ಬಿಹಾರದ ಎಸ್‍ಐಆರ್ ಪ್ರಕ್ರಿಯೆಯಲ್ಲಿ ‘ಅಕ್ರಮ’ಗಳ ವೀಡಿಯೋ ಪ್ರಸಾರ

ಹಿರಿಯ ಪತ್ರಕರ್ತರ ಮೇಲೆ ಎಫ್‍ಐಆರ್ ಗೆ ಡಿಜಿಟಲ್‍ ಪತ್ರಿಕೆಗಳು, ಪತ್ರಕರ್ತರ ಸಂಘಟನೆಗಳ ಖಂಡನೆ
ಬಿಹಾರ: ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ನಲ್ಲಿ ನಡೆಯುತ್ತಿದೆಯೆನ್ನಲಾದ  ಅಕ್ರಮಗಳನ್ನು ಬಹಿರಂಗಪಡಿಸಿದ ವೀಡಿಯೊಗಾಗಿ ಪ್ರಸಿದ್ಧ ಸ್ವತಂತ್ರ ಪತ್ರಕರ್ತ ಅಜಿತ್ ಅಂಜುಮ್ ರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು, ಏಕೆಂದರೆ ಇದು ಸ್ವತಂತ್ರ ಪತ್ರಕಾರಿತೆಯ ಮೇಲಿನ ಮತ್ತು ಸತ್ಯವನ್ನು ತಿಳಿಯುವ ಸಾರ್ವಜನಿಕರ ಹಕ್ಕಿನ ಮೇಲೆ  ನೇರ ಪ್ರಹಾರ ಎಂದು ಡಿಜಿಟಲ್ ಸುದ್ದಿ ಮಾಧ್ಯಮಗಳ ಸಮೂಹ ಸಂಘಟನೆ ಡಿಜಿಪಬ್ ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾ(ಪಿಸಿಐ) ಮತ್ತು ಭಾರತೀಯ ಮಹಿಳಾ ಪ್ರೆಸ್ ಪಡೆ(ಐಡಬ್ಲ್ಯುಪಿಸಿ) ಮುಂತಾಧ ಪತ್ರಕರ್ತರ ಸಂಘಟನೆಗಳು ಒತ್ತಾಯಿಸಿವೆ. ಬಿಹಾರ

ಲಕ್ಷಾಂತರ ವೀಕ್ಷಕರು ವೀಕ್ಷಿಸುವ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಬಿಹಾರದ ಪ್ರಶಸ್ತಿ ವಿಜೇತ ಪತ್ರಕರ್ತ ಅಜಿತ್ ಅಂಜುಮ್ ಬುಡಮಟ್ಟದಿಂದ ವರದಿಗಳನ್ನು ಮಾಡುತ್ತಿರುವವರು. ಬೇಗುಸರಾಯ್‌ನ ಬಲಿಯಾ ಪೊಲೀಸ್ ಠಾಣೆಯಲ್ಲಿ ಜುಲೈ 13 ರಂದು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಬಿಹಾರ

ಈ ಎಫ್‌ಐಆರ್ ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ ಎಂದು ಡಿಜಿಪಬ್ ಹೇಳಿಕೆಯಲ್ಲಿ ತಿಳಿಸಿದೆ, ಬೇಗುಸರಾಯ್‌ನಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಕುರಿತು ವರದಿ ಮಾಡುವಾಗ, ಅಜಿತ್ ಅಂಜುಮ್ ಸ್ಥಳೀಯ ಜನರು ತಮ್ಮೊಂದಿಗೆ ಹಂಚಿಕೊಂಡಿದ್ದನ್ನು ನಿಖರವಾಗಿ ಎತ್ತಿ ತೋರಿಸಿದರು. ಅವರ ಪ್ರಕಾರ, ಅವರು ಎಸ್‌ಐಆರ್‌ಗೆ ಸಂಬಂಧಿಸಿದ ಸಂಗತಿಗಳನ್ನು ಹೊರತರಲು ಪ್ರಯತ್ನಿಸುತ್ತಿದ್ದರು. ಆದಾಗ್ಯೂ, ಈ ಪ್ರಾಮಾಣಿಕ ಪ್ರಯತ್ನವು ಸರ್ಕಾರ ಮತ್ತು ಆಡಳಿತವನ್ನು ಅಸಮಾಧಾನಗೊಳಿಸಿದಂತೆ ಕಾಣುತ್ತದೆ ಎಂದು ಡಿಜಿಪಬ್‍ ಹೇಳಿದೆ.

ಇದನ್ನೂ ಓದಿ: ಅಗಾಧ ಅಸಮಾನತೆಯ ನಡುವೆ ‘ಸಮಾನತೆ’ಯ ಹುಸಿ ಸಂಭ್ರಮ!

