ಬೆಂಗಳೂರು: ದೇಶ ವಿದೇಶಗಳಲ್ಲಿ ಸುದ್ದಿಯಾಗಿದ್ದ ಕುಖ್ಯಾತ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ಬಲ್ ರೇವಣ್ಣ ಮೇಲಿನ ಆರೋಪ ಸಾಬೀತಾಗಿದ್ದು, ಅವರು ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ದೋಷಿ
ಅಧಿಕಾರ, ಹಣ, ಭೂಮಿ, ಸಂಪತ್ತು ಮತ್ತು ಜಾತಿಯ ದರ್ಪಕ್ಕೆ ಎದುರಾಗಿ ನ್ಯಾಯಾಕ್ಕಾಗಿ ಒತ್ತಾಯಿಸಿದ ಎಲ್ಲ ಪ್ರಗತಿಪರ ಶಕ್ತಿಗಳಿಗೆ ಸಂದ ಜಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಭೂಸ್ವಾಧೀನ: ರೈತರೊಂದಿಗೆ ಬಿಡಿಎ ಅಧಿಕಾರಿ ಮಾತುಕತೆಯ ಸಭೆ ವಿಫಲ
ಶಿಕ್ಷೆಯ ಪ್ರಮಾಣ ಇನ್ನೂ ಪ್ರಕಟವಾಗಿಲ್ಲ. ಜನಪ್ರತಿನಿಧಿಯಾಗಿದ್ದೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಗಳಂತಹ ಹೀನ ಕೃತ್ಯ ಎಸಗಿದ್ದಲ್ಲದೇ, ಅದನ್ನು ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡಿದ ಘೋರ ಅಪರಾಧಕ್ಕಾಗಿ ಅವರಿಗೆ ಅತ್ಯುಗ್ರ ಶಿಕ್ಷೆಯೇ ಸೂಕ್ತ ಎಂದು ಸಂಘಟನೆ ಅಭಿಪ್ರಾಯಪಡುತ್ತದೆ.
ಬಲಾಢ್ಯರೆದುರು ಸೆಣಸುವ ಧೈರ್ಯ ತೋರಿದ ಸಂತ್ರಸ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಅವರಿಗೆ ಸೂಕ್ತ ರಕ್ಷಣೆ ಮತ್ತು ಜೀವನ ನಿರ್ವಹಣೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕೆಂದು ಒತ್ತಾಯಿಸುತ್ತೇವೆ. ಎಲ್ಲ ಒತ್ತಡಗಳ ಮಧ್ಯೆಯೂ ಎದೆಗುಂದದೆ ಧೈರ್ಯವಾಗಿ ಸಾಕ್ಷಿ ಹೇಳಿದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಮಹಿಳೆಯರನ್ನು ತಮ್ಮ ಬೋಗಕ್ಕೆ ಬಳಸುವ ಸರಕಾಗಿ ನೋಡುವ ಲಂಪಟರಿಗೆ ಪಾಠ ಕಲಿಸುವಂತೆ ಶಿಕ್ಷೆಯ ಪ್ರಮಾಣವಿದ್ದಾಗ ಇನ್ನೂ ಇರಬಹುದಾದ ಬಾದಿತರು ಮುಂದೆ ಬರಲು ಸಾಧ್ಯವಾಗುತ್ತದೆ. ಅಂತಹ ಒಂದು ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಆಡಳಿತ ಯಂತ್ರದ ಮೇಲಿದೆ ಎಂದು ಸಂಘಟನೆ ಹೇಳಿದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ! ಹೂತಿಟ್ಟ ಸತ್ಯ ಹೊರ ಬರಲಿ!! Janashakthi Media
