ಅರಣ್ಯ ಸಂರಕ್ಷಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ಒಪ್ಪಿಸಿದ ಉತ್ತರಾಖಂಡ ಸರಕಾರ – ‘ರಿಪೋರ್ಟರ್ಸ್‍ ಕಲೆಕ್ಟಿವ್’ ತನಿಖೆಯಲ್ಲಿ ಹೊರಬಂದ ಸಂಗತಿ

ಪ್ರಭುತ್ವ ನಡೆಸ ಬೇಕಾದ ಪೊಲೀಸ್ ಕೆಲಸ, ತೆರಿಗೆ ಸಂಗ್ರಹಣೆ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ಸರ್ಕಾರಗಳು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ನೀಡಬಹುದೇ? ಅದೂ ಇವನ್ನೆಲ್ಲ ಪರಿಸರ ವಿಪತ್ತುಗಳನ್ನು ತಡೆಗಟ್ಟಲಿಕ್ಕಾಗಿ ಎಂದು ಹೇಳ ಬಹುದೇ? ಯಾವುದೇ ವಿದ್ಯಮಾನದ ಆಳವಾದ ತನಿಖೆಗಾಗಿ ಹಿರಿಯ ವರದಿ ಗಾರರು ರಚಿಸಿ ಕೊಂಡಿರುವ ‘ರಿಪೋರ್ಟರ್ಸ್‍ ಕಲೆಕ್ಟಿವ್’ ಜುಲೈ 2ರಂದು ಪ್ರಕಟಿಸಿರುವ ತನ್ನ ವರದಿಯಲ್ಲಿ ಕೇಳಿರುವ ಪ್ರಶ್ನೆ ಇದು. ಸಂರಕ್ಷಣೆ

ನೈನಿತಾಲ್, ಡೆಹ್ರಾಡೂನ್ ಮತ್ತು ನವದೆಹಲಿಯಲ್ಲಿ ದಾಖಲೆಗಳು ಮತ್ತು ಕ್ಷೇತ್ರ ತನಿಖೆಗಳ ಆಧಾರದಲ್ಲಿ ‘ಕಲೆಕ್ಟಿವ್‍’ ಈ ಪ್ರಶ್ನೆಯನ್ನು ಕೇಳಿದೆ. ಉತ್ತರಾ ಖಂಡದ ಬಿಜೆಪಿ ಸರ್ಕಾರವು ಇದನ್ನು ಮಾಡಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ಪರವಾಗಿ ತಪಸ್ಯಾವರು ನಡೆಸಿದ ಮತ್ತು ಕಲೆಕ್ಟಿವ್‍ನ ಟ್ರಸ್ಟಿಗಳಲ್ಲಿ ಒಬ್ಬರಾದ ನಿತಿನ್‍ ಸೇಠಿ ಸಂಪಾದಿಸಿರುವ ತನಿಖೆ ತೋರಿಸುತ್ತದೆ. ಸಂರಕ್ಷಣೆ

ಉತ್ತರಾ ಖಂಡ ರಾಜ್ಯ ಸರ್ಕಾರವು ನದಿಪಾತ್ರದ ಗಣಿಗಾರರಿಂದ ರಾಯಧನ ಮತ್ತು ಇತರ ತೆರಿಗೆಗಳನ್ನು ಸಂಗ್ರಹಿಸುವ ಮತ್ತು ಅಕ್ರಮ ಗಣಿಗಾರಿಕೆಯ ವಿರುದ್ಧ ಕಾವಲು ಕಾಯುವ ಪೊಲಿಸ್ ಅಧಿಕಾರವನ್ನೂ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದೆ ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: ಹೊಸ ಆರ್ಥಿಕ ಮಾರ್ಗಕ್ಕಾಗಿ ಈ ಜನಾದೇಶ

ಉತ್ತರಾ ಖಂಡ ರಾಜ್ಯ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ, ನದಿ ತಳದ ಗಣಿಗಾರಿಕೆಯಿಂದ ತೆರಿಗೆ ಸಂಗ್ರಹಿಸುವ ಹಕ್ಕನ್ನು ಗೆದ್ದ ಯಾವುದೇ ಖಾಸಗಿ ಕಂಪನಿಗೆ ನದಿಗಳ ಗಣಿಗಾರಿಕೆಗೆ ಆದ್ಯತೆ ನೀಡಲಾಗುತ್ತದೆ, ಅದು ಇತರ ಗಣಿಗಾರರಿಂದ ತೆರಿಗೆಗಳನ್ನು ಸಂಗ್ರಹಿಸ ಬಹುದು ಮತ್ತು ರಾಜ್ಯದ ನದಿಗಳಿಂದ ಬಂಡೆಗಳು, ಮರಳು ಮತ್ತು ಜಲ್ಲಿಕಲ್ಲುಗಳನ್ನು ಅಕ್ರಮವಾಗಿ ಹೊರ ತೆಗೆಯುವುದನ್ನು ತಡೆಯುವ ಉಸ್ತುವಾರಿ ವಹಿಸಬಹುದು ಎಂಬ ನಿಬಂಧನೆಯನ್ನೂ ಮಾಡಿದೆ. ಇದು ಹಿತಾಸಕ್ತಿಗಳ ತಾಕಲಾಟಕ್ಕೆ ಅತ್ಯುತ್ತಮ ಉದಾಹರಣೆ ಎಂದು ಅನೇಕ ತಜ್ಞರು ಹೇಳುತ್ತಾರೆ ಎಂದು ಈ ವರದಿ ಹೇಳುತ್ತದೆ.

ಇಷ್ಟೇ ಅಲ್ಲ, ಇದು ಅರಣ್ಯಗಳಲ್ಲಿನ ನದಿಪಾತ್ರದ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಂಗ್ರಹವಾದ ಹಣವನ್ನು ಅರಣ್ಯ ಸಂರಕ್ಷಣೆಗಾಗಿ ಬಳಸಬೇಕು ಎಂಬ ಸುಪ್ರಿಂ ಕೋರ್ಟಿನ ಆದೇಶವನ್ನು ಕೂಡ ರಾಜ್ಯ ಸರಕಾರ ಉಲ್ಲಂಘಿಸುತ್ತಲೇ ಬಂದಿದೆ ಎಂದು ವರದಿ ಹೇಳುತ್ತದೆ. ಇದು ನದಿಪಾತ್ರದ ಗಣಿಗಾರಿಕೆ ಯಂತಹ ಅರಣ್ಯಗಳಿಗೆ ಹಾನಿಯುಂಟಾಗುತ್ತಿರುವುದನ್ನು ಸರಿದೂಗಿಸುವ ಸಾಧನವಾಗಿದೆ. ಆದರೆ ಉತ್ತರಾ ಖಂಡ ಸರಕಾರ ಇದನ್ನು ಮಾಡುತ್ತಿಲ್ಲ, ಅಲ್ಲದೆ ಇದು ಕೇಂದ್ರ ಸರಕಾರಕ್ಕೂ ತಿಳಿದಿದ್ದರೂ ಅದು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಸಾಕ್ಷ್ಯಾಧಾರಗಳು ಹೇಳುತ್ತವೆ ಎಂದು ವರದಿ ಹೇಳುತ್ತದೆ.

ಗುತ್ತಿಗೆದಾರರಿಂದ, ಗುತ್ತಿಗೆದಾರರಿಗಾಗಿ, ಗುತ್ತಿಗೆದಾರರ ಪ್ರಭುತ್ವ! 

ಚಿತ್ರ ಕೃಪೆ: ನಿತಿನ್ ಸೇಠಿ, ರಿಪೋರ್ಟರ್ಸ್ ಕಲೆಕ್ಟಿವ್
ಚಿತ್ರ ಕೃಪೆ: ನಿತಿನ್ ಸೇಠಿ, ರಿಪೋರ್ಟರ್ಸ್ ಕಲೆಕ್ಟಿವ್

