ಬೆಂಗಳೂರು: ಶೋಷಣಾ ರಹಿತ ಸಮಾಜಕ್ಕಾಗಿ ಮಾನವೀಯ ಸಿದ್ಧಾಂತ ರೂಪುಗೊಂಡು ಪ್ರಕಟಣೆಯಾದ ದಿನ ಫೆಬ್ರವರಿ 21 ಜಾಗತಿಕ ಕೆಂಪು ಪುಸ್ತಕ ದಿನ. ಎನ್.ಕೆ. ವಸಂತರಾಜ್ ಅವರು ಬರೆದ “ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು” ಪುಸ್ತಕವನ್ನು ಕಾರವಾರದಲ್ಲಿ ಪ್ರೀತಿಪದ ಪುಸ್ತಕ ಮನೆಯಲ್ಲಿ ಬಿಡುಗಡೆ ಮಾಡಲಾಯಿತು.
ಹಿರಿಯ ಸಾಹಿತಿಗಳು ಪತ್ರಿಕಾ ಸಂಪಾದಕರೂ ಆದ ಸುಮುಖಾನಂದ ಜಲವಳ್ಳಿ, ಪ್ರೊ. ಜಯಪ್ರಕಾಶ ಶೆಟ್ಟಿ ಕುಂದಾಪುರ, ಡಾ. ಆರ್. ಜಿ. ಗುಂದಿ, ಕಸಾಪ ಜಿಲ್ಲಾ ಅಧ್ಯಕ್ಷರಾದ ಬಿ.ಎನ್. ವಾಸರೆ, ಕಸಾಪ ತಾಲೂಕು ಅಧ್ಯಕ್ಷರಾದ ರಾಮಾ ನಾಯ್ಕ, ಜಿ.ಡಿ. ಮನೋಜೆ, ಎಂ.ಎ. ಖತೀಬ್, ಮಾಧವ ನಾಯ್ಕ, ಅನಂತ ನಾಯ್ಕ, ಎನ್.ಜಿ. ನಾಯ್ಕ, ರಮೇಶ ಭಂಡಾರಿ, ಯಮುನಾ ಗಾಂವ್ಕರ್, ಶ್ಯಾಮ ಸುಂದರ, ಶಶಿಧರ ಕಾನಡೆ, ವೀರೇಶ್ ರಾಠೋಡ, ಶೇಕಪ್ಪ, ಮೀನಾ ಮಾಸ್ತಿ ಗೌಡ, ರೇಖಾ, ಸುಧಾ, ಮಲ್ಲಿಕಾರ್ಜುನ, ಯಲ್ಲಪ್ಪ ಇನ್ನೂ ಅನೇಕರು ಹಾಜರಿದ್ದರು. ಸ್ಥಳದಲ್ಲಿಯೇ ಪುಸ್ತಕ ಮಾರಾಟ ಮಾಡಿ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಜಾಗತಿಕ ಸಂಕಷ್ಟಗಳಿಗೆ ಅಮೆರಿಕದ ನೀತಿಗಳೇ ಕಾರಣ – ರಾಜೇಂದ್ರ ಉಡುಪ
ಜಾಗತಿಕವಾಗಿ ಯುದ್ಧ ಹೇರುವ, ತೈಲರಾಜಕಾರಣಕ್ಕೆ ವೆನಿಜುವೆಲಾ ಮೆಲೆ ದಾಳಿ ನಡೆಸಿ ಚುನಾಯಿತ ಸರ್ಕಾರವನ್ನೇ ಬುಡಮೇಲು ಮಾಡಿದ ಕೃತ್ಯ, ಕ್ಯೂಬಾ ಇನ್ನಿತರ ದೇಶಗಳ ಮೇಲಿನ ಆರ್ಥಿಕ ದಿಗ್ಬಂಧನ ಮತ್ತು ಭಾರತದ ಮೇಲೆ ತೆರಿಗೆ ಸಮರ, ವೀಸಾ ಸಮಸ್ಯೆ ಇತ್ಯಾದಿ ಮೂಲಕ ಭಯಾನಕ ಮನೋಸ್ಥಿತಿ ಹೇರುವ ಸಾಮ್ರಾಜ್ಯಶಾಹಿ ಅಮೇರಿಕೆಯ ವರ್ತನೆಯ ವಿರುದ್ಧವಾಗಿ ವ್ಯಾಪಕ ಹೋರಾಟ ಬೆಳೆದುಬರುತ್ತಿದೆ.

ಅಮೇರಿಕಾ ಭಾರತದ ಜೊತೆಗೆ ವ್ಯೂಹಾತ್ಮಕ ಪಾಲುದಾರನೆಂದು ಹೇಳುತ್ತಲೇ ಆಂತರಿಕ ವಿಚಾರದಲ್ಲಿಯೂ ಮೂಗುತೂರಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಪುಸ್ತಕ ಉತ್ತಮ ಅರಿವು ಮೂಡಿಸುತ್ತದೆ ಎಂದು ಯಮುನಾ ಗಾಂವ್ಕರ್ ಹೇಳಿದರು.
ಇದನ್ನೂ ನೋಡಿ: ಕೆಂಪು ಪುಸ್ತಕ ದಿನ | ದುಡಿಯುವ ಜನತೆಯ ಕೈಪಿಡಿಹಾಡಿದವರು Janashakthi Media
