ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ?

18–20 ವರ್ಷಗಳಿಂದ ನಾವು ನಿರಂತರವಾಗಿ ಮತ ಹಾಕುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಬಂದಿರುವ ಹೊಸ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ, ನನ್ನ ಕುಟುಂಬದವರ ಹೆಸರನ್ನು ತೆಗೆಯಲಾಗಿದೆ. 2003ರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದೆ, ಆದರೆ ಈಗ ಸಿದ್ದ ಪಡಿಸಿರುವ ಕರಡು ಮತದಾರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಮತ ಹಾಕುವುದು ನಮ್ಮ ಕರ್ತವ್ಯ. ಆದರೆ ಮತದಾರರ ಪಟ್ಟಿಯಲ್ಲೇ ಹೆಸರು ಇಲ್ಲದಿದ್ದರೆ ನಾವು ಏನು ಮಾಡಬೇಕು? ಈ ರೀತಿಯ ಮಾತುಗಳು ಕೇಳಿ ಬರುತ್ತಿರುವುದು ಉತ್ತರ ಪ್ರದೇಶದಲ್ಲಿ.

– ಗುರುರಾಜ ದೇಸಾಯಿ

SIR ಅಂದ್ರೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ನಡೆಸಿದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಒಟ್ಟು ಮತದಾರರಲ್ಲಿ ಶೆ 18.5 ರಷ್ಟು ಅಂದರೆ 2.8 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಅಕ್ಟೋಬರ್ 2025 ರಲ್ಲಿ ಉತ್ತರ ಪ್ರದೇಶದಲ್ಲಿ 15.4 ಕೋಟಿ ಇದ್ದ ಮತದಾರರ ಸಂಖ್ಯೆ 12.5 ಕೋಟಿಗೆ ಇಳಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ಆಯೋಗವು SIR ನಡೆಸಿದ ಮೊದಲ ಕರಡು ಮತದಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಪರಿಶೀಲಿಸಿದಾಗ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲೇ ಅಧಿಕ ಮತದಾರರ ಹೆಸರನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ. ಎಸ್‌ಐಆರ್ ಹೆಸರಿನಲ್ಲಿ ಅಲ್ಪಸಂಖ್ಯಾತರು, ದಲಿತರು, ಬಡವರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡಿದೆ.

ಇದನ್ನೂ ಓದಿ: ಬೆಂಗಳೂರು | 5 ವರ್ಷಗಳಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಆಸ್ಪತ್ರೆಗೆ ₹4,000 ಕೋಟಿ: ಸಿಎಂ ಸಿದ್ದರಾಮಯ್ಯ

ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.19.26ರಷ್ಟು ಮುಸ್ಲಿಮರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 10 ಜಿಲ್ಲೆಗಳಲ್ಲಿ ಮುಸ್ಲಿಮರ ಜನಸಂಖ್ಯೆ ಅಧಿಕವಾಗಿದೆ. ಅಂದರೆ ಸರಿಸುಮಾರು ಶೇ.33ರಿಂದ ಶೇ.50ರವರೆಗೆ ಮುಸ್ಲಿಂ ಜನಸಂಖ್ಯೆಯಿದೆ. ನಿಮಗೆ ಒಂದು ಕೋಷ್ಟಕ ಕಾಣ್ತಾ ಇದೆ. ಅದನ್ನು ಗಮನಿಸಿದರೆ ಸ್ಪಷ್ಟವಾದ ಚಿತ್ರಣ ಸಿಗುತ್ತೆ. ಒಟ್ಟಾರೆ ಉತ್ತರ ಪ್ರದೇಶದಲ್ಲಿ 18.70 ರಷ್ಟು ಮುಸ್ಲಿಂರ ಮತಗಳನ್ನು ಡಿಲಿಟ್‌ ಮಾಡಲಾಗಿದೆ. ಈ 11 ಜಿಲ್ಲೆಗಳಿಂದ 47 ಲಕ್ಷ, 46 ಸಾವಿರ,75 ಮತಗಳನ್ನು ಡಿಲಿಟ್‌ ಮಾಡಲಾಗಿದೆ. ಒಟ್ಟು ಉತ್ತರ ಪ್ರದೇಶದಲ್ಲಿ 65 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರನ್ನು ಮತದಾರ ಪಟ್ಟಿಯಿಂದ ಡಿಲಿಟ್‌ ಮಾಡಲಾಗಿದೆ.

