ನವದೆಹಲಿ: ಯುಪಿಐ ಸರ್ವರ್ ಕಳೆದ ಎರಡು ವಾರಗಳ ಹಿಂದೆ ಡೌನ್ ಆಗಿತ್ತು. ಹೀಗಾಗಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಅಸಾಧ್ಯವಾಗಿತ್ತು. ಆಗ ಅನೇಕರು ಲಾಗಿಂಗ್ ಸಮಸ್ಯೆಯೂ ಎದುರಿಸಿದ್ದರು. ಈಗ ಮತ್ತೆ ದೇಶಾದ್ಯಂತ ಯುಪಿಐ ಸರ್ವರ್ ಡೌನ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನವದೆಹಲಿ
ನಮ್ಮ ಎಲ್ಲ ವಹಿವಾಟವೂ ಡಿಜಿಟಲ್ನಿಂದ ಆಗುತ್ತಿದೆ. ಇದೀಗ ಯುಪಿಐ ಸರ್ವರ್ ಡೌನ್ ಆಗಿದ್ದು, ಯುಪಿಐ ಸರಿಯಾಗಿ ವರ್ಕ್ ಆಗುತ್ತಿಲ್ಲ. ಇದರಿಂದ ಕೋಟ್ಯಂತರ ಜನರು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ದೂರುತ್ತಿದ್ದಾರೆ. ನವದೆಹಲಿ
UPI ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಸಮಸ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಕೆದಾರರು ಹಣವನ್ನು ವರ್ಗಾಯಿಸಲು ಅಥವಾ ಅವರ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ.
ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಮತದಾನಕ್ಕೆ ಒತ್ತಾಯ: ತುಳಸಿ ಗಬ್ಬಾರ್ಡ್
QR ಕೋಡ್ ಸ್ಕ್ಯಾನಿಂಗ್ ಅಥವಾ UPI-ಲಿಂಕ್ ಮಾಡಲಾದ ಫೋನ್ ಸಂಖ್ಯೆಗಳು ಅಥವಾ UPI ಐಡಿಗಳಿಗೆ ನೇರವಾಗಿ ಪಾವತಿಗಳನ್ನು ಮಾಡಲು ಪ್ರಯತ್ನಿಸುವಾಗ ದೋಷ ಎದುರಾಗಿದೆ ಎಂದು ಬಳಕೆದಾರರು ವರದಿ ಮಾಡಿದ್ದಾರೆ.
ಸೇವಾ ಸ್ಥಗಿತಗಳನ್ನು ಪತ್ತೆಹಚ್ಚುವ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್ ಪ್ರಕಾರ, UPI ಸರ್ವರ್ ಸಮಸ್ಯೆ ಬೆಳಗ್ಗೆ 11:30ರ ಸುಮಾರಿಗೆ ಪ್ರಾರಂಭವಾಯಿತು. UPI ಸಮಸ್ಯೆ ಬಗ್ಗೆ ಬಳಕೆದಾರರ ದೂರುಗಳು ರಿಯಲ್ ಟೈಂನಲ್ಲಿ ಹೆಚ್ಚುತ್ತಿವೆ. ಈ ಸಮಸ್ಯೆ ದೇಶಾದ್ಯಂತ ಹರಡಿದೆ ಎಂದು ಡೌನ್‌ಡೆಕ್ಟರ್ ಉಲ್ಲೇಖಿಸಿದೆ
ಕಳೆದ ತಿಂಗಳು ಅಂದ್ರೆ ಎರಡು ವಾರಗಳ ಹಿಂದೆ ಸಹ UPI ಸೇವೆಗಳು ಸ್ಥಗಿತಗೊಂಡಿದ್ದವು. ಇದಕ್ಕೂ ಮೊದಲು, NPCI ಎಕ್ಸ್ನಲ್ಲಿ ಸಮಸ್ಯೆಯನ್ನು ಒಪ್ಪಿಕೊಂಡಿತು ಮತ್ತು ಅದನ್ನು ಗಂಟೆಗಳಲ್ಲಿ ಸರಿಪಡಿಸಿತು.
ಇದನ್ನೂ ನೋಡಿ: ವಿದ್ಯಾರ್ಥಿಗಳು ತಿನ್ನುವ ಅನ್ನಕ್ಕೆ ವಾರ್ಡನ್ ಕನ್ನ Janashakthi Media