರಾಡಳಿತ, ಸರ್ಕಾರದ ಕಳಪೆ ಸಾಧನೆಗಳಿಗೆ ಕಾರಣವಾಗಿದ್ದು, ಪಕ್ಷದಲ್ಲಿ ಸಂಘಟನಾತ್ಮಕ ಸಮಸ್ಯೆಗಳನ್ನು ಸೃಷ್ಟಿಸಿ ಸೀಟು ಹಂಚಿಕೆಯಲ್ಲಿ ಗೊಂದಲಕ್ಕೆ ಕಾರಣವಾಯಿತು.
ಆರ್ಎಸ್ಎಸ್-ಬ್ರಾಹ್ಮಣ ಬಣ ಎಂದು ಕರೆಯಲ್ಪಡುವ ಬಿ ಎಲ್ ಸಂತೋಷ್ ಬಣವು ಪ್ರಬಲವಾದ ಲಿಂಗಾಯತ ಬಣದ ಬುಡ ಕತ್ತರಿಸಲು ಬಯಸಿದೆ ಮತ್ತು ಸೀಟು ಹಂಚಿಕೆಯಲ್ಲಿ ‘ಗುಜರಾತ್ ಮಾದರಿ’ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸಿತು. ಹೈಕಮಾಂಡ್ನ ಸಂಪೂರ್ಣ ಜ್ಞಾನ ಮತ್ತು ಆಶೀರ್ವಾದದಿಂದ ಇದನ್ನು ಮಾಡಲಾಗಿದೆ. ವಸ್ತುನಿಷ್ಠವಾಗಿಯೂ ಸಹ ಬಿಜೆಪಿ ತನ್ನ ತಳಹದಿಯನ್ನು ವಿಸ್ತರಿಸಿಕೊಳ್ಳಲು ಒಬ್ಬ (ವಯಸ್ಸಾದ) ನಾಯಕ/ಸಮುದಾಯದ ಮೇಲೆ ಅತಿಯಾದ ಅವಲಂಬನೆಯಿಂದ ಹೊರಬರಬೇಕಾಗಿತ್ತು. ಆದರೆ ಮೇಲೆ ಪಟ್ಟಿ ಮಾಡಲಾದ ಇತರ ಪ್ರಮುಖ ಅಂಶಗಳ ಮತ್ತು ಬಣದ ನಾಯಕರ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಹಿನ್ನೆಲೆಯಲ್ಲಿ ಇದು ‘ಲಿಂಗಾಯತ ಕೋಪ’ಕ್ಕೆ ಕಾರಣವಾಯಿತು. ಕೋಷ್ಟಕ 2 ಮತ್ತು 3 ರಲ್ಲಿ ಕಿತ್ತೂರು+ಮಧ್ಯ ಕರ್ನಾಟಕ ಪ್ರದೇಶದಲ್ಲಿ (ಹೆಚ್ಚಿನ ಲಿಂಗಾಯತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ) ಸ್ಥಾನ/ಮತ ಹಂಚಿಕೆ ಎರಡರಲ್ಲೂ ಬಿಜೆಪಿಯ ಗರಿಷ್ಠ ನಷ್ಟವು ಈ ಅಂಶದಿಂದಾಗಿ ಬಿಜೆಪಿಯು ಭಾರೀ ಪ್ರಮಾಣದಲ್ಲಿ ಸೋತಿದೆ ಎಂದು ಸೂಚಿಸುತ್ತದೆ. ಅನೇಕ ಸಮೀಕ್ಷೆಗಳು ಈ ಅಂಶವನ್ನು ನೇರವಾಗಿ ದೃಢಪಡಿಸಿವೆ. ಆದರೆ ಇದು ತಪ್ಪಿಸಬಹುದಾಗಿದ್ದ ‘ಅಪಘಾತ’ಕ್ಕಿಂತ ಹೆಚ್ಚಾಗಿ ಬಿಜೆಪಿಯ ರಾಜಕೀಯ ವ್ಯೂಹ-ತಂತ್ರಗಾರಿಕೆಯ ಕುರುಡು-ಗಲ್ಲಿಯನ್ನು ಪ್ರತಿನಿಧಿಸುತ್ತದೆ.
ಸೀಟು ಹಂಚಿಕೆಯಲ್ಲಿ ‘ಗುಜರಾತ್ ಮಾದರಿ’ ಅಂದರೆ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವುದು ಮತ್ತು ‘ಹೊಸ ಮುಖ’ ತರುವುದು, ಆಚರಣೆಯಲ್ಲಿ ದಯನೀಯವಾಗಿ ವಿಫಲವಾಗಿದೆ. ಹಾಲಿ ಶಾಸಕರ ಪೈಕಿ 1/3 ಭಾಗದಷ್ಟು ಶಾಸಕರು ಗೆದ್ದಿದ್ದರೆ, ಕೇವಲ 1/5ರಷ್ಟು ‘ತಾಜಾ ಮುಖ’ಗಳು ಮಾತ್ರ ಗೆದ್ದಿದ್ದಾರೆ. ಈ ಮಾದರಿ ಬಹುಶಃ ಬರಿಯ ನೆಪವಾಗಿತ್ತು ಅಥವಾ ವಾಸ್ತವ ಗೊತ್ತಿಲ್ಲದ ನಾಯಕರ ಬಾಲಿಶ ತಂತ್ರವಾಗಿತ್ತು ಎಂಬುದು ಸ್ಪಷ್ಟವಾಗಿದೆ.
