ಚಿಕ್ಕಮಗಳೂರು: ಸಾಫ್ಟ್‌ವೇರ್ ಉದ್ಯೋಗಿ ಮಹಿಳೆಯೊಬ್ಬರು ಪಿಎಚ್‌ಡಿ ಮಾಡುವ ಆಸೆಯಿಂದಾಗಿ ಆನ್‌ಲೈನ್‌ನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳನ್ನು ಹುಡುಕಿ, ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿದ್ದು ಅಲ್ಲದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸರಿಸುಮಾರು ರೂ. 75 ಲಕ್ಷ ಮೊತ್ತದ ಶುಲ್ಕವನ್ನು ಕಟ್ಟಿದ್ದಾರೆ. ಆದರೆ, ವಿದೇಶಿ ವಿವಿಯು ಒಂದು ಪ್ರಮಾಣ ಪತ್ರವನ್ನು ನೀಡಿದ್ದು ಅದು ನಿಜವಾದುದ್ದಲ್ಲವೆಂದು ತಿಳಿದ ಮಹಿಳೆ ತಾನು ಮೋಸ ಹೋಗಿರುವುದು ಕಂಡು ಬಂದಿದೆ.
ಮಹಿಳೆಯು 2018ರಲ್ಲಿ ಆನ್‌ಲೈನ್ ಮೂಲಕ ವಿದೇಶಿ ವಿವಿಯನ್ನು ವಂಚಿಸಿದ ಜಾಲತಾಣದಲ್ಲಿ ದಾಖಲಾಗಿದ್ದಾಳೆ. ಆನ್‍ಲೈನ್‍ನಲ್ಲಿ ನೆಸ್ಟರ್ ಎಂಬ ವಿಶ್ವವಿದ್ಯಾಲಯವನ್ನು ಹುಡುಕಿ, ಎಲ್ಲಾ ವಿವರಣೆಗಳನ್ನು ದಾಖಲಿಸಿ ಸಲ್ಲಿಕೆ ಮಾಡಿದ್ದಾರೆ. 2018 ರಿಂದಲೂ ಆಗಾಗ್ಗೆ ನೆಸ್ಟರ್ ಯುನಿವರ್ಸಿಟಿ ಎಂದು ಹೇಳಿ ಕರೆ ಮಾಡಿದಾಗಲೆಲ್ಲಾ ಸುಮಾರು 4 ವರ್ಷದಿಂದಲೂ ಮಹಿಳೆ ಹಣ ಕಳುಹಿಸಿದ್ದಾರೆ. ಇದೀಗ ಆ ಹಣದ ಒಟ್ಟು 75 ಲಕ್ಷ ರೂಪಾಯಿ ಆಗಿದೆ.
ಸತತ ನಾಲ್ಕು ವರ್ಷ ಶೈಕ್ಷಣಿಕ ಅವಧಿ ಮುಗಿದಿದೆ ಎಂದು ಮಹಿಳೆ ಕೇಳಿಕೊಂಡಾಗ ಅವರಿಗೊಂದು ಪಿಎಚ್‌ಡಿ ಪ್ರಮಾನಪತ್ರ ಕಳಿಸಿದ್ದಾರೆ. ಪ್ರಮಾಣ ಪತ್ರ ಕೈಸೇರಿದ ಖುಷಿಯಲ್ಲಿ ಆ ಮಹಿಳೆಯೂ ಇದ್ದಳು. ಆದರೆ ಇದು ಬೇರೊಬ್ಬರಿಗೆ ತೋರಿಸಿದಾಗ ಅಸಲಿಯಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ಆಕೆ ಪಿಎಚ್‌ಡಿ ಮಾಡಿದ್ದ ವಿಶ್ವವಿದ್ಯಾಲಯ ಅದು ವಿಶ್ವವಿದ್ಯಾಲಯವೇ ಅಲ್ಲ ಎಂದು ಆಕೆಗೆ ನಾಲ್ಕು ವರ್ಷಗಳ ಬಳಿಕ ಗೊತ್ತಾಗಿದೆ. ಪಿಎಚ್‌ಡಿ ಹೆಸರಿನಲ್ಲಿ ಸೈಬರ್ ವಂಚಕರು ಆಕೆಯನ್ನು ಮೋಸಗೊಳಿಸಿದ್ದು, 75 ಲಕ್ಷ ರೂಪಾಯಿ ಹಣ ಪಡೆದು ನಕಲಿ ಪ್ರಮಾಣ ಪತ್ರ ನೀಡಿದ್ದಾರೆ.
