ರಾಮನ ಕಾಲದಲ್ಲಿ ರಾಗಿ ಇತ್ತಾ?

ಜಿ. ಕೃಷ್ಣಪ್ರಸಾದ್, ಪತ್ರಕರ್ತರು

ರೈತರು,ವಿಜ್ಞಾನಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆ ನಡೆಸಿದರು. ರಾಗಿ ಬೆಳೆವ ಹೊಲಕ್ಕೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರ ಬಳಸಿದರೆ, ತಿಂಗಳ ಕಾಲ ಮಳೆ ಹೋದರೆ ಪೈರು ಬಾಡುತ್ತವೆ. ಅಧಿಕ ಇಳುವರಿ ತಳಿಗಳಿಗೆ ಬರ ತಡೆಯುವ ಶಕ್ತಿಯೂ ಇಲ್ಲ ಎಂದು ರೈತರು ಅಭಿಪ್ರಾಯ ಪಟ್ಟರು. 

‘ಆಫ್ರಿಕಾ ಮೂಲದ ರಾಗಿ, ಭಾರತಕ್ಕೆ ಬಂದು 4000 ವರ್ಷ ಆಗಿದೆ. ಈ ಕಾಲಘಟ್ಟದಲ್ಲಿ ಶ್ರೀ ರಾಮ ಇದ್ದಿದ್ದರೆ ರಾಗಿ ತಿಂದಿದಾರೆ; ಇದಕ್ಕೂ ಮುನ್ನ ಶ್ರೀರಾಮ ಬದುಕಿದ್ದರೆ ರಾಗಿ ತಿಂದಿಲ್ಲ. ಏಕೆಂದರೆ 7000 ವರ್ಷದ ಹಿಂದಿನ ತ್ರೇತಾಯುಗದಲ್ಲಿ ರಾಮ ಬದುಕಿದ್ದ ಎಂದು ಪುರಾಣಗಳು ಹೇಳುತ್ತವೆ. ಆಗ ಭಾರತದಲ್ಲಿ ರಾಗಿಯೇ ಇರಲಿಲ್ಲ. ರಾಮಧಾನ್ಯ ಎಂಬ ಕಲ್ಪನೆ ಮನುಷ್ಯರ ಸೃಷ್ಟಿ’ ವಿಜ್ಞಾನಿ ಮತ್ತು ಕಾದಂಬರಿಕಾರ ಡಾ. ಕೆ.ಎನ್. ಗಣೇಶಯ್ಯ ರಾಗಿಯ ಇತಿಹಾಸವನ್ನು ಕೆದಕುತ್ತಾ ಹೋದರು.

‘3000 ವರ್ಷಗಳಷ್ಟು ಹಳೆಯದಾದ ಮೆಗಾಲತಿಕ್ ಕಾಲದ ( 1000 BC ) ಕಲ್ಲಿನ ಸಮಾಧಿಗಳು( dolmens) ಹಿರೆ ಬೆನೆಕಲ್ ,ಹಂಪಿ , ಕೋಲಾರ ಮೊದಲಾದ ಪ್ರದೇಶದಲ್ಲಿ ಕಾಣಸಿಗುತ್ತವೆ. ಇವನ್ನು ಪಾಂಡವರ ಗುಡಿ ಎಂದು ಕರೆಯುತ್ತಾರೆ. ಪಿತೃ ಪಕ್ಷ ಕಾಲದಲ್ಲಿ ಹಿರಿಯರಿಗೆ ಎಡೆ ಇಡುತ್ತಿದ್ದರು. ಈ ಎಡೆಯಲ್ಲಿ ರಾಗಿ ಇತ್ತು ಎನ್ನುವುದಕ್ಕೆ ದಾಖಲೆ ಇಲ್ಲ’ ಎಂಬುದನ್ನು ವೈಜ್ಞಾನಿಕ ದಾಖಲೆಗಳ ಮೂಲಕ ಬಿಡಿಸಿಟ್ಟರು.ಇಂಥ ಕುತೂಹಲಕರ ಮಾಹಿತಿಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ,ಸಹಜ ಸಮೃದ್ದ ಮತ್ತು ಹೈದರಾಬಾದಿನ ವಾಸನ್ ಸಹಯೋಗದಲ್ಲಿ ನಡೆದ ರಾಗಿ ಕಾರ್ಯಗಾರದಲ್ಲಿ ಚರ್ಚೆಗೆ ಬಂತು.

ಬದಲಾದ ವಾತಾವರಣದ ಹಿನ್ನಲೆಯಲ್ಲಿ ರಾಗಿಯ ಕೃಷಿ ಹೇಗಿದೆ? ಬರದ ಹಿನ್ನಲೆಯಲ್ಲಿ ರೈತರು ರಾಗಿ ಕೃಷಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಂಡಿದ್ದಾರೆ? ವಾತಾವರಣ ಬದಲಾವಣೆಯೊಂದಿಗೆ ಬದುಕುವ ಬಗೆ ಹೇಗೆ? ಈ ಪ್ರಶ್ನೆಗಳನ್ನಿಟ್ಟುಕೊಂಡು ರೈತರು,ವಿಜ್ಞಾನಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆ ನಡೆಸಿದರು. ರಾಗಿ ಬೆಳೆವ ಹೊಲಕ್ಕೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರ ಬಳಸಿದರೆ, ತಿಂಗಳ ಕಾಲ ಮಳೆ ಹೋದರೆ ಪೈರು ಬಾಡುತ್ತವೆ. ಅಧಿಕ ಇಳುವರಿ ತಳಿಗಳಿಗೆ ಬರ ತಡೆಯುವ ಶಕ್ತಿಯೂ ಇಲ್ಲ ಎಂದು ರೈತರು ಅಭಿಪ್ರಾಯ ಪಟ್ಟರು.