ಎಫ್‌ಐಆರ್‌ಗೆ ಮೊದಲು ಹೊರಡಿಸಿದ್ದ ಬೇಗುಸರಾಯ್ ಜಿಲ್ಲಾಡಳಿತದ ಪತ್ರಿಕಾ ಪ್ರಕಟಣೆಯಲ್ಲಿ ಅಂಜುಮ್ ರದ್ದು “ದಾರಿತಪ್ಪಿಸುವ” ವರದಿ ಎಂದಿತ್ತು ಎಂಬ ಸಂಗತಿಯತ್ತ ಡಿಜಿಪಬ್‍ ಗಮನ ಸೆಳೆದಿದೆ.

“ಈ ಅಸ್ಪಷ್ಟ ಆರೋಪಗಳು ವಿಶ್ವಾಸಾರ್ಹವೂ ಅಲ್ಲ ಅಥವಾ ಎಫ್‌ಐಆರ್‌ಗೆ ಸಾಕಷ್ಟು ಕಾರಣವೂ ಅಲ್ಲ. ಅಧಿಕಾರಿಗಳು ಒಂದೋ ಪತ್ರಕರ್ತರ ಪ್ರಶ್ನೆಗಳಿಗೆ ನಿಖರ ಮತ್ತು ವಾಸ್ತವಿಕ ಮಾಹಿತಿಯನ್ನು ಒದಗಿಸಲು ಕಲಿಯಬೇಕು, ಇಲ್ಲವಾದರೆ ಪತ್ರಕರ್ತರು ಸ್ವಂತವಾಗಿ ಪಾರದರ್ಶಕತೆಯನ್ನು ಒದಗಿಸಬೇಕಾದ, ಆದರೆ ಸಾಮಾನ್ಯವಾಗಿ ಕೊಡದ ಪ್ರಜಾಪ್ರಭುತ್ವ ಯಂತ್ರದಿಂದ ಯಾವುದೇ ಸಹಕಾರವಿಲ್ಲದೆ ಮಾಹಿತಿಯನ್ನು ಕಂಡುಕೊಂಡಾಗ ಪಕ್ಕಕ್ಕೆ ಸರಿಯಬೇಕು” ಎಂದು ಅಭಿಪ್ರಾಯ ಪಟ್ಟಿರುವ ಹೇಳಿಕೆ, ಈ ಕ್ರಮವು ಪತ್ರಿಕಾರಂಗದ ಬಾಯಿ ಮುಚ್ಚಿಸುವ ಮತ್ತು ಅಪಥ್ಯವಾದ ಸತ್ಯಗಳನ್ನು  ನಿಗ್ರಹಿಸುವ ವ್ಯವಸ್ಥಿತ ಮತ್ತು ಉದ್ದೇಶಪೂರ್ವಕ ಪ್ರಯತ್ನದಂತೆ ಕಾಣುತ್ತದೆ ಎಂದು ಹೇಳಿದೆ.

“ಈ ಎಫ್‌ಐಆರ್, ನಮ್ಮ ಅಭಿಪ್ರಾಯದಲ್ಲಿ, ಸಾಂಸ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ,  ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ. ನಾವು ಅಜಿತ್ ಅಂಜುಮ್ ಮತ್ತು ಸತ್ಯವನ್ನು ಮಾತನಾಡುವ ಧೈರ್ಯ ಹೊಂದಿರುವ ಪ್ರತಿಯೊಬ್ಬ ಪತ್ರಕರ್ತರೊಂದಿಗೆ ನಿಲ್ಲುತ್ತೇವೆ” ಎಂದು ಡಿಜಿಪಬ್‍ ಹೇಳಿದೆ.

ಎಫ್‌ಐಆರ್ ಅಂಜುಮ್ ರನ್ನು “ಮಾತ್ರವಲ್ಲ, ಬುಡಮಟ್ಟದಿಂದ  ವರದಿ ಮಾಡಲು ಧೈರ್ಯ ಮಾಡುವ” ಎಲ್ಲಾ ಸ್ವತಂತ್ರ ಪತ್ರಕರ್ತರನ್ನು ಬೆದರಿಸುವ” ಪ್ರಯತ್ನವಾಗಿದೆ, ಪಿಸಿಐ ಮತ್ತು ಐಡಬ್ಲ್ಯೂಪಿಸಿ, ಅಂಜುಮ್ ಜವಾಬ್ದಾರಿಯುತ ಮತ್ತು ಪ್ರಭಾವಶಾಲಿ ವರದಿಗಳನ್ನು ಕೊಡುವ ದೀರ್ಘಕಾಲದ ದಾಖಲೆಯನ್ನು” ಹೊಂದಿದ್ದಾರೆ ಎಂದು ಎತ್ತಿ ತೋರಿಸುತ್ತಾ, ಅವರು ತಮ್ಮ ವೀಡಿಯೋದಲ್ಲಿ ಬೆಳಕಿಗೆ ತಂದ ಎಸ್‍ಐಆರ್ ನಲ್ಲಿನ ಕೆಲವು ಅಕ್ರಮಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡುವ ಬದಲು ಆಡಳಿತವು ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ, ಇದರ ಪರಿಣಾಮವಾಗಿ ಒಬ್ಬ ಹಿರಿಯ ಪತ್ರಕರ್ತರ ವಿರುದ್ಧ” ಎಫ್‌ಐಆರ್ ದಾಖಲಿಸಿದೆ ಎನ್ನುತ್ತ, ಅಧಿಕಾರಿಗಳು ಕ್ರಮಬದ್ಧವಾಗಿ ನಡೆದುಕೊಳ್ಳಬೇಕು ಮತ್ತು  ಪತ್ರಕರ್ತರಾಗಿ ಮತ್ತು ನಾಗರಿಕರಾಗಿ  ಅಂಜುಮ್ ಅವರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು ‘ ಎಂದು ಕರೆ ನೀಡಿವೆ.

