ಮಂಗಳೂರು : ನಗರದಲ್ಲಿ ಬಡ ಬೀದಿ ವ್ಯಾಪಾರಿಗಳ ಮೇಲೆ ನಗರಪಾಲಿಕೆ ಅಧಿಕಾರಿಗಳು ಜೆಸಿಬಿ ಬಳಕೆ ಮಾಡಿ ಕಾರ್ಯಾಚರಣೆ ಮಾಡಿರುವುದು ಅಮಾನವೀಯ ಮತ್ತು ಕಾನೂನು ಬಾಹಿರ ಕ್ರಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಇದರ ಗೌರವಧ್ಯಕ್ಷರಾದ ಬಿಕೆ ಇಮ್ತಿಯಾಝ್ ಹೇಳಿದ್ದಾರೆ.
ಇದನ್ನು ಓದಿ :-ಮೇ 26ರವರೆಗೆ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014 ಮತ್ತು ಕರ್ನಾಟಕ ಬೀದಿ ವ್ಯಾಪಾರದ ಅಧಿನಿಯಮ 2019ರಂತೆ ಬೀದಿ ವ್ಯಾಪಾರಿಗಳ ನಿಯಂತ್ರಣ ಮಾಡಲು ಜೆಸಿಬಿ ಬಳಕೆ ಮಾಡಿ ಬೀದಿ ವ್ಯಾಪಾರಿಗಳ ಸರಕುಗಳನ್ನು ಹಾನಿ ಮಾಡುವುದಾಗಲಿ, ನಾಶ ಮಾಡುವುದಕ್ಕೆ ಅವಕಾಶವಿಲ್ಲ ಆದರೆ ನಗರ ಪಾಲಿಕೆ ಅಧಿಕಾರಿಗಳು ದಬ್ಬಾಳಿಕೆ ನಡೆಸಿ ಜೆಸಿಬಿ ಧಾಳಿ ಸಂಘಟಿಸಿದ್ದಾರೆ ಜೆಸಿಬಿ ಧಾಳಿ ಮಾಡಿ ಯುಪಿ ಯೋಗಿ ಆಡಳಿತದ ಮಾದರಿಯನ್ನು ಮಂಗಳೂರಲ್ಲಿ ಶಾಸಕ ವೇದವ್ಯಾಸ್ ಕಾಮತ್ ನಿರ್ದೇಶನದಂತೆ ಪಾಲಿಕೆ ಅಧಿಕಾರಿಗಳು ಜಾರಿ ಮಾಡುತ್ತಿದ್ದಾರೆ.
ಇದನ್ನು ಓದಿ :-ಬಿಜೆಪಿಯ 18 ಶಾಸಕರ ಅಮಾನತು: ಮೇ 25ರಂದು ಸಭೆ
ವರ್ಷದ ಹಿಂದೆ ಲೇಡಿಹಿಲ್ ಈಜುಕೊಳದ ಬಳಿ ವ್ಯಾಪಾರ ನಿಷೇಧ ಹೇರಿದ್ದ ಪಾಲಿಕೆ ಅಧಿಕಾರಿಗಳು ಲೇಡಿಹಿಲ್ ಬಳಿ ರಸ್ತೆ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ವ್ಯಾಪಾರ ಮಾಡಿದರೂ ಪಾಲಿಕೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವುದು ಬಡ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲಿನ ಧಾಳಿ ಕೂಡಲೇ ಜೆಸಿಬಿ ಧಾಳಿ ನಿಲ್ಲಿಸದಿದ್ದರೆ ಹೋರಾಟ ತೀವ್ರಗೋಳಿಸುತ್ತೇವೆ ಎಂದು ಬಿಕೆ ಇಮ್ತಿಯಾಝ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.