2022 ರ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನು ಗಮನಿಸುವುದಾದರೆ, ಒಟ್ಟು ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಿವೆ. ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾರರು ಡಿಲಿಟ್‌ ಆಗಿದ್ದಾರೆ. ಅಲ್ಲಿ ಬಿಜೆಪಿಯ ಬಲಾ ಬಲ ಎಷ್ಟಿದೆ ಎಂಬುದನ್ನು ನೋಡೋಣ. ನಿಮಗೆ ಒಂದು ಕೋಷ್ಟಕ ಕಾಣುತ್ತಿದೆ. ವಿವರಗಳನ್ನು ನೋಡ್ತಾ ಹೋಗೋಣ. 79 ಕ್ಷೇತ್ರದಲ್ಲಿ 50 ಸಾವಿರಕ್ಕಿಂತ ಕಡಿಮೆ ಮದಾರರು ಡಿಲಿಟ್‌ ಆಗಿದ್ದಾರೆ. ಅಲ್ಲಿ ಬಿಜೆಪಿ 45 ಕ್ಷೇತ್ರಗಳನ್ನು ಗೆದ್ದಿದೆ. ಬಿಜೆಪಿಯ ಸ್ಟ್ರೈಕ್‌ ರೇಟ್‌ 57% ಇದೆ. 187 ಕ್ಷೇತ್ರಗಳಲ್ಲಿ 50 ಸಾವಿರದಿಂದ 70 ಸಾವಿರ ಮತಗಳು ಡಿಲಿಟ್‌ ಆಗಿವೆ. ಅಲ್ಲಿ ಬಿಜೆಪಿ 109 ಸ್ಥಾನಗಳನ್ನು ಗೆದ್ದಿದೆ. ಸ್ಟ್ರೈಕ್‌ರೇಟ್‌ 58.3% ರಷ್ಟಿದೆ. 87 ಕ್ಷೇತ್ರಗಳಲ್ಲಿ 70 ಸಾವಿರದಿಂದ 1
ಲಕ್ಷದ ವರೆಗೆ ಮತದಾರರು ಡಿಲಿಟ್‌ ಆದ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಬಿಜೆಪಿ 54 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿತ್ತು. ಸ್ರ್ಟೈಕ್‌ ರೇಟ್‌ 62.1% ಇದೆ. 1 ಲಕ್ಷಕ್ಕಿಂತ ಹೆಚ್ಚಿನ ಮತಗಳು ಡಿಲಿಟ್‌ ಆದ ಕ್ಷೇತ್ರಗಳ ಸಂಖ್ಯೆ 50, ಇದರಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಸ್ಟ್ರೈಕ್‌ ರೇಟ್‌ 94% ಇದೆ.

