ಉಪರಾಷ್ಟ್ರಪತಿಗಳ ಹಠಾತ್ ರಾಜೀನಾಮೆ ಮತ್ತು ಆ ವಿಷಯದಲ್ಲಿ ಆಳುವ ಪಕ್ಷದ ವರ್ತನೆ ಬಹಳಷ್ಟು ಅನುಮಾನಗಳನ್ನು ಸೃಷ್ಟಿಸಿದ್ದರೆ, ಈಗ ಆ ಸ್ತಾನಕ್ಕೆ ಚುನಾವಣೆ ಸಂವಿಧಾನವನ್ನು ರಕ್ಷಿಸುವ ಹೋರಾಟವಾಗಿ ವಿಕಸನಗೊಳ್ಳುತ್ತಿದೆ. ಸ್ವಾಭಾವಿಕವಾಗಿಯೇ, ಸಂವಿಧಾನವನ್ನು ನಾಶಮಾಡಿ ಅದರ ಸ್ಥಳದಲ್ಲಿ ಮನು ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವವರು ಪ್ರತಿಪಕ್ಷಗಳ ಅಭ್ಯರ್ಥಿ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿಯವರ ವಿರುದ್ಧ ದ್ವೇಷವನ್ನು ಹೊರಹಾಕುತ್ತಿದ್ದಾರೆ. ಅವರ ಬಗ್ಗೆ ಅಮಿತ್ ಶಾ ಟೀಕೆ ಈ ದ್ವೇಷದ ಅಭಿವ್ಯಕ್ತಿಯಾಗಿ ಕಾಣುತ್ತಿದೆ. ಸಲ್ವಾ ಜುಡುಮ್ ತೀರ್ಪು ಕುರಿತಂತೆ ಕೇಂದ್ರ ಗೃಹಮಂತ್ರಿಗಳು ಹೇಳಿದ್ದನ್ನು ಗಮನಿಸಿದರೆ, 2007 ರಿಂದ 2025 ರವರೆಗೆ ಇಡೀ ಸುಪ್ರೀಂ ಕೋರ್ಟ್ ನಕ್ಸಲ್ ವಾದಿಗಳನ್ನು ಬೆಂಬಲಿಸುತ್ತಿದೆ ಎಂದು ವಾದಿಸಿದಂತಾಗುತ್ತದೆ. ಉಪರಾಷ್ಟ್ರಪತಿ
-ಸಿ. ಸಿದ್ದಯ್ಯ
ಉಪರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಕೂಟದ ಅಭ್ಯರ್ಥಿಯಾಗಿರುವ ನ್ಯಾ. ಸುದರ್ಶನ್ ರೆಡ್ಡಿ ಅವರನ್ನು ನಕ್ಸಲ್ ಬೆಂಬಲಿಗ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. 2011 ರಲ್ಲಿ ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ವಿರುದ್ಧ ಪ್ರಭುತ್ವ ಪ್ರಾಯೋಜಿತ ಹತ್ಯೆಗಳು ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸಲ್ವಾ ಜುಡುಮ್ ಎಂಬ ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ ಇಬ್ಬರು ನ್ಯಾಯಾಧೀಶರ ಪೀಠದಲ್ಲಿ ನ್ಯಾ. ಸುದರ್ಶನ್ ರೆಡ್ಡಿ ಒಬ್ಬರು. ಇದನ್ನೇ ಅಮಿತ್ ಶಾ ಟೀಕಿಸುತ್ತಿದ್ದಾರೆ. ಅಮಿತ್ ಶಾ ಅವರ ಹೇಳಿಕೆಗಳನ್ನು ಖ್ಯಾತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ಕುರಿಯನ್ ಜೋಸೆಫ್ ಮತ್ತು ಮದನ್ ಬಿ ಲೋಕೂರ್ ಸೇರಿದಂತೆ 18 ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ತೀವ್ರವಾಗಿ ವಿರೋಧಿಸಿದ್ದಾರೆ.
ಆಗಸ್ಟ್ 22 ರಂದು ಕೇರಳದಲ್ಲಿ ಮಾಡಿದ ಭಾಷಣದಲ್ಲಿ ಅಮಿತ್ ಶಾ ಹೇಳಿದ್ದು ಹೀಗೆ: “ಸುದರ್ಶನ್ ರೆಡ್ಡಿ ನಕ್ಸಲ್ ವಾದಕ್ಕೆ ಸಹಾಯ ಮಾಡಿದ ವ್ಯಕ್ತಿ. ಅವರು ಸಲ್ವಾ ಜುಡುಮ್ ತೀರ್ಪು ನೀಡಿದರು. ಸಲ್ವಾ ಜುಡುಮ್ ತೀರ್ಪು ನೀಡದಿದ್ದರೆ, 2020 ರ ವೇಳೆಗೆ ನಕ್ಸಲ್ ಭಯೋತ್ಪಾದನೆ ಕೊನೆಗೊಳ್ಳುತ್ತಿತ್ತು”. ಉಪರಾಷ್ಟ್ರಪತಿ
ಇದನ್ನೂ ಓದಿ: ನವದೆಹಲಿ | ಜವಳಿ ರಫ್ತುದಾರರನ್ನು ಬೆಂಬಲಿಸಲು ಸುಂಕ ರಹಿತ ಆಮದು ವಿಸ್ತರಿಸಿದ ಕೇಂದ್ರ
ಭಾರತೀಯ ಸಮಾಜದಲ್ಲಿ ಮಾವೋವಾದಿಗಳಂತಹ ಸಂಘಟನೆಗಳು ಏಕೆ ರೂಪುಗೊಳ್ಳುತ್ತವೆ ಎಂಬುದು ಗೃಹ ಸಚಿವರಿಗೆ ಅರ್ಥವಾಗುತ್ತಿಲ್ಲ. ಮಾತ್ರವಲ್ಲ, ಅಂತಹ ಸಂಘಟನೆಗಳನ್ನು ಎದುರಿಸಲು ಸರ್ಕಾರ ಕಾನೂನುಬಾಹಿರ ಸಂಘಟನೆಗಳನ್ನು ಹುಟ್ಟುಹಾಕುವುದರ ಅಪಾಯಗಳ ಬಗ್ಗೆಯೂ ಇವರಿಗೆ ಅರ್ಥವಾದಂತ್ತಿಲ್ಲ ಎಂಬುದು ಇವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಉಪರಾಷ್ಟ್ರಪತಿ
ಸಲ್ವಾ ಜುಡುಮ್ ಅನ್ನು ಟೀಕಿಸಿದ ಎಲ್ಲಾ ನ್ಯಾಯಾಧೀಶರು, ಅಂದರೆ ನ್ಯಾಯಮೂರ್ತಿಗಳಾದ ಕೆ.ಜಿ. ಬಾಲಕೃಷ್ಣನ್, ಪಿ. ಸದಾಶಿವಂ, ಜೆ.ಎಂ. ಬನ್ಸಾಲ್, ಅಫ್ತಾಬ್ ಅಲಂ, ನಿಜ್ಜರ್ ಈ ಎಲ್ಲರೂ ನಕ್ಸಲ್ ಬೆಂಬಲಿಗರೇ? ಗುಜರಾತ್‌ನಲ್ಲಿ ನಡೆದ ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾ. ಸದಾಶಿವಂ ಅವರು ಅಮಿತ್ ಶಾ ಅವರನ್ನು ಖುಲಾಸೆಗೊಳಿಸಿದ್ದು, ನಿವೃತ್ತಿಯ ನಂತರ ಅವರು ಕೇರಳದ ರಾಜ್ಯಪಾಲರಾಗಿ ನೇಮಕಗೊಂಡರು. ಅವರನ್ನೂ ಅಮಿತ್ ಶಾ ನಕ್ಸಲ್ ಬೆಂಬಲಿಗ ಎಂದು ಕರೆಯುತ್ತಾರೆಯೇ? ನ್ಯಾ. ಸುದರ್ಶನ್ ರೆಡ್ಡಿ ವಿರುದ್ಧ ಮಾತ್ರ ಇಂತಹ ಟೀಕೆ ಏಕೆ? ಉಪರಾಷ್ಟ್ರಪತಿ
ಸಾಲ್ವಾ ಜುಡುಮ್ ಪ್ರಕರಣವೇನು?
ಛತ್ತೀಸ್‌ಗಢದಲ್ಲಿ ಸಲ್ವಾ ಜುಡುಂ ಎಂಬುದು ಸರಕಾರವೇ ಪ್ರಾಯೋಜಿಸಿದ ಒಂದು ಸಂಘಟನೆ, ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗೆಂದು ಇದನ್ನು ಪ್ರಾಯೋಜಿಸಲಾಗಿತ್ತು. ಆದರೆ ಈ ಪ್ರಭುತ್ವ ಪ್ರಾಯೋಜಿತ ಸಂಘಟನೆ ನಾಗರಿಕರ ಹತ್ಯೆಗಳು ಸೇರಿದಂತೆ ಹಲವಾರು ಅಪರಾಧೀ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು. ಪ್ರಭುತ್ವವು ಸಲ್ವಾ ಜುಡುಮ್ ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತಿತ್ತು ಮತ್ತು ಅವರು ಗಲಭೆಗಳು ಮತ್ತು ದರೋಡೆಗಳಲ್ಲಿ ಭಾಗಿಯಾಗುತ್ತಿದ್ದರು. 2007 ರಲ್ಲಿ, ಪ್ರಾಧ್ಯಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ನಂದಿನಿ ಸುಂದರ್, ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ಮಾಜಿ ಐಎಎಸ್ ಅಧಿಕಾರಿ ಇ.ಎ. ಎಸ್. ಶರ್ಮಾ ಅವರು ಛತ್ತೀಸ್‌ಗಢದಲ್ಲಿ ಸಲ್ವಾ ಜುಡುಮ್ ಎಂಬ ಸಂಘಟನೆಯನ್ನು ನಿಷೇಧಿಸುವಂತೆ ಕೋರಿ ಸವೋಚ್ಚ ನ್ಯಾಯಾಕಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಉಪರಾಷ್ಟ್ರಪತಿ
ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾ. ತರುಣ್ ಚಟರ್ಜಿ ಮತ್ತು ನ್ಯಾ. ರವೀಂದ್ರನ್ ಅವರನ್ನೊಳಗೊಂಡ ಪೀಠವು 2007 ರಲ್ಲಿ ಸಲ್ವಾ ಜುಡುಮ್ ಪ್ರಕರಣವನ್ನು ಮೊದಲು ಆಲಿಸಿತು. ಮುಂದಿನ ವರ್ಷ, ಆಗಿನ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಮತ್ತು ನ್ಯಾ. ಅಫ್ತಾಬ್ ಅಲಂ ಇವರುಗಳು ಇದ್ದ ನ್ಯಾಯಪೀಠ ವಿಚಾರಣೆ ಮುಂದುವರೆಸಿತು.
ಉಪರಾಷ್ಟ್ರಪತಿ
ಮಾರ್ಚ್ 31, 2008 ರಂದು, ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್, ನ್ಯಾ. ಪಿ. ಸದಾಶಿವಂ ಮತ್ತು ನ್ಯಾ. ಅಫ್ತಾಬ್ ಆಲಂ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ ಪೀಠವು, ಛತ್ತೀಸ್‌ಗಢ ಸರ್ಕಾರಕ್ಕೆ 2007 ರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಸಲ್ವಾ ಜುಡುಮ್ ವರದಿಗಳನ್ನು ಜಾರಿಗೆ ತರುವಂತೆ ನಿರ್ದೇಶನ ನೀಡಿತು. “ವರದಿಯನ್ನು ಓದುವುದು ನೋವಿನ ಸಂಗತಿ. ಸಲ್ವಾ ಜುಡುಮ್ ಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ ಮತ್ತು ಅವರು ಗಲಭೆಗಳು ಮತ್ತು ದರೋಡೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಹೇಳಿದರು. “ನೀವು ಸಲ್ವಾ ಜುಡುಮ್ ನಂತಹ ಜನರಿಗೆ ಶಸ್ತ್ರಾಸ್ತ್ರಗಳನ್ನು ನೀಡಿದರೆ, ಅವರು ನಕಲಿ ಪೊಲೀಸರಾಗುತ್ತಾರೆ. ಅವರು ಮಾಡಲು ಯಾವುದೇ ಹಕ್ಕಿಲ್ಲದ ಅಪರಾಧಗಳನ್ನು ಮಾಡುತ್ತಾರೆ” ಎಂದು ನ್ಯಾಯಾಧೀಶರು ಹೇಳಿದರು. ಉಪರಾಷ್ಟ್ರಪತಿ
“ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ. ನೀವು ಕೆಲವು ಸಾರ್ವಜನಿಕರಿಗೆ ಶಸ್ತ್ರಾಸ್ತ್ರಗಳನ್ನು ನೀಡಿ ಇನ್ನೊಂದು ವರ್ಗವನ್ನು ಕೊಲ್ಲಲು ಅನುಮತಿಸಬಾರದು. ಹಾಗೆ ಮಾಡುವುದು ಸೆಕ್ಷನ್ 302 ರ ಅಡಿಯಲ್ಲಿ ಕೊಲೆಗೆ ಪ್ರಚೋದನೆಯ ಅಪರಾಧಕ್ಕೆ ಸಮಾನವಾಗಿದೆ. ಸಲ್ವಾ ಜುಡುಮ್ ಅನ್ನು ಬೆಂಬಲಿಸುವುದು ಅದರ ಕೊಲೆ ಕೃತ್ಯಗಳಲ್ಲಿ ಸಹಚರರಾಗಿರುವುದಕ್ಕೆ ಸಮಾನವಾಗಿದೆ.” ಎಂದು ಪೀಠವು ತೀವ್ರವಾಗಿ ಟೀಕಿಸಿತು. ಉಪರಾಷ್ಟ್ರಪತಿ
ಏಪ್ರಿಲ್ 15, 2008 ರಂದು, ವಿಚಾರಣಾ ಸಮಿತಿಯನ್ನು ರಚಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್‌ಎಚ್‌ಆರ್‌ಸಿ) ಸುಪ್ರೀಂ ಕೋರ್ಟ್ ಕೇಳಿಕೊಂಡಿತು. ನಂತರ, ಡಿಸೆಂಬರ್ 16, 2008 ರಂದು, ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಸಿ ಸದಾಶಿವಂ ಅವರು ಎನ್‌ಎಚ್‌ಆರ್‌ಸಿ ವರದಿಯ ಕುರಿತು ಕ್ರಮ ತೆಗೆದುಕೊಂಡ ವರದಿಯನ್ನು (ಎಟಿಆರ್) ಸಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದರು. ಉಪರಾಷ್ಟ್ರಪತಿ
2009 ರಲ್ಲಿ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್, ನ್ಯಾ. ಪಿ ಸದಾಶಿವಂ ಮತ್ತು ನ್ಯಾ. ಚೌಹಾಣ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು, ನಂತರ 2010 ರಲ್ಲಿ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್, ನ್ಯಾ. ಕಪಾಡಿಯಾ ಮತ್ತು ನ್ಯಾ. ಅಫ್ತಾಬ್ ಅಲಂ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಉಪರಾಷ್ಟ್ರಪತಿ
ಮಾರ್ಚ್ 2010 ರಲ್ಲಿ, ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಪುನರ್ವಸತಿ ಯೋಜನೆಯನ್ನು ಸಲ್ಲಿಸಲು ಮತ್ತು ಮೇಲ್ವಿಚಾರಣಾ ಸಮಿತಿಯಲ್ಲಿ ಸೇವೆ ಸಲ್ಲಿಸುವ ಜನರ ಒಪ್ಪಿಗೆಯನ್ನು ಪಡೆಯಲು ಕೇಳಿತು. ಈ ವೇಳೆಗೆ, ನ್ಯಾ. ಬಾಲಕೃಷ್ಣನ್ ನಿವೃತ್ತರಾಗಿದ್ದರು. ಉಪರಾಷ್ಟ್ರಪತಿ
“ನಕ್ಸಲ್‍ವಾದಕ್ಕೆ ಉತ್ತೇಜನ ನೀಡುವ ಪ್ರಭುತ್ವ ನೀತಿ”
2011 ರಲ್ಲಿ ನ್ಯಾ. ಬಿ. ಸುದರ್ಶನ್ ರೆಡ್ಡಿ ಮತ್ತು ನ್ಯಾ. ಎಸ್.ಎಚ್. ನಿಜ್ಜರ್ ಅವರು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದರು ಮತ್ತು ಪೀಠವು ಅದೇ ವರ್ಷದ ಜುಲೈ 5 ರಂದು ತೀರ್ಪು ನೀಡಿತು. ಪ್ರಭುತ್ವವು ತನ್ನ ಕರ್ತವ್ಯಗಳನ್ನು ತರಬೇತಿ ಪಡೆಯದ ದಳಗಳಿಗೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ, ಇದು ವಿಶೇಷ ಪೊಲೀಸ್ ಅಧಿಕಾರಿಗಳ ಬದುಕುವ ಹಕ್ಕು, ಸಮಾನತೆ ಮತ್ತು ಸಲ್ವಾ ಜುಡುಮ್ ಗೆ ಬಲಿಯಾದ ಗ್ರಾಮಸ್ಥರ ಬದುಕುವ ಹಕ್ಕನ್ನು ಒಳಗೊಂಡಂತೆ ಸಂವಿಧಾನದ 14 ಮತ್ತು 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ಹೇಳಿತು. ಇದು ನಕ್ಸಲಿಸಂಗೆ ಉತ್ತೇಜನ ನೀಡುವ ಪ್ರಭುತ್ವ ನೀತಿ ಎಂದು ಪೀಠವು ಗಮನಸೆಳೆಯಿತು.
ಈ ತೀರ್ಪಿನ ಪರಿಷ್ಕರಣೆಗೆ ಕೇಂದ್ರ ಸರಕಾರದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 2011 ರಲ್ಲಿ, ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್, ನಿಜ್ಜರ್ ಮತ್ತು ಜ್ಞಾನ ಸುಧಾ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಾರಂಭಿಸಿತು. ನ್ಯಾ. ಕಬೀರ್ ಅವರು ತೀರ್ಪನ್ನು ದೃಢಪಡಿಸಿದರು ಮತ್ತು ತೀರ್ಪು ಕೇವಲ ಛತ್ತೀಸ್‌ಗಢಕ್ಕೆ ಅನ್ವಯಿಸುವ ಮಟ್ಟಿಗೆ ಮಾತ್ರ ಪರಿಷ್ಕರಣೆಗಾಗಿ ಕೇಂದ್ರದ ಅರ್ಜಿಗೆ ಸಮ್ಮತಿಸಿದರು.
ನ್ಯಾಯಾಮೂರ್ತಿಗಳಾದ ಕಬೀರ್, ನಿಜ್ಜರ್, ಚಲಮೇಶ್ವರ್ ಮತ್ತು ಪಿನಾಕಿ ಘೋಷ್ ಅವರು ಪರಿಷ್ಕರಣಾ ಅರ್ಜಿಯನ್ನು ವಿಚಾರಣೆ ನಡೆಸಿದರು. ನ್ಯಾಯಮೂರ್ತಿಗಳಾದ ಗೊಗೊಯ್, ಕಲಿಫುಲ್ಲಾ, ಮದನ್ ಲೋಕೂರ್, ಯು.ಯು. ಲಲಿತ್, ಎಂ.ವಿ. ರಮಣ, ದೀಪಕ್ ಗುಪ್ತಾ, ಬೊಬ್ಡೆ, ಹೃಷಿಕೇಶ್ ರಾಯ್, ಎಸ್.ವಿ.ಎನ್. ಬಟ್ಟಿ, ಬಿ.ವಿ. ನಾಗರತ್ನ ಮತ್ತು ಸತೀಶ್ ಶರ್ಮಾ ಅವರು 2012 ರಿಂದ 2025 ರವರೆಗೆ ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 161 – ‘ಸು ಫ್ರಾಮ್ ಸೋ’ ಜನಪ್ರಿಯತೆ ಏನನ್ನು ಸೂಚಿಸುತ್ತದೆ?.. ಕೆ.ಫಣಿರಾಜ್ Janashakthi Media
ಮೇ 15, 2025 ರಂದು, ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಶರ್ಮಾ ಅವರು ಜುಲೈ 5, 2011 ರ ಆದೇಶವನ್ನು ಎತ್ತಿಹಿಡಿದರು, ಅರ್ಜಿಯಲ್ಲಿನ ಮನವಿಗಳನ್ನು “ಸ್ಫಟಿಕೀಕರಿಸಲಾಗಿದೆ” (crystallized) ಎಂದು ಗಮನಿಸಿದರು.
“ಛತ್ತೀಸ್‌ಗಢ ರಾಜ್ಯದಲ್ಲಿ ದಶಕಗಳಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಗಮನಿಸಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಅಗತ್ಯವಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಪುನರ್ವಸತಿಯನ್ನು ತರಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ” ಎಂದು ಮುಂದುವರೆದು ಅವರು ಹೇಳಿದರು.
“ಸಂವಿಧಾನದ 315 ನೇ ವಿಧಿಯನ್ನು ಪರಿಗಣಿಸಿ, ಛತ್ತೀಸ್‌ಗಢ ರಾಜ್ಯದ ನಿವಾಸಿಗಳು ಯಾವುದೇ ಭಾಗದಿಂದ ಹಿಂಸಾಚಾರಕ್ಕೆ ಒಳಗಾಗಿದ್ದರೂ ಅವರಿಗೆ ಶಾಂತಿ ಮತ್ತು ಪುನರ್ವಸತಿ ಕಲ್ಪಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದು ಛತ್ತೀಸ್‌ಗಢ ರಾಜ್ಯ ಮತ್ತು ಭಾರತ ಒಕ್ಕೂಟದ ಕರ್ತವ್ಯವಾಗಿದೆ ಎಂಬುದನ್ನು ನಾವು ಗಮನಿಸುತ್ತೇವೆ.” ಎಂದೂ ಪೀಠ ಹೇಳಿತು.
ಪ್ರಭುತ್ವ ಹಿಂಸಾಚಾರದ ಹೊರಗುತ್ತಿಗೆಗೆ ವಿರೋಧ
ಹಿಂದಿನ ಸುಪ್ರೀಂ ಕೋರ್ಟ್ ಪೀಠಗಳು ಹೊರಡಿಸಿದ ನಿರ್ದೇಶನಗಳು ಮತ್ತು ನ್ಯಾ. ಬಿ. ಸುದರ್ಶನ್ ರೆಡ್ಡಿ ಅವರ ತೀರ್ಪುಗಳನ್ನು ಓದಿದಾಗ, ಸಂವಿಧಾನದಲ್ಲಿ ರೂಪಿಸಲಾದ ತತ್ವಗಳನ್ನು ಹೊರತುಪಡಿಸಿ ಯಾವುದೇ ಸಿದ್ಧಾಂತದ ಬಗ್ಗೆ ಒಟ್ಟಾರೆಯಾಗಿ, ನ್ಯಾಯಾಂಗದಿಂದ ಮತ್ತು ನ್ಯಾ. ರೆಡ್ಡಿ ಅವರಿಂದ ವೈಯಕ್ತಿಕವಾಗಿ ಯಾವುದೇ ಸೈದ್ಧಾಂತಿಕ ಸಹಾನುಭೂತಿ ಇರಲಿಲ್ಲ ಎಂದು ತೋರಿಸುತ್ತದೆ.
ಈ ಪ್ರಕರಣಗಳನ್ನು ಅನುಸರಿಸಿದ ಯಾರಾದರೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಪ್ರಗತಿಪರ ಸ್ವರೂಪವನ್ನು ಮೆಚ್ಚುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ಎಲ್ಲಾ 24 ನ್ಯಾಯಾಧೀಶರು ಛತ್ತೀಸ್‌ಗಢ ಸರ್ಕಾರವು ಪ್ರಭುತ್ವ ಹಿಂಸಾಚಾರವನ್ನು ಹೊರಗುತ್ತಿಗೆ ನೀಡುವುದನ್ನು ವಿರೋಧಿಸಿದರು. ಪರಿಷ್ಕರಣೆ ಅರ್ಜಿಯ ವಿಚಾರಣೆ ನಡೆಸಿದ ಎಲ್ಲಾ ನ್ಯಾಯಾಧೀಶರು 15 ವರ್ಷಗಳ ಹಿಂದೆ ನ್ಯಾಯಮೂರ್ತಿಗಳಾದ ಸುದರ್ಶನ್ ರೆಡ್ಡಿ ಮತ್ತು ನಿಜ್ಜಾರ್ ಅವರು ನೀಡಿದ ಆದೇಶಗಳಿಗೆ ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದರು.
ನ್ಯಾ. ಸುದರ್ಶನ್ ರೆಡ್ಡಿ ಅವರು ನಕ್ಸಲೀಯರ ತತ್ವಶಾಸ್ತ್ರವನ್ನು ಒಪ್ಪಲಿಲ್ಲ ಅಥವಾ ಅವರ ಮಾರ್ಗಗಳನ್ನು ಅನುಮೋದಿಸಲಿಲ್ಲ, “ನಕ್ಸಲ್ ಭಯೋತ್ಪಾದನೆ” ಯನ್ನು ಬೆಂಬಲಿಸುವುದಂತೂ ಖಂಡಿತ ಅಲ್ಲ ಎಂಬುದು ಸ್ಪಷ್ಟ. ಆದ್ದರಿಂದ, ಅದನ್ನು ಬೇರೆ ರೀತಿಯಲ್ಲಿ
ಕಾಣುವುದು ಹಾಸ್ಯಾಸ್ಪದವಾಗುತ್ತದೆ.
ಎರಡು ರಾಜಕೀಯ ಬಣಗಳ ನಡುವೆ ಅಲ್ಲ
ನ್ಯಾ. ಸುದರ್ಶನ್ ರೆಡ್ಡಿ ಇದನ್ನು ಈ ಕೆಳಗಿನಂತೆ ವಿವರಿಸುತ್ತಾರೆ: “ನಾನು ಯಾವುದೇ ಸಿದ್ಧಾಂತವನ್ನು ಇಷ್ಟಪಡುವುದಿಲ್ಲ ಅಥವಾ ದ್ವೇಷಿಸುವುದಿಲ್ಲ. ಅದು ನನ್ನ ಕೆಲಸವಲ್ಲ. ಆದರೆ ನನಗೆ ಆರೆಸ್ಸೆಸ್ ಚಟುವಟಿಕೆಗಳೊಂದಿಗೆ ಬಲವಾದ ಭಿನ್ನಾಭಿಪ್ರಾಯಗಳಿವೆ. ಏಕೆಂದರೆ ನಾನು ಸಂವಿಧಾನವನ್ನು ಎತ್ತಿಹಿಡಿಯುವ ಪ್ರಜಾಪ್ರಭುತ್ವವಾದಿ. ಬಾಬಾಸಾಹೇಬರ ಸಹೋದರತ್ವದ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನು ನಾನು ನಂಬುತ್ತೇನೆ.”
ನಿಜ, ಅಮಿತ್ ಶಾ ಈ ಕಾರಣಕ್ಕಾಗಿಯೇ ನ್ಯಾ. ಸುದರ್ಶನ್ ರೆಡ್ಡಿಯವರನ್ನು ಟೀಕಿಸುತ್ತಾರೆ. ಇಂತಹ ಅಪಪ್ರಚಾರ ಅರ್ಥಹೀನ, ಅಪ್ರಸ್ತುತ ಮತ್ತು ಸಂವಿಧಾನ ವಿರೋಧಿ. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಮತ್ತು ನ್ಯಾಯಾಧೀಶರ ನೈತಿಕ ಸ್ಥೈರ್ಯವನ್ನು ಕುಂದಿಸುತ್ತದೆ ಉಎಂಬ ಕಟು ವಿಮರ್ಶೆ ಈ ಬಗ್ಗೆ ವ್ಯಕ್ತವಾಗಿದೆ.
ಉಪರಾಷ್ಟ್ರಪತಿ ಚುನಾವಣೆ ಎರಡು ರಾಜಕೀಯ ಬಣಗಳ ನಡುವೆ ಅಲ್ಲ. ಬದಲಾಗಿ, ಭಾರತೀಯ ಸಂವಿಧಾನವನ್ನು ರಕ್ಷಿಸುವ ಬಣ ಮತ್ತು ಅದನ್ನು ನಾಶಮಾಡಲು ಪ್ರಯತ್ನಿಸುವ ಬಣದ ನಡುವಿನ ಹೋರಾಟವಾಗಿ ಹೆಚ್ಚು ಹೆಚ್ಚು ಮುನ್ನೆಲೆಗೆ ಬಂದಿದೆ. ಎನ್.ಡಿ.ಎ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಸಿ.ಪಿ. ರಾಧಾಕೃಷ್ಣನ್ ಅವರು ಕಟ್ಟಾ ಆರೆಸ್ಸೆಸ್ ಬೆಂಬಲಿಗ. ಅವರು 16 ನೇ ವಯಸ್ಸಿನಲ್ಲಿ ಆರೆಸ್ಸೆಸ್ ಗೆ ಸೇರಿದರು ಮತ್ತು ಎರಡು ಬಾರಿ ಬಿಜೆಪಿ ಸಂಸದ ಮತ್ತು ನಂತರ ರಾಜ್ಯಪಾಲರಾಗಿ ನೇಮಕಗೊಂಡವರು. ಅವರಿಗೆ ಹೋಲಿಸಿದರೆ, ವಿರೋಧ ಪಕ್ಷಗಳಿಂದ ಕಣಕ್ಕಿಳಿಸಲ್ಪಟ್ಟ ನ್ಯಾ. ಸುದರ್ಶನ್ ರೆಡ್ಡಿ ಅವರು ಸಾಂವಿಧಾನಿಕ ಪ್ರಜಾಪ್ರಭುತ್ವವಾದಿ. ಅವರು ಹೈಕೋರ್ಟ್ ನ್ಯಾಯಾಧೀಶರು, ಮುಖ್ಯ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಸಾಂವಿಧಾನಿಕ ತೀರ್ಪುಗಳನ್ನು ನೀಡಿದ್ದಾರೆ ಮತ್ತು ಎಲ್ಲರ ಗೌರವವನ್ನು ಗಳಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ ಸಂವಿಧಾನವನ್ನು ರಕ್ಷಿಸುವ ಹೋರಾಟವಾಗಿ ವಿಕಸನಗೊಳ್ಳುತ್ತಿದೆ. ಸ್ವಾಭಾವಿಕವಾಗಿ, ಸಂವಿಧಾನವನ್ನು ನಾಶಮಾಡಿ ಅದರ ಸ್ಥಳದಲ್ಲಿ ಮನು ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವವರು ಸುದರ್ಶನ್ ರೆಡ್ಡಿಯವರ ವಿರುದ್ಧ ದ್ವೇಷವನ್ನು ಹೊರಹಾಕುತ್ತಿದ್ದಾರೆ. ಅಮಿತ್ ಶಾ ರವರ ಈ ಟೀಕೆ ಅವರ ದ್ವೇಷದ ಅಭಿವ್ಯಕ್ತಿಯಾಗಿದೆ.
ಮಾಹಿತಿ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್, ತೀಕದಿರ್
