ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ

ಭೋಪಾಲ್: 11ನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ನಾಲ್ಕು ಕಾರು ಬಳಸಿ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಆಸೌಫ್ ಆಲಿ ಖಾನ್ ಆರೋಪಿ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಕಾರಿನಲ್ಲಿ ಪ್ರವಾಸಕ್ಕೆಂದು ಕರೆತಂದು ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತ 

ಈ ಘಟನೆಯಿಂದ ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಆದರೆ ಅಸೌಫ್ ಅಲಿ ಖಾನ್ ಅತ್ಯಾಚಾರ ಎಸಗುತ್ತಿದ್ದ ವೇಳೆ ಕಾರಿನ ಹೊರಗಡೆ ಕಾವಲಾಗಿ ನಿಂತಿದ್ದ ಮಜ್ ಖಾನ್ ಆಕೆಯ ವಿಡಿಯೋ ರೆಕಾರ್ಡ್ ಮಾಡಿ ಮರು ದಿನದಿಂದಲೇ ಬೆದರಿಕೆ ಶುರುಮಾಡಿದ್ದಾನೆ. ಅಪ್ರಾಪ್ತ 

ಬಳಿಕ ವಿಡಿಯೋ ಹರಿಬಿಡುವುದಾಗಿ ಬೆದರಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಇಷ್ಟೇ ಅಲ್ಲ 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ ಇಲಾಖೆಯಿಂದ ಯಾವುದೇ ಪ್ರವಾಸ ಆಯೋಜಿಸಿಲ್ಲ: ಸಚಿವ ಕೆ. ವೆಂಕಟೇಶ್ ಸ್ಪಷ್ಟನೆ

ಐಫೋನ್ ಮೂಲಕ ವಿಡಿಯೋ ರೆಕಾರ್ಡ್

ಮಜ್ ಖಾನ್ ತನ್ನ ಐಫೋನ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಬಳಿಕ ಬಾಲಕಿ ಭೇಟಿಯಾಗಿ ವಿಡಿಯೋ ತೋರಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಮೂಲಕ ಹರಿಬಿಡುವುದಾಗಿ ಬೆದರಿಸಿದ್ದಾನೆ. ಬೆದರಿಕೆಗೆ ಅಂಜಿದ ಬಾಲಿಕಿಯನ್ನು ಮಜ್ ಖಾನ್ ಹಾಗೂ ಆತನ ಸ್ನೇಹಿತರು ಮೂರು ಕಾರಿನಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ಬಳಸಿಕೊಂಡಿದ್ದಾರೆ. ಒಂದೊಂದು ಕಾರಿನಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಬಳಸಿಕೊಂಡಿದ್ದಾರೆ.

ಬಳಿಕ ಪ್ರತಿ ದಿನ ಬಾಲಕಿಯನ್ನು ಬಳಸಿಕೊಳ್ಳಲು ಪ್ಲಾನ್ ಮಾಡಿದ್ದಾಳೆ. ಆದರೆ ಬಾಲಕಿ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಆರಂಭಿಸುತ್ತಿದ್ದಂತೆ ಕೆರಳಿದ ಆರೋಪಿಗಳು 40,000 ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಮಾನಸಿಕವಾಗಿ ಕುಗ್ಗಿ ಹೋದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಹೀಗಾಗಿ ಪ್ರಕರಣ ದಾಖಲಾಗಿದೆ. ಈ ಪೈಕಿ ಮಜ್ ಖಾನ್ ಅರೆಸ್ಟ್ ಮಾಡಿ ವಿಚಾರಿಸಿದಾಗ ಅಸೌಫ್ ಆಲಿ ಕೃತ್ಯ ಬೆಳಕಿಗೆ ಬಂದಿದೆ.

ಹೀಗಾಗಿ ಅಸೌಫ್ ಅಲಿ ಖಾನ್ ಕೂಡ ಬಂಧಿಸಲಾಗಿದೆ. ಇತ್ತ ಪೊಲೀಸ್ ಠಾಣೆಯ ಪೊಲೀಸ್ ಪೇದೆಯ ಜೊತೆ ಆರೋಪಿಗಳು ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಈ ಪೊಲೀಸ್ ಪೇದೆಯ ಕೆಲ ಮಾಹಿತಿಗಳನ್ನು ಲೀಕ್ ಮಾಡುತ್ತಿರುವುದಾಗಿ ಪತ್ತೆಯಾಗಿದೆ. ಇಷ್ಟೇ ಅಲ್ಲ ಪೇದೆಯ ನೆರವಿನಿಂದ ಆರೋಪಿಗಳು ಮತ್ತಷ್ಟು ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಹೀಗಾಗಿ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.

ಇದನ್ನೂ ನೋಡಿ: ಗುತ್ತಿಗೆ ಜೀವನಕ್ಕೆ ಅಂತ್ಯ ಬೇಕು – ಫೆ 12ಕ್ಕೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ | ಎಸ್ ವರಲಕ್ಷ್ಮಿ

Donate Janashakthi Media

Leave a Reply

Your email address will not be published. Required fields are marked *