ಇನ್ನೋಂದು ಚಾರ್ಟ್‌ನ್ನು ಗಮನಿಸುವುದಾದರೆ, ಬಿಹಾರ್‌ನಂತೆ ಇಲ್ಲಿಯೂ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಡಿಲಿಟ್‌ ಮಾಡಲಿಗಾಗಿದೆ.  1.3 ಕೋಟಿ ಪುರುಷ ಮತದಾರನ್ನು ಡಿಲಿಟ್‌ ಮಾಡಿದ್ದರೆ, 1.5 ಕೋಟಿ ಮಹಿಳಾ ಮತದಾರರನ್ನು ಪಟ್ಟಿಯಿಂದ ಡಿಲಿಟ್‌ ಮಾಡಲಾಗಿದೆ. 18 ರಿಂದ24 ವರ್ಷ ಮತ್ತು 60+ ವಯಸ್ಸಿನ ವಿಭಾಗಗಳಲ್ಲಿ, ಪುರುಷರಿಗಿಂತ ಹೆಚ್ಚಿನ ಮಹಿಳಾ ಮತದಾರರನ್ನು ಅಳಿಸಲಾಗಿದೆ. ವಲಸೆ ಹೋಗಿದ್ದಾರೆ. ಎಸ್‌ಐಆರ್‌ ಸಂದರ್ಭದಲ್ಲಿ ಹಾಜರಿರಲಿಲ್ಲ, ಮರಣ ಹೊಂದಿದಿದ್ದಾರೆ. ಎರಡೆರಡು ಕಡೆ ಹೆಸರಿದೆ ಎಂದು ಹೇಳಲಾಗಿದೆ. ಜೀವನ ನಿರ್ವಹಣೆಗಾಗಿ ವಲಸೆ ಹೋಗುವುದು ಸಾಮಾನ್ಯ, ಆದರೆ ಅವರಿಗೆ ಮಾಹಿತಿ ನೀಡಿ ಅವರನ್ನು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ತನ್ನ ಜವಬ್ದಾರಿ ಎನ್ನುವುದನು ಚುನಾವಣಾ ಆಯೋಗ ಮರೆತಂತೆ ಕಾಣುತ್ತಿದೆ.

ಉತ್ತರ ಪ್ರದೇಶದ ಎಸ್‌ಐಆರ್‌ ಕುರಿತು ಇನ್ನೊಂದು ಆರೋಪ ಕೇಳಿ ಬಂದಿದೆ. ಪಂಚಾಯತ್‌ ಮಟ್ಟದ ಚುನಾವಣೆಗಾಗಿ ಡಿಸೆಂಬರ್‌ ನಲ್ಲಿ ಬಿಡುಗಡೆ ಮಾಡಲಾಗಿದ್ದ ಮತದಾರರ ಪಟ್ಟಿಯಲ್ಲಿ 17 ಕೋಟಿ ಮತದಾರರು ಇದ್ದರು ಎಂದು ಹೇಳಲಾಗುತ್ತಿದೆ. ಚುನಾವಣಾ ಆಯೋಗ 15.44 ಕೋಟಿಯಷ್ಟು ಮತದಾರರಿದ್ದರು ಎಂದು ಈಗ ಹೇಳುತ್ತಿದೆ? ಒಂದು ತಿಂಗಳ ಅವಧಿಯಲ್ಲಿ 1 ಕೋಟಿಯಷ್ಟು ಮತದಾರರು ಎಲ್ಲಿ ಹೋದರು ಎಂಬ ಪ್ರಶ್ನೆಯನ್ನು ವಿಪಕ್ಷಗಳು ಕೇಳತ್ತಿವೆ. ಹಾಗೇ ನೋಡಿದರೆ ಒಟ್ಟು 4 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲಿಟ್‌ ಮಾಡಲಾಯಿತೆ? ಚುನಾವಣಾ ಆಯೋಗ ಮತ್ತೊಂದು ಸುಳ್ಳು ಹೇಳುತ್ತಿದೆಯೇ ಎಂದು ರಾಜಕೀಯ ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.

