ಗಂಗಾವತಿಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮಕ್ಕೆ ಸಿಪಿಐಎಂ ಆಗ್ರಹ

ಕೊಪ್ಪಳ: ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಅನುಕೂಲವಾಗುವಂತೆ ಜಿಲ್ಲೆಯ ಗಂಗಾವತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮಕ್ಕೆ ಸಿಪಿಐಎಂ ಆಗ್ರಹಿಸಿದೆ.

ಇತ್ತೀಚೆಗೆ ತಾಲೂಕಿನ ಗಂಗಾವತಿ ನಗರದಲ್ಲಿ ಮುಸ್ಲಿಂ ಸಮುದಾಯದ ಅಂಧ ವೃದ್ಧರೊಬ್ಬರನ್ನು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ದುಷ್ಕರ್ಮಿಗಳ ಗುಂಪೊಂದು ಬಲವಂತ ಮಾಡಿ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಖಂಡಿಸಿ ಇಂದು  ಸಿಪಿಐಎಂ ಕೊಪ್ಪಳ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ:ಗಂಗಾವತಿ | ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಗಡ್ಡಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್‌ ಮಾತನಾಡಿ, ಹಲ್ಲೆಗೊಳದಾವನನ್ನು ಸುಮಾರು 65 ವರ್ಷದ ಹುಸೇನ್ ಸಾಬ್ ಎಂಬವರಾಗಿದ್ದು ಹಲ್ಲೆಕೋರರು ಅವನನ್ನು ನೆಲದ ಮೇಲೆ ಬೀಳಿಸಿ ಅವನ ಗಡ್ಡಕ್ಕೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಪ್ರದೇಶದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ಕೋಮು ಗಲಭೆಗಳು ಮರುಕಳಿಸುವ ಅಪಾಯ ವ್ಯಾಪಕವಾಗುತ್ತಿವೆ. ಆದ್ದರಿಂದ ನಾವು ಒತ್ತಾಯಯಿಸುವುದೇನೆಂದರೆ ಹಲ್ಲೆಗೊಳಗಾದ ಹುಸೇನ್ ಸಾಬ್ ರವರಿಗೆ ಅಗತ್ಯ ರಕ್ಷಣೆಯನ್ನು ಹಾಗು ಸೂಕ್ತ ಚಿಕಿತ್ಸೆಯನ್ನು ಒದಗಿಸಬೇಕು. ಕೋಮುಗಲಭೆಗಳಿಗೆ ಕಾರಣರಾಗುತ್ತಿರುವ ಇಂತಹ ಪುಂಡರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗಂಗಾವತಿ ನಗರದಲ್ಲಿ ಹೆಚ್ಚುತ್ತಿರುವ ಗಲಭೆಗಳನ್ನು ತಡೆದು ನಗರದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ನೆಲೆಸುವಂತೆ ಜಿಲ್ಲಾಡಳಿತ ಕ್ರಮ ಜರಗಿಸಬೇಕೆಂದು, ಮತ್ತು ಮಾನವೀಯತೆ ದೃಷ್ಟಿಯಿಂದ ಹಲ್ಲೆಗೊಳಗಾದ ವೃದ್ದ ಹುಸೇನ್ ಸಾಬ್ ರವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ಸಿಪಿಐಎಂ ಜಿಲ್ಲಾ ಮುಖಂಡರಗಳಾದ ಹುಸೇನಪ್ಪ, ಮಂಜುನಾಥ, ಬಾಳಪ್ಪ ಹುಲಿಹೈದರ, ವಲಿಮೋಹಿದ್ದೀನ್, ರಹಿಮಸಾಬ, ರವಿ ಅಕ್ಕಿರೊಟ್ಟಿ, ಇತರರಿದ್ದರು.

ವಿಡಿಯೊ ನೋಡಿ: ‘ತಪ್ಪುಗಳನ್ನುಪ್ರಶ್ನಿಸಿದವರನ್ನು ಭಯೋತ್ಪದಕ’, ಎಂದು ಹೇಳುವ ಸರ್ಕಾರವನ್ನು ಕಿತ್ತೆಸೆಯಬೇಕು – ಕೆ.ಎನ್. ಉಮೇಶ್

Donate Janashakthi Media

Leave a Reply

Your email address will not be published. Required fields are marked *