ಪಾಂಡವಪುರ: ಕೇಂದ್ರ ಸರ್ಕಾರ ಮನರೇಗಾ ಬದಲಿಗೆ ವಿಕಸಿತ ಭಾರತ– ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವ ತೀರ್ಮಾನವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಇದೇ 26ರವರೆಗೆ ಚಳವಳಿ ರೂಪಿಸಲಾಗಿದೆ’ ಎಂದು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.
ಇದನ್ನೂ ಓದಿ : ಕೆಲಸದ ಒತ್ತಡ: ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ವಿಶೇಷ ಚೇತನ ಗುಮಾಸ್ತ ಆತ್ಮಹತ್ಯೆ
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ 26ರಂದು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಉಳಿಸುವಂತೆ ಒತ್ತಾಯಿಸಿ ಠರಾವು ಪಾಸ್ ಮಾಡಲಾಗುವುದು. ವಿಬಿ–ಜಿ ರಾಮ್ ಜಿ ಯೋಜನೆಯನ್ನು ರದ್ದುಪಡಿಸಿ, ಮನರೇಗಾ ಬಲಪಡಿಸುವಂತೆ ಒತ್ತಾಯಿಸಿ ಜ.8ರಂದು ನವದೆಹಲಿಯಲ್ಲಿ ನೂರಾರು ಸಂಘಟನೆಗಳು ಒಗ್ಗೂಡಿ ಚಳವಳಿ ರೂಪಿಸಲು ತೀರ್ಮಾನಿಸಿವೆ. ಜತೆಗೆ ಮನರೇಗಾ ಪ್ರಾರಂಭವಾಗಿ ಫೆ.2ಕ್ಕೆ 20 ವರ್ಷಗಳು ತುಂಬುತ್ತಿರುವುದರಿಂದ ಆ ದಿನವೂ ಎಲ್ಲಾ ಹಳ್ಳಿಗಳಲ್ಲಿ ಮನರೇಗಾ ಮಹತ್ವ ತಿಳಿಸಲಾಗುವುದು’ ಎಂದು ಹೇಳಿದರು.
‘ಮನರೇಗಾ ಯೋಜನೆ ಕುರಿತು ರಾಜ್ಯದ ಸಂಸದರು ಸಂಸತ್‌ನಲ್ಲಿ ದನಿ ಎತ್ತದೆ ಮೌನವಾಗಿರುವುದು ನಿಜಕ್ಕೂ ವಿಷಾದಕರ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹನುಮೇಶ್, ಸಂಘಟನೆಯ ಮುಖಂಡ ಎಂ.ಬೆಟ್ಟಹಳ್ಳಿ ಶಿವಕುಮಾರ್ ಹಾಜರಿದ್ದರು.
ಇದನ್ನೂ ನೋಡಿ : ನಾನಿಲ್ಲಿ ಇಳಿಯಲಾರೆ…. ಒಂದು ಕಿರುಚಿತ್ರ | ಚಂದ್ರಪ್ರಭ ಕಠಾರಿ | Janashakthi Media