ಬಿಹಾರದಲ್ಲಿಯೂ ಕೂಡ ಚುನಾವಣೆಗಿಂತ ಮುಂಚೆ ಇದೇ ರೀತಿಯ ಎಸ್‌ಐಆರ್‌ನ್ನು ನಡೆಸಿ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ರಾಜಕೀಯ ವಿಶ್ಲೇಷಕರು ಆರೋಪಿಸಿದ್ದರು. ಎನ್‌ಡಿಎ ಗೆದ್ದಿರುವ ಸೀಟುಗಳ ಪೈಕಿ 109 ಸೀಟುಗಳಲ್ಲಿ ಪ್ರತಿಪಕ್ಷದ ಅಭ್ಯರ್ಥಿಗಳು ಅಂಚೆ ಮತಗಳ ಎಣಿಕೆಯಲ್ಲಿ ಸೋತಿದ್ದಾರೆ ಎಂದು ವೋಟ್ ಫಾರ್ ಡೆಮಾಕ್ರಸಿ ಆರೋಪಿಸಿದ್ದನ್ನು ನೆನಪಿಸಿಕೊಳ್ಳಬೇಕು. ಚುನಾವಣಾ ನಿಷ್ಪಕ್ಷತೆಯನ್ನು ಕಾಪಾಡಬೇಕಾದ ಚುನಾವಣಾ ಆಯೋಗವು ಆಡಳಿತಾರೂಢ ಪಕ್ಷದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಬಿಹಾರ್‌ ಉದಾಹರಣೆ ಕಣ್ಮುಂದೆ ಇದೆ. ಉತ್ತರ ಪ್ರದೇಶದಲ್ಲಿ ವಯಸ್ಕರ ಜನಸಂಖ್ಯೆ 16 ಕೋಟಿ ಇದೆ. ಹಾಗಿದ್ದಾಗ ಮತದಾರರ ಸಂಖ್ಯೆ ಹೆಚ್ಚಾಗಬೇಕಿತ್ತು. ಕಡಿಮೆ ಆಗಿರುವುದನ್ನು ಗಮನಿಸಿದರೆ. ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆಲ್ಲಲು ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯಾಗಿ ಬಳಸಿಕೊಂಡಂತೆ ಕಾಣುತ್ತಿದೆ.

ಚುನಾವಣೆಯ ಸಂದರ್ಭದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುವುದು ಸರ್ವೆ ಸಾಮಾನ್ಯ ಹೊಸ ಸೇರ್ಪಡೆ, ಮರಣ ಹೊಂದಿದವರನ್ನು ತೆಗೆಯುವುದು ಸಾಮಾನ್ಯ . ಆದರೆ ಎಸ್‌ಐಆರ್‌ ನಡೆಯುತ್ತಿರುವ ಪ್ರಕ್ರಿಯೆ ಗಮನಿಸಿದರೆ, ಮತ ಪರಿಷ್ಕರಣೆಯಾ, ಪೌರತ್ವ ಪರಿಷ್ಕರಣೆಯಾ ಎಂಬು ಅನುಮಾನ ಕಾಡುತ್ತಿದೆ. ಪೌರತ್ವ ಪರಿಷ್ಕರಣೆ ಗೃಹ ಇಲಾಖೆಯ ಕೆಲಸ ಚುನಾವಣಾ ಆಯೋಗದ ಕೆಲಸ ಅಲ್ಲ ಎಂದು ವಿಪಕ್ಷಗಳು ಪದೇ ಪದೇ ಹೇಳುತ್ತಲೇ ಇದೆ.

ಸರ್‌ ಹೆಸರಿನೊಳಗೆ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾವನ್ನು ಜಾರಿ ಮಾಡಿಕೊಳ್ಳುತ್ತಿದೆ. ಮುಸ್ಲಿಂರಿಗೆ, ದಲಿತರು, ಮಹಿಳೆಯರು, ಆದಿವಾಸಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿರುವುದು ಎಸ್‌ಐಆರ್‌ ಮೂಲಕ ಗೊತ್ತಾಗುತ್ತದೆ. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗದೆ, ಮತದಾರರ ಹಕ್ಕನ್ನು ಕಾಪಾಡಬೇಕಿದೆ.

ಇದನ್ನೂ ನೋಡಿ: ವಲಸೆ ಕಾರ್ಮಿಕರ ಮನೆಗೆ ನುಗ್ಗಿ ಆಧಾರ್‌ ಪರಿಶೀಲಿಸಲು ಪುನೀತ್‌ ಕೆರೆಹಳ್ಳಿ ಯಾರು? Janashakthi Media

Donate Janashakthi Media

Leave a Reply

Your email address will not be published. Required fields are marked *