ಕೊನೆಯ 2 ವಾರಗಳ ಚುನಾವಣಾ ಪ್ರಚಾರದಲ್ಲಿ, ಆಡಳಿತ ವಿರೋಧಿ ಅಲೆಯನ್ನು ಮೀರಿ ನಿಲ್ಲಬಲ್ಲ ‘ಮೋದಿ ಮ್ಯಾಜಿಕ್’ನ ಪಾತ್ರದ ಬಗ್ಗೆ ಬಿಜೆಪಿಯೂ ಅತಿಯಾದ ವಿಶ್ವಾಸ ಹೊಂದಿತ್ತು. ಹಲವು ಅಧಿಕೃತ ಮೆಗಾ ಉದ್ಘಾಟನೆ/ಘೋಷಣೆಗಳ ಹೊರತಾಗಿ 18 ರ್ಯಾಲಿಗಳು ಮತ್ತು 5 ರೋಡ್ ಶೋಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಆದರೆ ಬೆಂಗಳೂರು ನಗರವನ್ನು ಹೊರತುಪಡಿಸಿದರೆ ಅವುಗಳಲ್ಲಿ ಯಾವುದೂ ಹೆಚ್ಚು ಕೆಲಸ ಮಾಡಿಲ್ಲ ಎಂದು ಅವರ ಪ್ರವಾಸದ ಕ್ಷೇತ್ರಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಷಾ ವಿಷಯದಲ್ಲೂ ಇದು ನಿಜ. ‘ಡಬಲ್ ಇಂಜಿನ್’ ಎಂಬ ಮೋದಿ-ಶಾ ಘೋಷಣೆಯು ಕೇವಲ ಒಂದು ‘ದುರ್ಬಲ ಅಥವಾ ತುಕ್ಕು ಹಿಡಿದ ಎಂಜಿನ್’ ನಿಂದಾಗಿ ಮೋದಿಯ ಬೆಂಬಲಿಗರಲ್ಲೂ ಕೆಲಸ ಮಾಡಲಿಲ್ಲ. ಭ್ರಷ್ಟಾಚಾರದ ವಿರುದ್ಧ ಅವರ ವಾಗ್ದಾಳಿ ಮತ್ತು ಕಾಂಗ್ರೆಸ್ನ ‘ಪರಿವಾರ-ವಾದ’ ಕೂಡ ಟೊಳ್ಳಾಗಿತ್ತು. ‘ನಂದಿನಿ-ಅಮುಲ್ ವಿಲೀನ’ದ ಷಾ ಘೋಷಣೆಯನ್ನು ಕಾಂಗ್ರೆಸ್ ಸರಿಯಾಗಿ ಬಳಸಿತು ಮತ್ತು ಅದು ಬಿಜೆಪಿ ವಿರುದ್ಧ ಕೆಲಸ ಮಾಡಿತು. ಅದು ‘ಕನ್ನಡದ ಹೆಮ್ಮೆ’ ಮತ್ತು ಪ್ರಾದೇಶಿಕ ಸ್ವಾಯತ್ತತೆಯ ಮೇಲಿನ ಬಿಜೆಪಿ ದಾಳಿಯ ಸಂಕೇತವಾಯಿತು.
ಮೇಲಿನ ಪಟ್ಟಿ ಮಾಡಲಾದ ಅಂಶಗಳ ಹೊರತಾಗಿಯೂ, ಬಿಜೆಪಿಯು ಅಂತಹ ಸೋಲನ್ನು ತಪ್ಪಿಸಲು ಮತ್ತು ‘ಸರ್ಕಾರ ರಚಿಸುವ’ ಸ್ಥಾನದಲ್ಲಿರಬಹುದಾಗಿತ್ತು. ಬಿಜೆಪಿ ಹಲವು ರಾಜ್ಯಗಳಲ್ಲಿ ಇದನ್ನು ಮಾಡಿದೆ. ಆದರೆ ಈ ಬಾರಿ, ಕಾಂಗ್ರೆಸ್ ರೂಪದಲ್ಲಿ ಸಂಘಟಿತ ಪ್ರೇರಿತ ಆಕ್ರಮಣಕಾರಿ ವಿರೋಧವನ್ನು ಬಿಜೆಪಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಜೆಡಿ (ಎಸ್) ನ ಸಂದಿಗ್ಧ ನೀತಿ ಮತ್ತು ದೌರ್ಬಲ್ಯಗಳು ಬಿಜೆಪಿ ವಿರುದ್ಧ ಮತ್ತಷ್ಟು ಕೆಲಸ ಮಾಡಿತು.