ಮಾ. 6 ರಂದು ಬಜೆಟ್ ಮಂಡನೆ; ಪ್ರಮುಖ ನಿರೀಕ್ಷೆಗಳೇನು?

ಬೆಂಗಳೂರು: 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಾರ್ಚ್ 6 ರಂದು ಮಂಡನೆಯಾಗಲಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್. ಕಳೆದ ಬಾರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ 4,09,549 ಕೋಟಿ ರೂಪಾಯಿ ಗಾತ್ರ ಹೊಂದಿತ್ತು. ಈ ಬಾರಿ ಬಜೆಟ್‌ ಗಾತ್ರ ಮತ್ತಷ್ಟು ವಿಸ್ತಾರಗೊಳ್ಳುವ ನಿರೀಕ್ಷೆಯಿದೆ. ಮಂಡನೆ

ಈ ಬಾರಿಯ ಬಜೆಟ್‌ನಲ್ಲೂ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಅದರ ಜೊತೆಗೆ, ಅಭಿವೃದ್ಧಿ ಮತ್ತು ಆರ್ಥಿಕ ಶಿಸ್ತಿನ ಸಮತೋಲನ ಸಾಧಿಸುವ ಸವಾಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿದೆ.

ಪ್ರಮುಖ ನಿರೀಕ್ಷೆಗಳೇನು?

ಗ್ಯಾರಂಟಿ ಯೋಜನೆ, ಅಭಿವೃದ್ಧಿಗೆ ಸಮತೋಲನ : ಈ ಬಾರಿಯ ಬಜೆಟ್‌ನಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಆದರೆ, ಇದೇ ವೇಳೆ ಮೂಲಸೌಕರ್ಯ ಅಭಿವೃದ್ಧಿ, ಕೃಷಿ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚುವರಿ ಹೂಡಿಕೆ ಮಾಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಹೈನುಗಾರಿಕೆ, ಸಾರಿಗೆ ಸೇರಿದಂತೆ ಹಲವು ವಲಯಗಳಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಇದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಅನುದಾನ ನೀಡುವ ಚಾನ್ಸಸ್ ಕೂಡ ಇದೆ.

ಬೆಂಗಳೂರಿಗೆ ಮೂಲಸೌಕರ್ಯ ಒತ್ತು

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಿಲ್ಲ. ಐಟಿ ವಲಯ ಹೆಚ್ಚು ವಿಸ್ತರಣೆಯಾಗುತ್ತಿರುವುದರಿಂದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡುವ ನಿರೀಕ್ಷೆ ಇದೆ.

ಮೆಟ್ರೋ ವಿಸ್ತರಣೆ, ಡಬಲ್ ಡೆಕ್ಕರ್ ಮಾರ್ಗಗಳು, ಐಟಿ ಕಾರಿಡಾರ್‌ಗಳ ಸ್ಥಾಪನೆ, ಕೈಗೆಟುಕುವ ದರದಲ್ಲಿ ವಸತಿ, ಶುದ್ಧ ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಪೂರೈಕೆ ಬೆಂಗಳೂರಿಗರ ಪ್ರಮುಖ ಬೇಡಿಕೆಗಳಾಗಿವೆ. 100% ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೆಗಳಿಗೆ ಸಬ್ಸಿಡಿ, ವಿದ್ಯುತ್ ತೆರಿಗೆ ಇಳಿಕೆ, ಆಸ್ತಿ ತೆರಿಗೆ ರಿಯಾಯಿತಿ ಮುಂತಾದ ಪ್ರೋತ್ಸಾಹಕ ಕ್ರಮಗಳ ನಿರೀಕ್ಷೆ ಇದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಂದ ರಾಜ್ಯ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇದೆ. ಐದು ನಗರ ಪಾಲಿಕೆಗಳು ರಚನೆಯಾಗಿ ಐದು ತಿಂಗಳಾಗಿದ್ದು, ರಾಜ್ಯದ ಬಜೆಟ್‌ ಮಂಡನೆ ನಂತರ ಮಾರ್ಚ್‌ ಎರಡನೇ ವಾರದಲ್ಲಿ ಮೊದಲ ಆಯವ್ಯಯ ಮಂಡಿಸಲು ಸಿದ್ಧತೆ ನಡೆಸಿವೆ.

ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಕೆರೆ ಮುಂತಾದ ಮೂಲಭೂತ ಕಾಮಗಾರಿಗಳಿಗೆ ರಾಜ್ಯದಿಂದ ಹೆಚ್ಚಿನ ನೆರವು ಕೋರುತ್ತಿವೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 168 | ವಯಸ್ಕರಿಗೂ ಪ್ರಿಯವಾಗುವ ಮಕ್ಕಳ ಕಿರುಚಿತ್ರ `ದಿ ರೆಡ್‌ ಬಲೂನ್‌’ | ಮ ಶ್ರಿ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *