ಹಾಸನ | ಭೂಹೀನ ದಲಿತರ ಹಕ್ಕಿಗಾಗಿ ಧ್ವನಿ: 47 ಕುಟುಂಬಗಳಿಗೆ ಭೂಮಿ ನೀಡಲು ಕೆಪಿಆರ್‌ಎಸ್‌ ಆಗ್ರಹ

ಹಾಸನ : ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲಿನ ಸರ್ವೆ ನಂಬರ್ 48, 49, 50, 78, 79, 80, 81, 82, 83, 84, 85, 86, 87, 90, 91, 92, 93, 94, 95, 96, 104, 107, 108, ಹೊಸೂರು ಗ್ರಾಮದ ಸರ್ವೆ ನಂಬರ್ 11, 12, ಹಾಗೂ ಜುಂಜನಹಳ್ಳಿ ಗ್ರಾಮದ ಸರ್ವೆ ನಂಬರ್ 20, 27, 28, 30 ರಲ್ಲಿ ಅನುಭವದಲ್ಲಿ ಇಲ್ಲದವರ ದರಕಾಸ್ತು ಮಂಜೂರು ರದ್ದುಗೊಳಿಸಿ, ಕಳೆದ 60 ವರ್ಷಗಳಿಂದ ಇದೇ ಸರ್ವೆ ನಂಬರ್‌ಗಳಲ್ಲಿ ಭೂಮಿ ಸಾಗುವಳಿ ಮಾಡುತ್ತಿರುವ ಕಾರೆಕೆರೆ ಕಾವಲು ಗ್ರಾಮದ 47 ಭೂಹೀನ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಲು ಕೋರಿ ಕೆ ಪಿ ಆರ್‌ ಎಸ್‌ ಮನವಿ ಸಲ್ಲಿಸಿತ್ತು. ಹಾಸನ 

‌ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜೀಲ್ಲಾಧಕ್ಷ್ಯ ಹೆಚ್‌ ಆರ್‌ ನವಿನಕುಮಾರ  ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲಿನ ಮೇಲ್ಕಾಣಿಸಿದ ಸರ್ವೆ ನಂಬರ್‌ಗಳಲ್ಲಿ 246 ಎಕರೆ ಭೂಮಿಯನ್ನು 1966 ರಲ್ಲಿ 30 ದಲಿತ ಕುಟುಂಬಗಳಿಗೆ ಮಂಜೂರು ಮಾಡಲಾಗುತ್ತದೆ. ಇದರಲ್ಲಿ ಕಾರೆಕೆರೆ ಕಾವಲಿನಲ್ಲಿ ವಾಸವಿದ್ದು ಭೂಮಿಯನ್ನು ಸ್ವಾದೀನಾನುಭವದಲ್ಲಿ ಉಳುಮೆ ಮಾಡಿದ ಕುಟುಂಬಗಳು ಕೇವಲ 10 ಮಾತ್ರ. ಇನ್ನುಳಿದ ವಾಸವಿಲ್ಲದ 20 ಕುಟುಂಬಗಳು ಅಂದಿನಿಂದ ಇಲ್ಲಿಯವರೆಗೂ ಈ ಭೂಮಿಯನ್ನು ಸ್ವಾದೀನಕ್ಕೆ ತೆಗೆದುಕೊಂಡು ಉಳುಮೆ ಮಾಡಿರುವುದಿಲ್ಲ. ಅದೇ ಪ್ರದೇಶದಲ್ಲಿ ಕಳೆದ 60 ವರ್ಷಗಳಿಂದ ಕಾರೆಕೆರೆ ಕಾವಲು ಗ್ರಾಮದ 47 ಭೂಹೀನ ದಲಿತ ಕುಟುಂಬಗಳು ಭೂಮಿಯಲ್ಲಿ ಸ್ವಾದೀನಾನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಬೆಂಗಳೂರು | ವಿಬಿ ಜಿ ರಾಮ್‌ ಜಿ ವಿರುದ್ಧ ಸದನದ ಕಠಿಣ ನಿಲುವು : ನಿರ್ಣಯ ಪಾಸ್

ಭವದಲ್ಲಿ ಇಲ್ಲದವರ ಮತ್ತು ಈ ಗ್ರಾಮದಲ್ಲಿ ವಾಸವಿಲ್ಲದವರ ಮೂಲ ಮಂಜೂರಾತಿಯನ್ನು ರದ್ದುಗೊಳಿಸಿ, ಹಾಲಿ ಅನುಭವದಲ್ಲಿದ್ದು ಸಾಗುವಳಿ ಮಾಡುತ್ತಿರುವ ಕಾರೆಕೆರೆ ಕಾವಲು ಗ್ರಾಮದ 47 ಕುಟುಂಬಗಳಿಗೆ ಹೊಸದಾಗಿ ಭೂ ಮಂಜೂರು ಮಾಡಿಕೊಡಬೇಕೆಂದು ಈ ಹಿಂದೆ ಹಲವು ಬಾರಿ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ರೈತರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಅಡಿಯಲ್ಲಿ ಅರ್ಜಿ ನಮೂನೆ 50, 53, ಮತ್ತು 57 ನ್ನು ಸಲ್ಲಿಸಿದ್ದಾರೆ ಎಂದರು.