ಗಣಿಗಾರರಿಗೆ ಅನುಕೂಲವಾಗುವಂತೆ ರಾಜ್ಯ ಸರಕಾರ ಹಲವು ಪರಿಸರ ನಿಯಮಗಳು ಮತ್ತು ನಿಬಂಧನೆಗಳನ್ನು ಹೇಗೆ ತಿರುಚಿದೆ, ಬಾಗಿಸಿದೆ ಮತ್ತು ತಿರುಚಿದೆ ಎಂಬುದಕ್ಕೂ ಈ ತನಿಖೆಯು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಉತ್ತರಾ ಖಂಡ ರಾಜ್ಯ ಸರಕಾರ ಇದು ಜಾರಿಗೆಗೊಳಿಸಿರುವ ಆದೇಶಗಳು ಮತ್ತು ನಿಯಮಗಳು ಅಕ್ರಮ ಗಣಿಗಾರಿಕೆಗೆ ಕಾನೂನು ರಕ್ಷಣೆಯನ್ನು ನೀಡುತ್ತವೆ. ವಿಪರ್ಯಾಸವೆಂದರೆ, ಸೂಕ್ಷ್ಮ ಪರಿಸರದ ಹಿಮಾಲಯದಲ್ಲಿ ವಿಪತ್ತುಗಳನ್ನು ತಡೆಗಟ್ಟಲು ಮತ್ತು ಆದಾಯ ಮತ್ತು ಉದ್ಯೋಗವನ್ನು ಸೃಷ್ಟಿಸಲು ಇಂತಹ ನದಿ ಗಣಿಗಾರಿಕೆ ಅಗತ್ಯ ಎಂದು ಹೇಳುವ ಮೂಲಕ ಸರಕಾರ ಈ ಕುರಿತ ಟೀಕೆಗಳನ್ನು ಸಾರಿಸಿಬಿಡಲು ಪ್ರಯತ್ನಿಸುತ್ತಿದೆ. ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಹೇಳುತ್ತದೆ.

ಈ ತನಿಖೆಗಳಲ್ಲಿ ಕಂಡು ಬಂದ ವಿಷಯಗಳ ಕುರಿತು ರಿಪೋರ್ಟರ್‍ ಕಲೆಕ್ಟಿವ್ ಉತ್ತರಾ ಖಂಡದ ಮುಖ್ಯ ಮಂತ್ರಿಗಳಿಗೂ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕುರಿತ ಕೇಂದ್ರ ಸಚಿವಾಲಯಕ್ಕೂ ಪ್ರಶ್ನಾವಳಿಗಳನ್ನು ಕಳುಹಿಸಿದೆಯಂತೆ. ಅವಕ್ಕೆ ಇನ್ನೂ ಯಾವುದೇ ಸ್ಪಂದನೆ, ಉತ್ತರ, ಪ್ರತಿಕ್ರಿಯೆ ಬಂದಿಲ್ಲ. .

ಈ ಪ್ರಶ್ನಾವಳಿಗಳನ್ನು ಕಳುಹಿಸಿದ ಕೆಲವು ದಿನಗಳ ನಂತರ, ಹಿಂದಿ ದೈನಿಕ ‘ಅಮರ್ಉಜಾಲಾ’ದಲ್ಲಿ ವರದಿಯು ಪಾರ ದರ್ಶಕತೆ ಮತ್ತು ದಾಖಲೆಯ ಆದಾಯ ಸಂಗ್ರಹಕ್ಕಾಗಿ ರಾಜ್ಯ ಸರ್ಕಾರದ ಗಣಿಗಾರಿಕೆ ನೀತಿಯನ್ನು ಶ್ಲಾಘಿಸುವ ವರದಿ ಪ್ರಕಟವಾಗಿದೆ ಎಂಬ ಸಂಗತಿಯತ್ತವೂ ಈ ವರದಿ ಗಮನ ಸೆಳೆದಿದೆ.