ಸಾಂಪ್ರದಾಯಿಕ ರಾಗಿ ತಳಿಗಳ ಮೌಲ್ಯ ಮಾಪನ ಮತ್ತು ತಳಿ ಶುದ್ದತೆ ಕಾಪಾಡಲು ಕೃಷಿ ವಿಜ್ಞಾನಿಗಳು ರೈತರ ಜೊತೆ ಕೈ ಜೋಡಿಸಬೇಕು. ಉತ್ತಮ‌ ದೇಸಿ ರಾಗಿ ತಳಿಗಳಾದ ಜಗಳೂರು ರಾಗಿ, ಬೆಟ್ಟದ ಕೆಳಗಿನ ರಾಗಿ, ಉಂಡೆ ರಾಗಿಯಂಥ ತಳಿಗಳನ್ನು ಗುರುತಿಸಿ ಕೃಷಿ ವಿವಿ ಬಿಡುಗಡೆ ಮಾಡಬೇಕು. ಸರ್ಕಾರ ಅದಕ್ಕೆ ಸೂಕ್ತ ಬೆಂಬಲ ನೀಡಬೇಕು.

ಇದನ್ನೂ ಓದಿ: ಗಾಯ ಕಥಾ ಸರಣಿ – ಸಂಚಿಕೆ ; 07 – ಬಡತನದ ಅಸ್ತ್ರ ಪ್ರಯೋಗಿಸಿದ ಸಾಹೇಬ!

ಕರ್ನಾಟಕದಲ್ಲಿ ಜನ್ಮ ತಳೆದ ‘ಗುಳಿ ರಾಗಿ’ ಅಪರೂಪದ ಪದ್ದತಿ. 20 ದಿನಗಳ ರಾಗಿ ಪೈರನ್ನು ಒಂದು ಅಡಿ ಅಂತರದಲ್ಲಿ ನೆಟ್ಟು ,ಕೊರಡು ಹೊಡೆದು ಪೈರಿನ ನಡು ಮುರಿದು ಹೆಚ್ಚು ತೆಂಡೆ ಹೊಡೆಯುವಂತೆ ಮಾಡಲಾಗುತ್ತದೆ. ಈ ಪದ್ದತಿಯಲ್ಲಿ ದೇಸಿ ರಾಗಿ ತಳಿಗಳನ್ನು ಬಳಸಿ ಎಕರೆಗೆ 15-20 ಕ್ವಿಂಟಾಲ್ ರಾಗಿ ಬೆಳೆಯಲಾಗುತ್ತದೆ. ಆಂಧ್ರ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳು ‘ ಗುಳಿ ರಾಗಿ’ ಪದ್ದತಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿವೆ. ಸಾವಿರಾರು ರೈತರು ಗುಳಿ ರಾಗಿ ಅಳವಡಿಸಿಕೊಂಡಿದ್ದಾರೆ.

ಕರ್ನಾಟಕದ ಹೆಮ್ಮೆಯ ಗುಳಿರಾಗಿಯನ್ನು ಕರ್ನಾಟಕ ದೊಡ್ಡ ಪ್ರಮಾಣದಲ್ಲಿ ಅನುಷ್ಟಾನಕ್ಕೆ ತರಬೇಕು ಎಂಬ ಬೇಡಿಕೆಯನ್ನು ರೈತರು ಮಂಡಿಸಿದರು. ಬೆಂಗಳೂರು ಕೃಷಿ ವಿವಿಯ ಉಪ ಕುಲಪತಿಗಳಾದ ಡಾ. ಎಸ್. ವಿ. ಸುರೇಷ ರವರು ರಾಗಿಯ ಮೌಲ್ಯವರ್ಧನೆ , ರಾಗಿ ಪದ್ದತಿಗಳ ಪುನರುಜ್ಜೀವನ ಮತ್ತು ದೇಸಿ ರಾಗಿ ತಳಿಗಳ ಬೀಜೋತ್ಪಾದನೆಯನ್ನು ರೈತ ಉತ್ಪಾದಕರ ಕಂಪನಿ ಮತ್ತು ರೈತ ಗುಂಪುಗಳ ಸಹಯೋಗದಲ್ಲಿ ಕಾರ್ಯಗತ ಮಾಡುವ ಭರವಸೆ ನೀಡಿದರು.

ಕುಂದಗೋಳದ ಮಹಿಳಾ ಸಂಘದವರು ತಂದ ರಾಗಿ ತೆನೆಯ ತೋರಣ ಎಲ್ಲರ ಮೆಚ್ಚುಗೆಗೆ ಪಾತ್ರವಾಹಿತು.

ಬನ್ನಿ! ದೇಸಿ ರಾಗಿ ಉಳಿಸೋಣ; ಗುಳಿರಾಗಿ ಪದ್ಧತಿಯಲ್ಲಿ ಬೆಳೆಸೋಣ.

ವಿಡಿಯೋ ನೋಡಿ: ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *