-ರಂಜಾನ್ ದರ್ಗಾ
ಅವರಿಬ್ಬರೂ ನಿರಾಯುಧರಾಗಿ ಭೇಟಿಯಾಗಬೇಕಿತ್ತು. ಇಬ್ಬರ ಕಡೆಗೂ ಸ್ವಲ್ಪ ಸುಸಜ್ಜಿತ ಅಂಗರಕ್ಷಕರಿದ್ದರು.ಅವರಿಬ್ಬರ ಭೇಟಿಯಾದಾಗ ದೈತ್ಯಾಕಾರದ ಅಫ್ಜಲ್ ಖಾನ್, ಸಹಜ ಆಕಾರದ ಶಿವಾಜಿ ಮಹಾರಾಜರನ್ನು ಬಿಗಿದಪ್ಪಿಕೊಂಡು ಹಿಸುಕಲು ಪ್ರಾರಂಭಿಸಿದ. ಆಗ ಶಿವಾಜಿ ಮಹಾರಾಜರು ವ್ಯಾಘ್ರನಖ ಆಯುಧ ಮೂಲಕ ಅವನ ಹೊಟ್ಟೆ ಹರಿದು ಕೊಂದರು. ನಿಯಮದ ಪ್ರಕಾರ ದೂರದಲ್ಲಿ ನಿಂತಿದ್ದ ಎರಡು ಕಡೆಯ ಅಂಗರಕ್ಷಕರು ಆಗ ಓಡಿ ಬಂದರು.
ಅಫ್ಜಲ್ ಖಾನ್ ನನ್ನು ಕೊಲ್ಲಲು ಶಿವಾಜಿ ಬಳಿಸಿದ “ವ್ಯಾಘ್ರನಖ” ಎಂಬ ಗುಪ್ತ ಆಯುಧವನ್ನು ಮೋದಿ ಸರ್ಕಾರ ಇಂಗ್ಲಂಡ್ ನಿಂದ ಭಾರತಕ್ಕೆ ತರುವ ವ್ಯವಸ್ಥೆ ಮಾಡಿದೆ. ಇದರ ಹಿಂದೆ ರೋಚಕ ಸಂಗತಿಗಳಿವೆ.
ಎ) ಶಿವಾಜಿ ಮಹಾರಾಜ, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಮತ್ತು ಬುಡಕಟ್ಟು ಜನರ ಹಿತೈಷಿಗಳಾಗಿದ್ದರು. ಅವರ ಅಂಗರಕ್ಷಕರಲ್ಲಿ ಮುಸ್ಲಿಮರು ಮತ್ತು ದಲಿತರೂ ಇದ್ದರು.
ಬಿ) ಶಿವಾಜಿಯ ಮುಸ್ಲಿಂ ಅಧಿಕಾರಿಗಳಲ್ಲಿ ಕೆಲವರು:
1 ನೂರ್ ಖಾನ್ ಬೇಗ್: ಶಿವಾಜಿಯ ಒಂದೂವರೆ ಲಕ್ಷ ಸೈನ್ಯದ ಮೊದಲ ಸರನೋಬತ್. (ಸೈನ್ಯದ ಸರ್ವೋಚ್ಚ ಅಧಿಕಾರಿ)
2 ದರಿಯಾ ಸಾರಂಗ್: ಯುದ್ಧ ನೌಕಾಪಡೆಯ ಮುಖ್ಯಸ್ಥ.
3 ಇಬ್ರಾಹಿಂ ಖಾನ್: ತೋಪುಖಾನೆಯ ಮುಖ್ಯಸ್ಥ.
4 ಸಿದ್ದಿ ಇಬ್ರಾಹಿಂ: ಅನೇಕ ಮುಸ್ಲಿಂ ಅಂಗರಕ್ಷಕರಲ್ಲಿ ಒಬ್ಬ.
5 ಮದರಿ ಮೆಹತರ್: ನಂಬಿಗಸ್ತ ಸೇವಕ. ಆಗ್ರಾ ಜೈಲಿನಿಂದ ಶಿವಾಜಿ ಪಾರಾಗಲು ಸಹಾಯ ಮಾಡಿದಾತ. ಔರಂಗಜೇಬನ ಆದೇಶದ ಮೇರೆಗೆ ಆತನ ತಲೆ ಕಡಿಯಲಾಯಿತು.
6 ಕಾಜಿ ಹೈದರ್: ಶಿವಾಜಿಯ ವಕೀಲ ಮತ್ತು ಕಾನೂನು ಮಂತ್ರಿ.
7 ರುಸ್ತುಂ ಎ ಜಮಾನ್: ಶಿವಾಜಿಯ ಆಪ್ತಮಿತ್ರ. ಗುಪ್ತದಳದ ಅಧಿಕಾರಿ. ವಿಜಾಪುರದ ಗುಪ್ತ ಸಂದೇಶಗಳನ್ನು ಕಳಿಸುವಾತ. ಅಫ್ಜಲ್ ಖಾನ್ ಭೇಟಿಯ ವೇಳೆ, ಭಾರಿ ಗಾತ್ರದ ಆತ ಶಿವಾಜಿಯ ಕೊಲೆ ಮಾಡುವುದರ ಸಂಚನ್ನು ಅರಿತುಕೊಂಡ ರುಸ್ತುಂ, ವ್ಯಾಘ್ರನಖ ಆಯುಧವನ್ನು ತಯಾರಿಸಿ ಗುಪ್ತವಾಗಿ ತಂದು ಕೊಟ್ಟ. ಆ ಆಯುಧ ಅತಿ ಚಿಕ್ಕದಾಗಿದ್ದು ಬೆರಳುಗಳಲ್ಲಿ ಸಿಕ್ಕಿಸಿಕೊಂಡರೆ ಹೊರಗಡೆಯಿಂದ ಉಂಗುರಗಳಾಗಿ ಕಾಣುತ್ತಿತ್ತು. ಅಂಗೈ ಒಳಗಡೆ ಹುಲಿ ಉಗುರಿನ ಆಕಾರದ ಮತ್ತು ಅಷ್ಟೇ ಗಾತ್ರದ ಆಯುಧಗಳಿದ್ದು ಯಾರಿಗೂ ಸಂಶಯ ಬರುತ್ತಿರಲಿಲ್ಲ.
ಇದನ್ನೂ ಓದಿ:ಧಾರ್ಮಿಕ ಕಾರ್ಯಕ್ರಮದಲ್ಲಿ ಔರಂಗಜೇಬ್ ಮತ್ತು ಶಿವಾಜಿಯ ಉಲ್ಲೇಖ ಅಗತ್ಯವಿತ್ತೆ?
ಅವರಿಬ್ಬರೂ ನಿರಾಯುಧರಾಗಿ ಭೇಟಿಯಾಗಬೇಕಿತ್ತು. ಇಬ್ಬರ ಕಡೆಗೂ ಸ್ವಲ್ಪ ಸುಸಜ್ಜಿತ ಅಂಗರಕ್ಷಕರಿದ್ದರು. ಅವರಿಬ್ಬರ ಭೇಟಿಯಾದಾಗ ದೈತ್ಯಾಕಾರದ ಅಫ್ಜಲ್ ಖಾನ್, ಸಹಜ ಆಕಾರದ ಶಿವಾಜಿ ಮಹಾರಾಜರನ್ನು ಬಿಗಿದಪ್ಪಿಕೊಂಡು ಹಿಸುಕಲು ಪ್ರಾರಂಭಿಸಿದ. ಆಗ ಶಿವಾಜಿ ಮಹಾರಾಜರು ವ್ಯಾಘ್ರನಖ ಆಯುಧ ಮೂಲಕ ಅವನ ಹೊಟ್ಟೆ ಹರಿದು ಕೊಂದರು. ನಿಯಮದ ಪ್ರಕಾರ ದೂರದಲ್ಲಿ ನಿಂತಿದ್ದ ಎರಡು ಕಡೆಯ ಅಂಗರಕ್ಷಕರು ಆಗ ಓಡಿ ಬಂದರು.
ಆ ಸಂದರ್ಭದಲ್ಲಿ ಅಫ್ಜಲ್ ಖಾನನ ರಕ್ಷಣಾಧಿಕಾರಿ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಖಡ್ಗ ಬೀಸಿ ಶಿವಾಜಿಯ ಕೊಲೆ ಮಾಡಲು ಯತ್ನಿಸಿದ. ಆದರೆ ಶಿವಾಜಿಯ ಅಂಗರಕ್ಷಕ ಜೀವಾಜಿ ಆ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿಯ ರುಂಡ ಹಾರಿಸಿದ. ಶಿವಾಜಿಯನ್ನು ಬ್ರಾಹ್ಮಣ ಕೊಲ್ಲಲು ಯತ್ನಿಸಿದ. ಆದರೆ ದಲಿತ ಜೀವ ಉಳಿಸಿದ!
8 ಸಿದ್ದಿ ಹಿಲಾಲ್, ಸಿದ್ದಿ ವಾಹ್ ವಾಹ್, ಶಮಾಖಾನ್, ಸಿದ್ದಿ ಅಂಬರ್ ವಾಹಬ್, ಹುಸೇನ್ ಖಾನ್ ಮಿಯಾ, ಇಬ್ರಾಹಿಂ ಖಾನ್ ಮುಂತಾದವರು ವಿವಿಧ ಹುದ್ದೆಗಳ ಸೈನ್ಯಾಧಿಕಾರಿಗಳಾಗಿದ್ದರು. 700 ಮುಸ್ಲಿಮರು ಶಿವಾಜಿ ಸೈನ್ಯದಲ್ಲಿದ್ದರು. ಅಶ್ವದಳದ 16 ತುಕಡಿಗಳು ಮೊಘಲ್ ಸೈನ್ಯ ತೊರೆದು ಶಿವಾಜಿ ಸೈನ್ಯ ಸೇರಿದವು.
9 ಶಿವಾಜಿ ಚಿತ್ರ ಬಿಡಿಸಿದಾತ ಮೀರ ಮೊಹಮ್ಮದ್.
10 ಸೂಫಿ ಸಂತರಾದ ಯಾಕೂತ್ ಬಾಬಾ, ಮೌನಿ ಬಾಬಾ ಮತ್ತು ವಿಶಾಲಗಡದ ರೇಹಾನ್ ಮಲಿಕ್ ಅವರನ್ನು ಶಿವಾಜಿ ಮಹಾರಾಜರು ಬಹಳ ಗೌರವದಿಂದ ಕಾಣುತ್ತಿದ್ದರು.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರಿಗೆ ರುಸ್ತುಂ ಎ ಜಮಾನ್ ತಯಾರಿಸಿ ಕೊಟ್ಟ ವ್ಯಾಘ್ರನಖ ಆಯುಧ ಹಿಂದೂ ಮುಸ್ಲಿಮರ ಭಾವೈಕದ ಸಂಕೇತವಾಗಿ ದೇಶದಲ್ಲಿ ರಾರಾಜಿಸಬೇಕು. ಆದರೆ ಕೋಮುವಾದಿಗಳು ಈಗಾಗಲೇ ಅದಕ್ಕೆ ದ್ವೇಷದ ಬಣ್ಣ ಬಳಿಯಲು ಶುರು ಮಾಡಿದ್ದಾರೆ. ವ್ಯಾಘ್ರನಖ