ಅತ್ತ, ಬಿಜೆಪಿಯ ಮಾಜಿ ರಾಜ್ಯ ಮುಖ್ಯ ಮಂತ್ರಿ ಮತ್ತು ಈಗ ಅದರ ಗುಡ್ಡಗಾಡು ಪ್ರದೇಶದಿಂದ ಚುನಾಯಿತರಾದ ಸಂಸದ ತ್ರಿವೇಂದ್ರ ಸಿಂಗ್ ರಾವತ್, ಮುಖ್ಯಮಂತ್ರಿ ಪುಷ್ಕರ ಸಿಂಗ್ ದಾಮಿ ನೇತೃತ್ವದ ಪ್ರಸ್ತುತ ರಾಜ್ಯ ಸರ್ಕಾರವು ಅವರ ಲೋಕಸಭಾ ಕ್ಷೇತ್ರವಾದ ಹರಿದ್ವಾರದಲ್ಲಿ ವಿಪರೀತ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದೂ ವರದಿಯಾಗಿದೆ. ಟೀಕಿಸಿದ್ದಾರೆ. ಅವರು ಮಾಧ್ಯಮಗಳಿಗೆ ಹೇಳಿದರು, ಇದು (ಅಕ್ರಮ ಗಣಿಗಾರಿಕೆ) “ರಾಜ್ಯದ ಬೊಕ್ಕಸಕ್ಕೆ ಭಾರಿ ಆದಾಯ ನಷ್ಟವನ್ನು ಉಂಟು ಮಾಡುತ್ತಿದೆಯಲ್ಲದೆ, ಇನ್ನೂ ಹೆಚ್ಚಿನ ಪರಿಸರ ಹಾನಿಯನ್ನುಂಟು ಮಾಡುತ್ತಿದೆ” ಎಂದು ಹೇಳುತ್ತಲೇ, ಅವರು “ನಮ್ಮ ಪ್ರಧಾನಿಯವರು ಪರಿಸರ ಪ್ರಜ್ಞೆಯುಳ್ಳವರು ಮತ್ತು ಅವರು ಪರಿಸರ ಸಂರಕ್ಷಣೆಗಾಗಿ ಬಹಳಷ್ಟು ಮಾಡಲು ಬಯಸುತ್ತಾರೆ” ಎಂದೂ ಸೇರಿಸಿದ್ದಾರೆ!

ಇದು ಸಾರ್ವಜನಿಕ ಒಳಿತಿಗಾಗಿ ಹೇಳಿದ್ದೋ ಅಥವ ಪಕ್ಷದೊಳಗೆ ತಮ್ಮ ಪ್ರತಿಸ್ಪರ್ಧಿಗಳ ಕಾಲೆಳೆಯಲು ಹೇಳಿದ್ದೋ, ಅಥವ ಇವೆರಡೂ ನಿಜ ವಿರಬಹುದೋ ಎಂದು ಹೇಳುವುದು ಕಷ್ಟ ಎಂದಿರುವ ಈ  ವರದಿಗಾರರು ಇದನ್ನು ಪರೀಕ್ಷಿಸಲು ರಾಜ್ಯದ ಹಲವೆಡೆ ಸಂಚರಿಸಿದಾಗ, ಪರಿಸರ ಮತ್ತು ಅದರ ರಕ್ಷಣೆಗಿಂತ ಹೆಚ್ಚಾಗಿ ಅನಿಯಂತ್ರಿತ ಗಣಿಗಾರಿಕೆಗೆ ಅನುಕೂಲ ಮಾಡಿ ಕೊಡುವ ಹಲವಾರು ಕ್ರಮಗಳನ್ನು ಕೈಗೊಂಡಿರುವುದು ಕಾಣಬಂದಿದೆ ಎಂದು ತಿಳಿಸಿದ್ದಾರೆ.

ವಿವರಗಳಿಗೆ ನೋಡಿ: https://www.reporters-collective.in/trc/uttarakhand-violates-sc-orders-on-river-mining

ಇದನ್ನೂ ನೋಡಿ: ಮಡಿಕೇರಿ : ಅಬ್ಬಿ ಜಲಪಾತ ವೀಕ್ಷಣೆಯ ಕಬ್ಬಿಣದ ವಾಚ್ ಟವರ್ ನಲ್ಲಿ ಬಿರುಕುJanashakthi Media

Donate Janashakthi Media

Leave a Reply

Your email address will not be published. Required fields are marked *