ಜುಲೈ 12 ರಂದು ಅಪ್‌ಲೋಡ್ ಮಾಡಲಾದ ಅಂಜುಮ್ ಅವರ ವೀಡಿಯೊ, ಭಾರತ ಚುನಾವಣಾ ಆಯೋಗವು ಬಿಹಾರದಲ್ಲಿ ಪ್ರಾರಂಭಿಸಿದ ಎಸ್‍ಐಆರ್‍ ಪ್ರಕ್ರಿಯೆಯ ಸಮಯದಲ್ಲಿ, ಬಲಿಯಾದಲ್ಲಿನ ಒಂದು ಕೇಂದ್ರದಲ್ಲಿ ಹೇಗೆ ಹಲವಾರು ಮತದಾರರ ನಮೂನೆಗಳು ಅಪೂರ್ಣವಾಗಿದ್ದವು ಮತ್ತು ಆಯೋಗ ಕೇಳಿರುವ  ಅಗತ್ಯ ದಾಖಲೆಗಳು ಅಥವಾ ಫೋಟೋಗಳಿಲ್ಲದೆ ಅಪ್‌ಲೋಡ್ ಮಾಡಲಾಗುತ್ತಿತ್ತು ಎಂಬುದನ್ನು ತೋರಿಸಿದೆ. ಅವರ ವಿರುದ್ಧ ಕ್ರಿಮಿನಲ್ ಅತಿಕ್ರಮಣ, ಕಾನೂನುಬದ್ಧ ಆದೇಶವನ್ನು ಉಲ್ಲಂಘಿಸುವುದು, ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯವನ್ನು ಮಾಡದಂತೆ ತಡೆಯುವುದು ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸಲು ಪ್ರಯತ್ನಿಸುವುದು ಮುಂತಾದ ಸೆಕ್ಷನ್‍ಗಳ ಅಡಿಯಲ್ಲಿ  ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆದರೆ, ಅಂಜುಮ್ ಅವರು ತಮ್ಮ ವರದಿಗಳಿಗೆ ತಾವು ಬದ್ಧರಾಗಿರುವುದಾಗಿ ಹೇಳಿದ್ದಾರೆ. ಈ ವರದಿಗಳು ಚುನಾವಣೆಯ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಹಾನಿ ಮಾಡುವ ಅಕ್ರಮಗಳನ್ನು ಮಾತ್ರ ಎತ್ತಿ ತೋರಿಸುತ್ತಿದ್ದವು ಎಂದಿರುವ ಅವರು “ನಾನು, ಜಾಗೃತ ಪತ್ರಕರ್ತನಾಗಿ, ಭಾರತ ಚುನಾವಣಾ ಆಯೋಗದ ನಿಯಮಗಳನ್ನು ಹೇಗೆ ಪಾಲಿಸಲಾಗುತ್ತಿಲ್ಲ ಎಂಬುದನ್ನು ತೋರಿಸಿದ್ದೇನೆ. ನಾನು ಯಾರ ಗುರುತನ್ನೂ ಬಹಿರಂಗಪಡಿಸಿಲ್ಲ, ಅಥವಾ ಗಣನೆ ಫಾರ್ಮ್‍ಗಳ ಯಾವುದೇ ಹತ್ತಿರದ ಚಿತ್ರಗಳನ್ನು ತೋರಿಸಿಲ್ಲ. “ಅವರು ತಮ್ಮ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ನಾನು ಹೆದರುವವನಲ್ಲ” ಎನ್ನುತ್ತ  ತಾನು ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತೇನೆ ಮತ್ತು ಅಗತ್ಯವಿದ್ದರೆ ಕಾನೂನಿನ ಪರಿಹಾರಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಇದನ್ನೂ ನೋಡಿ: ಚನ್ನರಾಯಪಟ್ಟಣ| ಗೆದ್ದ ಅನ್ನದಾತ, ಮಣಿದ ಕಾರ್ಪೊರೇಟ್ ಧಣಿ! Janashakthi Media

Donate Janashakthi Media

Leave a Reply

Your email address will not be published. Required fields are marked *