ಮೆಟ್ರೋ ಸುರಂಗ ಕೊರೆದು 13 ತಿಂಗಳ ನಂತರ ಹೊರಬಂದ ಊರ್ಜಾ ಯಂತ್ರ

ಬೆಂಗಳೂರು : ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಚುರುಕು ಪಡೆದಿದ್ದು ಕಂಟೋನ್ಮೆಂಟ್​ ಶಿವಾಜಿ ನಗರ ಮಧ್ಯೆ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿರುವ ಊರ್ಜಾ ತನ್ನ ಕಾಮಗಾರಿ ಪೂರ್ಣಗೊಳಿಸಿದೆ. ಊರ್ಜಾ ಬ್ರೇಕ್​​ ಥ್ರೂ ಕಾರ್ಯವನ್ನು  ಸಿಎಂ ಬಸವರಾಜ್​ ಬೊಮ್ಮಾಯಿ ಇಂದು ವೀಕ್ಷಣೆ ಮಾಡಿದರು.

ಉರ್ಜಾ ಯಂತ್ರ ಕಂಟೋನ್ಮೆಂಟ್​ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆದಿದೆ. 855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್​ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸುರಂಗ ಮಾರ್ಗ ಕೆಲಸ ಪೂರ್ಣಗೊಳಿಸಿ ಮೊದಲ ಟಿಬಿಎಂ ಉರ್ಜಾ ಹೊರಬಂದಿದೆ.

ಚೀನಾದಿಂದ ಆಮದು ಮಾಡಲಾದ ಯಂತ್ರ ಇದಾಗಿದ್ದು, ಸುರಂಗ ಕೊರೆಯುವ ಕಾಮಗಾರಿಗಾಗಿ ಕಳೆದ ವರ್ಷ ಜುಲೈ 30ರಿಂದ ಊರ್ಜಾ ತನ್ನ ಕಾಮಗಾರಿಯನ್ನು ಆರಂಭಿಸಿತ್ತು. ಊರ್ಜಾ ಯಂತ್ರವು ಪ್ರತಿದಿನ 2.5 ಮೀ ಉದ್ದದ ಸುರಂಗವನ್ನು ಕೊರೆಯುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಈ ಸುರಂಗ ಮಾರ್ಗವು 864 ಮೀಟರ್​ ಉದ್ದವಿದೆ. ಅಲ್ಲದೇ ಇದು ಎರಡನೇ ಹಂತದ ಕಾಮಗಾರಿಯ ಮೊದಲ ಸುರಂಗ ಮಾರ್ಗವಾಗಿದೆ. ಗೊಟ್ಟಿಗೆರೆ – ನಾಗವಾರ ನಡುವೆ 13.9 ಕಿಮೀ ಸುರಂಗ ಮಾರ್ಗ, ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ನಡುವೆ 9.28 ಕಿಮೀ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ.

ಉರ್ಜಾ ತನ್ನ ಕಾಮಗಾರಿಯನ್ನು ಇಂದು ಪೂರ್ಣಗೊಳಿಸಿದೆ. ಇನ್ನೊಂದು ಯಂತ್ರ ವಿಂಧ್ಯ ಇನ್ನೂ ತನ್ನ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ಮುಂದಿನ ತಿಂಗಳು ವಿಂಧ್ಯ ಕೂಡ ತನ್ನ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಇತ್ತ ಅವನಿ ಹಾಗೂ ಲವಿ ಶಿವಾಜಿನಗರದಿಂದ ಎಂಜಿ ರಸ್ತೆ ಕಡೆಗೆ ಸುರಂಗ ನಿರ್ಮಾಣ ಮಾಡುತ್ತಿವೆ. ಆರ್​​ಟಿ 01 ವೆಲ್ಲಾ ಜಂಕ್ಷನ್​ನಿಂದ ಲ್ಯಾಂಗ್​ ಫೋರ್ಡ್​ನಲ್ಲಿ ಕಾಮಗಾರಿ ಕೈಗೊಂಡಿದೆ. ಭದ್ರಾ ಕೂಡ ತನ್ನ ಕಾಮಗಾರಿ ಆರಂಭ ಮಾಡಿದೆ.

ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಯೋಜನೆ 75 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ. 61 ನಿಲ್ದಾಣಗಳು ಇದರಲ್ಲಿ ಸೇರಿವೆ. ನಮ್ಮ ಮೆಟ್ರೋ ಯೋಜನೆಯ 1ನೇ ಹಂತದ ನೇರಳೆ ಮತ್ತು ಹಸಿರು ಮಾರ್ಗಗಳು ನಾಲ್ಕು ದಿಕ್ಕುಗಳಲ್ಲಿ ಒಟ್ಟು 34.6 ಕಿ. ಮೀ. ಉದ್ದದ ವಿಸ್ತರಣೆಯನ್ನು ಹೊಂದಿದೆ ಜೊತೆಗೆ ಎರಡು ಹೊಸ ಮಾರ್ಗಗಳನ್ನು ಹೊಂದಿದೆ. ಗೊಟ್ಟಿಗೆರೆ-ನಾಗವಾರ 21.25 ಕಿ. ಮೀ. ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ 19.15 ಕಿ. ಮೀ. ಉದ್ದದ ಹೊಸ ಮಾರ್ಗ ಈ ಯೋಜನೆಯಲ್ಲಿ ಸೇರಿದೆ.

Donate Janashakthi Media

Leave a Reply

Your email address will not be published. Required fields are marked *