‘ವಿದ್ಯಾಗಮನ’ ಯೋಜನೆ ತಾತ್ಕಾಲಿಕ ಸ್ಥಗಿತ : ಸುರೇಶ ಕುಮಾರ್

ಪರ-ವಿರೋಧದ ಚರ್ಚೆಗೆ ಸ್ಥಗಿತವಾಯಿತಾ ವಿದ್ಯಾಗಮನ ಯೋಜನೆ.!?

ಬೆಂಗಳೂರು : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾಗಮನ ಯೋಜನೆಯ ಪರ ವಿರೋಧಗಳ ಚರ್ಚೆಗಳು ಶಿಕ್ಷಕ ಹಾಗೂ ಪೋಷಕರ ವಲಯದಲ್ಲಿ ಕೇಳಿ ಬಂದದ್ದನ್ನು ಗಮನಿಸಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋರೋನಾ ವೈರಾಣುವಿನಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿದುಬಿಟ್ಟದ್ದರು. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದೆಂದು ಅವರ ಹಿತಕ್ಕಾಗಿ ಸರ್ಕಾರ ‘ವಿದ್ಯಾಗಮನ’ ಎಂಬ ಯೋಜನೆಯನ್ನು ತಂದಿತ್ತು. ಈ ಯೋಜನೆ ಅಡಿ ಪ್ರತಿ ಶಾಲೆಯ 20 ರಿಂದ25 ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ತರಗತಿಗಳನ್ನು ನಡೆಸಲಾಗುತ್ತಿತ್ತು.

ಈ ಯೋಜನೆಯಿಂದ ಇಂಟರ್ ನೇಟ್ ವ್ಯವಸ್ಥೆ, ತಂತ್ರಜ್ಞಾನದ ಕೊರತೆ ಇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಅನೇಕ ಜಿಲ್ಲೆಗಳಲ್ಲಿ ಶಿಕ್ಷಕರು ಬಲಿಯಾಗಿದ್ದಾರೆ. ಇನ್ನೂ ಕೆಲವು ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದಾಗಿ ಕೊರೊನಾ ಸೋಂಕು ಮಕ್ಕಳಿಗೂ ತಗಲುವ ಸಾಧ್ಯತೆಗಳು ಹೆಚ್ಚಿರುವುದರಿಂದ ಪೋಷಕರ ಆತಂಕಕ್ಕೆ ಒಳಗಾಗಿ ಹಲವರು ವಿದ್ಯಾಗಮನ ನಿಲ್ಲಿಸುವಂತೆ ಮನವಿ ಮಾಡಿದ್ದರು ಎಂದು ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಯೋಜನೆ ಒಂದು ಕಡೆ ಶಿಕ್ಷಣದಿಂದ ವಂಚಿತರಾಗುವುದನ್ನು ತಡೆದರೇ, ಇನ್ನೊಂದು ಕಡೆ ಈ ಯೋಜನೆ ಅಡಿ ಕೆಲಸ ಮಾಡುವ ಶಿಕ್ಷಕರ ಪರಿಸ್ಥಿತಿಗಳು, ಆತಂಕವನ್ನು ವ್ಯಕ್ತಪಡಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಯೋಜನೆಯ ಕುರಿತು ಪರ ವಿರೋಧಗಳು ಚರ್ಚೆ ನಡೆಯುತ್ತಿವೆ.
ಸರಕಾರ ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದೆ. ಸರಿಯಾದ ಮಾರ್ಗದರ್ಧಿಗಳನ್ನು, ಎಚ್ಚರಿಕೆಗಳನ್ನು ನಿರ್ವಹಿಸದ ಹಿನ್ನಲೆಯಲ್ಲಿ ಇಂತಹ ಗಂಭೀರ ಸಮಸ್ಯೆಗಳು ಉದ್ಭವವಾಗುತ್ತಿವೆ. ಹಾಗಾಗಿ ಕೂಡಲೆ ಸರಕಾರ ಸಭೆ ಕರೆಯಬೇಕು, ಅಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂದು ಪೋಷಕ ಸಂಘಟನೆಯ ಮುಖಂಡರಾದ ನರಸಿಂಹ ಮೂರ್ತಿ ಆಗ್ರಹಿಸಿದ್ದಾರೆ.

ಈ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಆದರೆ ಮುಂದೇನು ಎಂಬ ಪ್ರಶ್ನೆ ಇದೆ. ಈ ದ್ವಂದ್ವ ಪರಿಸ್ಥಿತಿ ವ್ಯಕ್ತತವಾಗಿರುವುದರಿಂದ ಈ ಕುರಿತು ಸರ್ಕಾರ ತುರ್ತು ಸಭೆಯನ್ನು ಕರೆಯಬೇಕು. ಸಭೆಯಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು, ಪೂಷಕರು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು, ವಿರೋಧ ಪಕ್ಷಗಳು ಒಳಗೊಂಡತೆ ಸಭೆ ರಚಿಸಿ, ಚರ್ಚೆಗಳ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಎಸ್ ಎಫ್ ಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸರಕಾರಕ್ಕೆ ಶಿಕ್ಷಕರ ಬಗ್ಗೆ ಕಾಳಜಿ ಇಲ್ಲ, ಅವರ ಆರೋಗ್ಯದ ಬಗ್ಗೆ ಮುತುವರ್ಜಿವಹಿಸದೆ ಅನಗತ್ಯ ಹೊರೆಗಳನ್ನು ಹೇರುತ್ತಿದೆ. ಇದು ಸರಕಾರ ಶಿಕ್ಷಕರಿಗೆ ಎಸಗುತ್ತಿರುವ ದೌರ್ಜನ್ಯ ಎಂದು ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಆರೋಪಿಸಿದ್ದಾರೆ.

ಸರಕಾರ ಹಾಗೂ ಶಿಕ್ಷಣ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಈ ರೀತಿ ಗೊಂದಲ ಸೃಷ್ಟಿಯಾಗುತ್ತಿರುವುದು ಸುರೇಶ್ ಕುಮಾರ್ ರವರಿಗೆ ಗೊತ್ತಿರುವ ವಿಚಾರವಾಗಿದೆ. ಈ ಸಮಸ್ಯೆಗಳಿಗೆ ಬ್ರೆಕ್ ಬೀಳುವುದು ಯಾವಾಗ ಎಂಬುದು ದೊಡ್ಡ ಪ್ರಶ್ನೆಯಾಗಿದೆ?!

Donate Janashakthi Media

Leave a Reply

Your email address will not be published. Required fields are marked *