ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ಮರು ಜಾರಿ, 7ನೇ ವೇತನ ಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೇ ಇರುವುದನ್ನು ಖಂಡಿಸಿ ಫೆ.7ರಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ನೇತೃತ್ವದಲ್ಲಿ ರಾಜ್ಯ ಸರಕಾರಿ ನೌಕರರು ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಫೆ. 7ರಂದು ವಿಧಾನಸೌಧ ಚಲೊ ಹಮ್ಮಿಕೊಂಡಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆ ನಡೆಯಲಿದೆ. ಎನ್‌ಪಿಎಸ್ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರು 2023ರ ಡಿಸೆಂಬರ್ 19ರಿಂದ 14 ದಿನಗಳ ಕಾಲ ಬೃಹತ್ ಮಟ್ಟದಲ್ಲಿ “ಮಾಡು ಇಲ್ಲವೇ ಮಡಿ” ಹೆಸರಿನ ರಾಜ್ಯ ಮಟ್ಟದ ಧರಣಿ ಕಾರ್ಯಕ್ರಮವನ್ನು ನಡೆಸಿರುತ್ತಾರೆ. ಈ ಹೋರಾಟ ಕಾರ್ಯಕ್ರಮವನ್ನು ಒಕ್ಕೂಟವು ಸೇರಿದಂತೆ ರಾಜ್ಯದ ಎಲ್ಲ ನೌಕರಪರ ಸಂಘಟನೆಗಳು ಬೆಂಬಲಿಸಿದ್ದವು. ಆದರೆ, ರಾಜ್ಯ ಸರ್ಕಾರವು ನೌಕರರ ಹೋರಾಟವನ್ನುಗಂಭೀರವಾಗಿ ಪರಿಗಣಿಸದೇ ಮಾತುಕತೆಗೆ ನೌಕರ ಮುಖಂಡರನ್ನುಕರೆಯದೇ ಉದಾಸೀನ ತೋರಿದೆ. ಇದು ರಾಜ್ಯ ಸರ್ಕಾರಿ ನೌಕರರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಜ್ಯಾಧ್ಯಕ್ಷ ಎಚ್ ಎಸ್ ಜೈಕುಮಾರ ಹೇಳಿದರು.
ಇದನ್ನೂ ಓದಿ : ಹದಿನೆಂಟು ತಿಂಗಳ ತುಟ್ಟಿ ಭತ್ಯೆ ರದ್ದು: ಸರಕಾರದ ಕ್ರಮ ಖಂಡಿಸಿ ಸರಕಾರಿ ನೌಕರರ ಪ್ರತಿಭಟನೆ
ಕೇಂದ್ರ ಹಾಗೂ ನೆರೆ ರಾಜ್ಯಗಳ ಮತ್ತು ಹೈಕೋರ್ಟ್‍ನ ನೌಕರರ ವೇತನಕ್ಕೂ ನಮ್ಮರಾಜ್ಯದ ನೌಕರರ ವೇತನಕ್ಕೂ ಕನಿಷ್ಠ 40% ವೇತನ ವ್ಯತಾಸವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಶೇ. 25ರಷ್ಟು ಮಧ್ಯಂತರ ಪರಿಹಾರ ಘೋಷಿಸಬೇಕು. 7ನೇ ವೇತನಆಯೋಗದ ಪರಿಷ್ಕರಣೆ ಸಂಬಂಧರಾಜ್ಯ ನೌಕರರಿಗೆ ನೀಡಬೇಕಾದ ಹೆಚ್ಚಿನ ವೇತನ ಪರಿಷ್ಕರಣೆಗಾಗಿ ವೇತನ 2023-24ನೇ ಆಯವ್ಯಯದಲ್ಲಿ ಅಂದಾಜು ಅನುದಾನವನ್ನು ಕಾಯ್ದಿರಿಸಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಸುಮಾರು 2.80 ಲಕ್ಷಕ್ಕೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವುದು. ಆಡಳಿತ ಸುಧಾರಣೆ ನೆಪದಲ್ಲಿ ಶಿಫಾರಸ್ಸು ಮಾಡಲಾಗಿರುವ ಹುದ್ದೆಗಳ ಕಡಿತವನ್ನು ಕೈಬಿಡುವುದು ಮತ್ತು ಸರ್ಕಾರಿ ಸೇವೆಗಳ ಖಾಸಗೀಕರಣ ಕೈ ಬಿಡುವುದು, ಹೊರಗುತ್ತಿಗೆ ನೌಕರರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಎಲ್ಲಾ ನೇರ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಬೇಕು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು ಎಂದು ಜೈಕುಮಾರ್ ಆಗ್ರಹಿಸಿದ್ದಾರೆ.
ಪ್ರಸ್ತುತ ಸರ್ಕಾರವು 7ನೇ ವೇತನಆಯೋಗವನ್ನು ವಿಳಂಬವಾಗಿ ರಚನೆ ಮಾಡಿರುವುದಲ್ಲದೇ, ಇದುವರೆಗೂ ವೇತನ ಆಯೋಗವು ಕ್ಷಿಪ್ರವಾಗಿ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುವ ಮತ್ತುರಾಜ್ಯ ಸರ್ಕಾರವು ಆಯವ್ಯಯ ಮಂಡನೆಯಲ್ಲಿ ಜಾರಿಗೊಳಿಸುವ ಕುರುಹುಗಳು ಕಂಡು ಬರದೇ ಇರುವುದು ನೌಕರರಲ್ಲಿ ತೀವ್ರ ಅಶಾಂತಿ ಮತ್ತುಅತೃಪ್ತಿಯನ್ನುಉಂಟು ಮಾಡಿದೆ. 7ನೇ ವೇತನಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೇಇರುವುದರಿಂದ ವಾರ್ಷಿಕವಾಗಿ ನೌಕರರಿಗೆರೂ.15,000 ಕೋಟಿ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.