ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ, ಅದರಲ್ಲೂ ವಿಶ್ವಸಂಸ್ಥೆಯ ಸಮಿತಿಯೊಂದಕ್ಕೆ ಭಾರತೀಯ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದು ಶ್ಲಾಘನೀಯ.
ಅಮರಿಕ ಸಂಯುಕ್ತ ಸಂಸ್ಥಾನಗಳ ನೂತನ ಅಧ್ಯಕ್ಷ ‘ಜೋ ಬೈಡನ್ ತಮ್ಮ ಆಡಳಿತ ನಡೆಸಲು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಭಾರತೀಯರನ್ನು ನೇಮಕ ಮಾಡಿರುವುದು ಸಂಚಲನ ಮೂಡಿಸಿದೆ. ಪ್ರಪಂಚದ ಪ್ರಮುಖ ಸಂಸ್ಥೆಗಳು ಪ್ರತಿಭಾವಂತ ಭಾರತೀಯರಲ್ಲಿ ಜಯತಿ ಘೋಷ್ ಅವರನ್ನು ಸಮಿತಿಗಳಲ್ಲಿ ಸೇರ್ಪಡೆ ಮಾಡಿಕೊಂಡಿದೆ.
ಇದನ್ನು ಓದಿ: ಬೈಡೆನ್ – ಕಮಲಾ ಜೋಡಿಗೆ ಭಾರತೀಯ ಅಮೆರಿಕನ್ ಪ್ರಮುಖರ ಬೆಂಬಲ
ಅಭಿವೃದ್ಧಿ ಆರ್ಥಿಕತೆಯ ಪ್ರಸಿದ್ದ ಪ್ರತಿಪಾದಕಿ ಭಾರತದ ಜಯತಿ ಘೋಷ್ ಅವರನ್ನು ವಿಶ್ವಸಂಸ್ಥೆಯ ಸಾಮಾಜಿಕ-ಆರ್ಥಿಕ ವ್ಯವಹಾರಗಳ ಉನ್ನತ ಮಟ್ಟದ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಸಮಿತಿಯಲ್ಲಿರುವ ಪ್ರಪಂಚದ 20 ಆರ್ಥಿಕ-ಸಾಮಾಜಿಕ ತಜ್ಞರ ಪೈಕಿ ಜಯತಿ ಘೋಷ್ ಒಬ್ಬರಾಗಿದ್ದಾರೆ. ಪ್ರಸ್ತುತ ಹಾಗೂ ಕೋವಿಡ್ ನಂತರ ಜಗತ್ತಿನ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳ ಕುರಿತು ಈ ಸಮಿತಿ ವಿಶ್ವಸಂಸ್ಥೆಗೆ ಶಿಪಾರಸ್ಸುಗಳನ್ನು ಮಾಡಲಿದೆ.
ಸದ್ಯಕ್ಕೆ ಪ್ರಸಿದ ಮಸಾಚುಸೆಟ್ಸ್ ವಿವಿಯಲ್ಲಿ ಹಣಕಾಸು ವಿಭಾಗದ ಪ್ರಾಧ್ಯಾಪಕರಾಗಿರುವ ಜಯತಿಯವರು ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ 35 ವರ್ಷಗಳ ಕಾಲ ಆರ್ಥಶಾಸ್ಯ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ.
ಇದನ್ನು ಓದಿ: ಏರ್ ಇಂಡಿಯಾ ವಿಮಾನಯಾನ ಪೈಲಟ್‌ಗಳಾಗಿ ನಾಲ್ವರು ಮಹಿಳೆಯರು
ಜಯತಿ ಒಬ್ಬ ಭಾರತೀಯ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ. ಅವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಅಧ್ಯಯನದ ಪ್ರಮುಖ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಅರ್ಥಶಾಸ್ತ್ರ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಉದ್ಯೋಗ ಮಾದರಿಗಳು, ಸ್ಥೂಲ ಆರ್ಥಿಕ ನೀತಿ, ಲಿಂಗ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಸೇರಿವೆ. ಫ್ರಂಟ್ ಲೈನ್, ಡೆಕ್ಕನ್ ಕ್ರಾನಿಕಲ್, ಗಣಶಕ್ತಿ, ಏಶಿಯನ್ ಏಜ್ ಪತ್ರಿಕೆಗಳಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕುರಿತು ನಿಯಮಿತವಾಗಿ ಲೇಖನಗಳನ್ನು ಬರೆಯುವುದರ ಮೂಲಕ ಜನಜಾಗೃತಿ ಮಾಡಿದ್ದಾರೆ.
ಇದನ್ನು ಓದಿ: ರೇಷ್ಮಾ ಮರಿಯಮ್ ಭಾರತದ ಅತ್ಯಂತ ಕಿರಿಯ ವಯಸ್ಸಿನ ಗ್ರಾ.ಪಂ ಅಧ್ಯಕ್ಷೆ
ಇವರ “ಪಶ್ಚಿಮ ಬಂಗಾಳದ ಮಾನವ ಅಭಿವೃದ್ಧಿ ವರದಿಗೆ” ವಿಶ್ವಸಂಸ್ಥೆಯ ಬಹುಮಾನ ಸಿಕಿದ್ದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಇವರಿಗೆ ಸಂಶೋಧನಾ ಪ್ರಶಸ್ತಿ ನೀಡಿ ಗೌರವಿಸಿದೆ. ಕೊಲ್ಕತ್ತಾ ಏಷಿಯನ್ ಸೊಸೈಟಿಯ ಸತ್ಯೆಂದ್ರನಾಥ ಪ್ರಶಸ್ತಿ, ಅವಾ ಮೈತಿ ಸ್ಮಾರಕ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಲ್ಲಿವೆ.