ನೆಸ್ಟರ್ ಯೂನಿವರ್ಸಿಟಿ (NESTOR University) ವೆಬ್ ತಾಣವನ್ನು ಪರಿಶೀಲಿಸಿ, ಎಲ್ಲಾ ವಿವರಗಳನ್ನು ದಾಖಲು ಮಾಡಿದೆ. ನಂತರ [email protected] ನಿಂದ ಇ–ಮೇಲ್ ಕಳಿಸಿದ್ದರು. ದೂರ ಶಿಕ್ಷಣ ಪದ್ಧತಿಯಲ್ಲಿ ಪಿಎಚ್.ಡಿ (ವಿಷಯ: ‘ವೇಸ್ಟ್ ವಾಟರ್ ಎಂಜಿನಿಯರಿಂಗ್’) ದಾಖಲಾದೆ. ವೇನ್ ರೋಜರ್ಸ್ ಎಂಬವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದೆ. 2019ರ ಸೆಪ್ಟೆಂಬರ್‌ನಲ್ಲಿ ಪಿಎಚ್.ಡಿ ಪತ್ರ ಕಳಿಸಿದ್ದರು. ನಂತರ, 2022 ಏ.24ರಂದು ಡಾ.ಜಾಸನ್ ಬಿ ಜೋರ್ಡಾನ್ ಹೆಸರಿನಿಂದ ಇ–ಮೇಲ್ ಕಳಿಸಿ, ಕಾನೂನು ತೊಡಕು ಇರುವುದರಿಂದ ‘ಅರ್ಹತೆ– ಸಮಾನರ್ಹತೆ’(ಕ್ಲಿಯರೆನ್ಸ್ ಅಂಡ ಇಕ್ವಿವೆಲೆನ್ಸ್) ನಿಟ್ಟಿನಲ್ಲಿ ಹಣ (ಶುಲ್ಕ, ತೆರಿಗೆ…) ಕಟ್ಟಬೇಕು ಎಂದು ಅದರಲ್ಲಿ ತಿಳಿಸಿದ್ದರು.
ಅವರು ಕಳಿಸಿದ್ದ ಖಾತೆಗೆ ಸಿಟಿ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಇತರ ಬ್ಯಾಂಕ್ ಮೂಲಕ ಹಂತಹಂತವಾಗಿ ಈವರೆಗೆ (ಆ.19) ಒಟ್ಟು ₹ 73.68 ಲಕ್ಷ (91,947 ಡಾಲರ್) ಆನ್‌ಲೈನ್‌ನಲ್ಲಿ ಪಾವತಿಸಿದ್ದೇನೆ.
ಮೋಸ ಹೋದ ಮಹಿಳೆಯು ಹಣಕಾಸಿನ ತನ್ನ ಎಲ್ಲಾ ವ್ಯವಹಾರಗಳನ್ನು ಬ್ಯಾಂಕ್ ಮೂಲಕ ಮಾಡಿದ್ದಾರೆ. ಹಣವನ್ನು ಯಾರ ಖಾತೆಗೆ ಹಾಕಿದ್ದಾಳೋ ಎಂಬುವುದು ತಿಳಿದು ಬಂದಿಲ್ಲ. ಇದೀಗ ಪಿ.ಎಚ್.ಡಿ. ನಕಲಿ ಪಿಎಚ್‌ಡಿ ಪ್ರಮಾಣಪತ್ರ ಪಡೆದುಕೊಂಡು ಮೋಸ ಹೋಗಿದ್ದೇನೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಾಲ್ಕು ವರ್ಷದಲ್ಲಿ 75 ಲಕ್ಷ ರೂಪಾಯಿ ಹಣ ಕಳೆದುಕೊಂಡ ಮೇಲೆ ಮೋಸ ಹೋದ ಮಹಿಳೆ ಚಿಕ್ಕಮಗಳೂರು ನಗರದ ಸಿಇಎನ್ (ಸೈಬರ್, ಆರ್ಥಿಕ, ಮಾದಕ) ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಐಡಿ, ಬೆಂಗಳೂರು ಸೈಬರ್ ಜೊತೆ ಜಿಲ್ಲಾ ಪೊಲೀಸರು ಸಂಪರ್ಕದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಇದು ವಿಶ್ವವಿದ್ಯಾಲಯವೇ ಅಲ್ಲವೆಂದು ತಿಳಿದು ಬಂದಿದೆ. ಈ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿದ್ದಲ್ಲಿ, ವಿದೇಶಕ್ಕೆ ಪ್ರಯಾಣಿಸಲು ಅನುಕೂಲವಾಗುತ್ತದೆ ಎಂದು ನಂಬಿಸಿ ಈ ರೀತಿ ಮೋಸ ಮಾಡಲಾಗಿದೆ ಎಂದ ವರದಿಯಾಗಿದೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಅಮೆರಿಕದ ಕೋರ್ಟ್ ಅನುಮತಿ ಬೇಕಿದೆ:
‘ಮಹಿಳೆಯು ಹಣ ವರ್ಗಾಯಿಸಿರುವ ಖಾತೆಗಳ ವಿವರ ಪಡೆದಿದ್ದೇವೆ. ಅಮೆರಿಕದ ಬ್ಯಾಂಕ್‌ಗಳಿಗೆ ಜಮೆಯಾಗಿದೆ. ಹಣ ‘ಫ್ರೀಜ್’ ಮಾಡಿಸಲು ಪ್ರಯತ್ನಿಸಿದೆವು. ಅದಕ್ಕೆ ಅಮೆರಿಕದ ಕೋರ್ಟ್ ಅನುಮತಿ ಬೇಕು. ಹೀಗಾಗಿ, ಇಂಟರ್‌ಪೋಲ್ ಮೂಲಕ ಮುಂದುವರಿಯಲು ಚಿಂತನೆ ನಡೆಸಿದ್ದೇವೆ’ ಎಂದು ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ನಾಸಿರ್ ಹುಸೇನ್ ತಿಳಿಸಿದ್ದಾರೆ.