ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒದಗಿಸಬೇಕಾದ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವ್ಯಾಪ್ತಿ
2011ರ ಜನಗಣತಿಯ ಪ್ರಕಾರ ರಾಜ್ಯದ ಶೇಕಡಾ 61.43ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶದ ಜನರಿಗೆ ಸಿಗುವ ಕನಿಷ್ಠ ಸೌಲಭ್ಯಗಳಿಂದ ಗ್ರಾಮೀಣ ಜನರು ವಂಚಿತರಾಗಬಾರದು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 07:10:2013 ರಲ್ಲಿ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಸಾರ್ವಜನಿಕರ ಮಾಹಿತಿಗಾಗಿ ಸುದ್ದಿಯೊಂದಿಗೆ ಸುತ್ತೋಲೆಯನ್ನು ಪ್ರಕಟಿಸುತ್ತಿದ್ದೇವೆ. ವ್ಯಾಪ್ತಿ
ಇದನ್ನೂ ಓದಿ: ಪಾಕಿಸ್ತಾನ ಅಥವಾ ಅಫಘಾನಿಸ್ತಾನ ಆಗಲು ನಿರಾಕರಿಸಿದ ಬಾಂಗ್ಲಾದೇಶ
ಯಾವುದು ಆ 15 ಪ್ರಮುಖ ಸೌಕರ್ಯಗಳು?
ಸುತ್ತೋಲೆಯಲ್ಲಿ ಉಲ್ಲೇಖಿಸಲಾದ ಪ್ರಮುಖ ಸೌಲಭ್ಯಗಳ ವಿವರಗಳು ಇಲ್ಲಿವೆ:
1. ಶುದ್ಧ ಕುಡಿಯುವ ನೀರು: ಪ್ರತಿ ಕುಟುಂಬಕ್ಕೆ ದಿನಕ್ಕೆ 55 ಲೀಟರ್ ಶುದ್ಧ ನೀರು ಒದಗಿಸುವ ಗುರಿ. ಶೇ. 80ರಷ್ಟು ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವುದು.
2. ವೈಯಕ್ತಿಕ ಶೌಚಾಲಯ: ‘ನಿರ್ಮಲ ಭಾರತ ಅಭಿಯಾನ’ದಡಿ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಾಣ.
3. ಗ್ರಾಮೀಣ ರಸ್ತೆಗಳ ನಿರ್ಮಾಣ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ರಸ್ತೆ ಅಭಿವೃದ್ಧಿ.
4. ಆಟದ ಮೈದಾನಗಳು: ಯುವಜನರ ದೈಹಿಕ ವಿಕಾಸಕ್ಕಾಗಿ ಪ್ರತಿ ಪಂಚಾಯತಿಯಲ್ಲಿ ಸುಸಜ್ಜಿತ ಆಟದ ಮೈದಾನ ನಿರ್ಮಾಣ.
5. ರುದ್ರಭೂಮಿ ಅಭಿವೃದ್ಧಿ: ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸ್ಮಶಾನ ಅಥವಾ ರುದ್ರಭೂಮಿ ಅಭಿವೃದ್ಧಿ ಪಡಿಸುವುದು.
6. ಹಟ್ಟಿದೊಡ್ಡಿ/ದನಗಳ ದೊಡ್ಡಿ: ಜಾನುವಾರುಗಳ ರಕ್ಷಣೆಗಾಗಿ ಮನ್ರೇಗಾ (MGNREGA) ಯೋಜನೆಯಡಿ ದೊಡ್ಡಿಗಳ ನಿರ್ಮಾಣ.
7. ಧಾನ್ಯ ಒಕ್ಕಲು ಕಣಗಳು: ರೈತರಿಗೆ ಅನುಕೂಲವಾಗುವಂತೆ ವೈಜ್ಞಾನಿಕವಾಗಿ ಧಾನ್ಯ ಒಕ್ಕಲು ಮಾಡುವ ಕಣಗಳ ನಿರ್ಮಾಣ.
8. ಬಯಲು ರಂಗಮಂದಿರ: ಗ್ರಾಮೀಣ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಬಯಲು ರಂಗಮಂದಿರಗಳ ಸ್ಥಾಪನೆ.
9. ನಾಗರಿಕ ಸೇವಾ ಕೇಂದ್ರಗಳು: ಇ-ಆಡಳಿತದ ಮೂಲಕ ಗ್ರಾಮ ಮಟ್ಟದಲ್ಲೇ ಸರ್ಕಾರಿ ದಾಖಲೆಗಳು ಸಿಗುವಂತೆ ಸೇವಾ ಕೇಂದ್ರಗಳ ಸ್ಥಾಪನೆ.
10. ಕೌಶಲ್ಯಾಭಿವೃದ್ಧಿ ತರಬೇತಿ: ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು ವಿಶೇಷ ತರಬೇತಿ ನೀಡಿಕೆ.
11. ನಮ್ಮ ಹಳ್ಳಿ–ನಮ್ಮ ನೀರು: ಕೆರೆಗಳ ಪುನಶ್ಚೇತನ ಮತ್ತು ಜಲಮೂಲಗಳ ಸಂರಕ್ಷಣೆ.
12. ನಮ್ಮ ಹೊಲ–ನಮ್ಮ ದಾರಿ: ಕೃಷಿ ಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ.
13. ಸ್ವಯಂ ಉದ್ಯೋಗ: ಗ್ರಾಮೀಣ ಯುವಕರು ಸ್ವಂತ ಉದ್ಯೋಗ ಆರಂಭಿಸಲು ಬೇಕಾದ ಸೌಕರ್ಯ ಮತ್ತು ತರಬೇತಿ ಒದಗಿಸುವುದು.
14. ಸಾರ್ವಜನಿಕ ಗ್ರಂಥಾಲಯ: ಓದುವ ಹವ್ಯಾಸ ಬೆಳೆಸಲು ಪ್ರತಿ ಪಂಚಾಯತಿಯಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣ.
15. ನಮ್ಮೂರ ಕೆರೆ: ಹಳೆಯ ಕೆರೆಗಳ ಹೂಳೆತ್ತುವುದು ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ವೃದ್ಧಿ.
ಅನುಷ್ಠಾನದ ಹೊಣೆ: ಈ ಯೋಜನೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA), 13ನೇ ಹಣಕಾಸು ಯೋಜನೆ ಮತ್ತು ಸುವರ್ಣ ಗ್ರಾಮೋದಯದಂತಹ ವಿವಿಧ ಅನುದಾನಗಳನ್ನು ಬಳಸಿಕೊಂಡು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ತಾಲ್ಲೂಕು ಪಂಚಾಯತಿ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಇದನ್ನೂ ನೋಡಿ: ಮುಟ್ಟಿನ ರಜೆ ದಯೆಯಲ್ಲ, ಅದು ಹಕ್ಕು — ವಿಶೇಷ ಸೌಲಭ್ಯವಲ್ಲ, ನ್ಯಾಯಯುತ ಸೌಕರ್ಯ Janashakthi Media