ದಿನಾಂಕ 6.8.2002 ರಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಪತ್ರ ಸಂಖ್ಯೆ ಎಲ್‌ಎನ್‌ಡಿ(1)797:01-02 ಮೈಸೂರು ವಿಭಾಗೀಯ ಕಛೇರಿಗೆ ದರಕಾಸ್ತು ಮಂಜೂರಿ ರದ್ದುಗೊಳಿಸುವ ಕುರಿತು ಪತ್ರ ಬರೆಯಲಾಗಿದ್ದು ಆನಂತರ ವಿಭಾಗೀಯ ಕಛೇರಿಯಿಂದ ಕೆಲವು ದಾಖಲಾತಿಗಳ ಕುರಿತು ಸ್ಪಷ್ಟೀಕರಣ ಕೇಳಿ ದಿನಾಂಕ 3.9.2022 ರಲ್ಲಿ ಹಾಸನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗು ಈ ಕುರಿತು ಜಿಲ್ಲಾಡಳಿತದಿಂದ ಸಕಾರಾತ್ಮಕ ಸ್ಪಂದನೆ ದೊರೆತಿರುವುದಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಲಿ ಉಳುಮೆ ಮಾಡುತ್ತಿರುವ ದಲಿತರನ್ನು ಈ ಭೂಮಿಯಿಂದ ವಕ್ಕಲೆಬ್ಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಯಾವ ಆದಾಯದ ಮೂಲವೂ ಇಲ್ಲದೇ, ಇದೇ ಭೂಮಿಯನ್ನು ನಂಬಿ ಕೃಷಿ ಮೂಲಕ ಬದುಕು ಸಾಗಿಸುತ್ತಿರುವ ಕಾರೆಕೆರೆ ಕಾವಲು ಗ್ರಾಮದ 46 ದಲಿತ ಕುಟುಂಬಗಳಿಗೆ ದೀರ್ಘಕಾಲದ ಭೂಸ್ವಾಧೀನಾನುಭವ ಮತ್ತು ಸಾಗುವಳಿಯನ್ನು ಪರಿಗಣಿಸಿ, ಸ್ಥಳಪರಿಶೀಲನೆ ನಡೆಸಿ, ಮೂಲ ಮಂಜೂರಾತಿಯನ್ನು ರದ್ದುಗೊಳಿಸಿ, ಹಾಲಿ ಸಾಗುವಳಿದಾರರಿಗೆ ಭೂಮಿಯನ್ನು ಮಂಜೂರು ಮಾಡಬೇಕಾಗಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಮತ್ತು ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (ಡಿಹೆಚ್‌ಎಸ್) ಹಾಸನ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ 47 ಕುಟುಂಬಗಳು ಜಿಲ್ಲಾಧಿಕಾರಿ ಕಛೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸುವ ಮೂಲಕ ಮನವಿ ಮಾಡಿಕೊಳ್ಳುತ್ತವೆ ಎಂದು ಹೆಳಿದರು.

ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 47 ದಲಿತ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿಸಿದರು. ಈ ಸಂಧರ್ಭದಲ್ಲಿ  ಎಂ.ಜಿ. ಪೃಥ್ವಿ , ಹೆಚ್. ಸ್ವಾಮಿ , ಪಾಂಡುರಂಗ, ದೇವರಾಜು, ಸುನಿಲ್, ರವಿಕುಮಾರ್ , ಧರ್ಮ, ಮೀನಾಕ್ಷಿ, ಮೂರ್ತಿ, ಪ್ರಕಾಶ್ ,ಸುರೇಶ್ ,ಬಾಬು ,ಶಾಂತ ಕುಮಾರ್ ಇದ್ದರು.

ಇದನ್ನೂ ನೋಡಿ : ಫೆ.12 ಸಾರ್ವತ್ರಿಕ ಮುಷ್ಕರ – ಶ್ರಮಜೀವಿಗಳ ಘೋಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *