ದೆಹಲಿ | VB-GRAMG ಮಸೂದೆ ಗ್ರಾಮೀಣ ಬಡವರಿಗೆ ಕೊಡುವ ಕೆಲಸದ ಸೀಮಿತ ಉದ್ಯೋಗ ಹಕ್ಕು ನಿರಾಕರಿಸುವ ಹುನ್ನಾರ

ದೆಹಲಿ : ಕೇಂದ್ರ ಸರಕಾರದ ‘ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ ಮಸೂದೆ, 2025 (VB-GRAMG ಮಸೂದೆ) ಅನ್ನು ಪರಿಚಯಿಸುತ್ತಿರುವ ನಡೆ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯನ್ನು ಬದಲಿಸುವ ಪ್ರಯತ್ನ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತಿವ್ರವಾಗಿ ಖಂಡಿಸಿದೆ.

MNREGA ಸೀಮಿತ ಕೆಲಸದ ಹಕ್ಕನ್ನು ಒದಗಿಸುವ ಸಾರ್ವತ್ರಿಕ ಬೇಡಿಕೆ ಚಾಲಿತ ಕಾನೂನು ಆಗಿದ್ದು ಪ್ರಸ್ತಾವಿತ ಮಸೂದೆಯು ಈ ಕಾನೂನಿನ ಮೂಲ ಸ್ವರೂಪವನ್ನೇ ಸಂಪೂರ್ಣವಾಗಿ ನಿರಾಕರಿಸುತ್ತದೆ, ಬೇಡಿಕೆಗೆ ಅನುಗುಣವಾಗಿ ಹಣವನ್ನು ಹಂಚಿಕೆ ಮಾಡುವ ಕಾನೂನಾತ್ಮಕ ಜವಾಬ್ದಾರಿಯಿಂದ ಇದು ಕೇಂದ್ರ ಸರ್ಕಾರವನ್ನು ಮುಕ್ತಗೊಳಿಸುತ್ತದೆ ಎಂದು ಈ ನಡೆಯನ್ನು  ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.

ಇದನ್ನೂ ಓದಿ : ಕೊಂದವರು ಯಾರೆಂದು ಬಹಿರಂಗವಾಗಲಿ ; ಅಭಿಯಾನದ ಅಭಿಮತ Janashakthi Media

ಮಸೂದೆಯಲ್ಲಿ ಖಾತರಿಪಡಿಸುವ ಉದ್ಯೋಗವನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗುತ್ತದೆ ಎಂಬ ಸರ್ಕಾರದ ದಾವೆ ಕೇವಲ ಅಲಂಕಾರಿಕವಾಗಿದೆ. ವಾಸ್ತವದಲ್ಲಿ, ಉದ್ಯೋಗ ಚೀಟಿಗಳನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಗ್ರಾಮೀಣ ಕುಟುಂಬಗಳ ದೊಡ್ಡ ವಿಭಾಗಗಳನ್ನು ಹೊರಗಿಡಲು ಮಸೂದೆ ಬಾಗಿಲು ತೆರೆಯುತ್ತದೆ. ಕೃಷಿ ಋತುವಿನ ಗರಿಷ್ಠ ಅವಧಿಯಲ್ಲಿ 60 ದಿನಗಳವರೆಗೆ ಉದ್ಯೋಗವನ್ನು ಸ್ಥಗಿತಗೊಳಿಸಲು ಸರ್ಕಾರಗಳಿಗೆ ಅವಕಾಶ ನೀಡುವ ನಿಬಂಧನೆಯು ಗ್ರಾಮೀಣ ಕುಟುಂಬಗಳಿಗೆ ಕೆಲಸವನ್ನು ಅವರಿಗೆ ಅತೀ ಅಗತ್ಯವಾಗಿರುವ ಸಮಯದಲ್ಲಿ ನಿರಾಕರಿಸುತ್ತದೆ ಮತ್ತು ಅವರನ್ನು ಭೂಮಾಲೀಕರ ಮೇಲೆ ಅವಲಂಬಿತರನ್ನಾಗಿ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಡಿಜಿಟಲ್ ಹಾಜರಾತಿಯನ್ನು ಕಡ್ಡಾಯಗೊಳಿಸುವುದರಿಂದ ಕಾರ್ಮಿಕರಿಗೆ ಕೆಲಸದ ನಷ್ಟ ಮತ್ತು ಅವರ ಹಕ್ಕುಗಳ ನಿರಾಕರಣೆಯಂತಹ ಅಪಾರ ತೊಂದರೆಗಳು ಉಂಟಾಗುತ್ತವೆ ಎಂದು ಎಚ್ಚರಿಸಿದರು.

ಒಂದು ಪ್ರಮುಖ ಕಳವಳವೆಂದರೆ ಈ ಯೋಜನೆಗೆ ಹಣಕಾಸು ನೀಡಿಕೆಯ ವಿಧಾನದಲ್ಲಿ ಪ್ರಸ್ತಾವಿತ ಬದಲಾವಣೆ. ಈ ಮಸೂದೆಯು ವೇತನ ಪಾವತಿಗಳಿಗೆ ಕೇಂದ್ರದ ಜವಾಬ್ದಾರಿಯನ್ನು ಶೇ. 100 ರಿಂದ ಪ್ರಮುಖ ರಾಜ್ಯಗಳೊಂದಿಗೆ 60:40 ಹಂಚಿಕೆ ವ್ಯವಸ್ಥೆಗೆ ಇಳಿಸುತ್ತದೆ. ಇದು ನಿರುದ್ಯೋಗ ಭತ್ಯೆ ಮತ್ತು ವಿಳಂಬ ಪರಿಹಾರದ ವೆಚ್ಚವನ್ನು ಭರಿಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ದಾಟಿಸುತ್ತದೆ.

ಇದು ರಾಜ್ಯ ಸರ್ಕಾರಗಳ ಮೇಲೆ ತಾಳಿಕೊಳ್ಳಲು ಸಾಧ್ಯವಿಲ್ಲದ ಆರ್ಥಿಕ ಹೊರೆಯನ್ನು ಹೇರುತ್ತದೆ , ಆದರೆ ಅದೇ ವೇಳೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಯಾವುದೇ ಪಾತ್ರವನ್ನು ನಿರಾಕರಿಸುತ್ತದೆ. ಕೇಂದ್ರವು ರಾಜ್ಯವಾರು ವೆಚ್ಚದ ಮಿತಿಗಳನ್ನು ವಿಧಿಸುವ ಮತ್ತು ಹೆಚ್ಚುವರಿ ವೆಚ್ಚಗಳನ್ನು ರಾಜ್ಯಗಳು ಭರಿಸಬೇಕು ಎನ್ನುವ “ವಾಢಿಕೆಯ ಹಂಚಿಕೆ” ಯನ್ನು ಇದರಲ್ಲಿ ತಂದಿರುವುದು ಈ ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ಮೊಟಕುಗೊಳಿಸುತ್ತದೆ ಮತ್ತು ಕೇಂದ್ರದ ಹೊಣೆಗಾರಿಕೆಯನ್ನು ಇಳಿಸುತ್ತದೆ ಎಂದರು.

ಕೇಂದ್ರ ಸರ್ಕಾರವು MGNREGA ಅನ್ನು ಬಲಪಡಿಸಲು ಮತ್ತು ಸಾರ್ವತ್ರಿಕ ಮತ್ತು ಹಕ್ಕು ಆಧಾರಿತ ಉದ್ಯೋಗ ಖಾತರಿಯಾಗಿ ಅದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಲು ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ಗ್ರಾಮೀಣ ಬಡವರ ಸಂಘಟನೆಗಳೊಂದಿಗೆ ಸಮಾಲೋಚನೆಯಲ್ಲಿ ತೊಡಗಬೇಕು ಎಂದು ಅದು ಹೇಳಿದೆ.

ಯೋಜನೆಯ ಹೆಸರನ್ನು MNREGA ದಿಂದ G RAM G ಗೆ ಬದಲಾಯಿಸುವ ದುಷ್ಟ ನಡೆ ಬಿಜೆಪಿ-ಆರ್‌ಎಸ್‌ಎಸ್ ಸೈದ್ಧಾಂತಿಕ ಕೊಂಕನ್ನು ಬಿಂಬಿಸುತ್ತದೆ ಎಂದಿರು ವ ಸಿಪಿಐ(ಎಂ) ಪೊಲಿಟ್‍ಬ್ಯುರೊ,VB-GRAMG ಮಸೂದೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ ಎಂದು ತಿಳಿಸಿದರು.

ಇದನ್ನೂ ನೋಡಿ : ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media

Donate Janashakthi Media

Leave a Reply

Your email address will not be published. Required fields are marked *