ಯುಪಿ: ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ರಾವಣ್ ಮೇಲೆ ಗುಂಡಿನ ದಾಳಿ

ಉತ್ತರಪ್ರದೇಶ: ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ರಾವಣ್ ಅವರ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ರಾಜ್ಯದ ಸಹರಾನ್‌ಪುರ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದಿದೆ. ಗುಂಡು ಅವರಿಗೆ ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್‌ ವರದಿ ಹೇಳಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಚಂದ್ರಶೇಖರ್ ಆಜಾದ್ ಅವರು ಕಾರಿನ ಮೇಲೆ ಎರಡು ಗುಂಡುಗಳನ್ನು ಹಾರಿಸಲಾಗಿದ್ದು, ಅದರಲ್ಲಿ ಒಂದು ಅವರ ಮೇಲೆ ಬಿದ್ದಿದೆ.  ಅವರು ಆರೋಗ್ಯವಾಗಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಸಿಎಚ್‌ಸಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಭಜರಂಗದಳ ಸಹಚರರ ಗಡಿಪಾರಿಗೆ ಒತ್ತಾಯಿಸಿ ಸಕಲೇಶಪುರದಲ್ಲಿ ಪ್ರತಿಭಟನೆ

“ನನಗೆ ಅವರ ಪರಿಚಯ ಸರಿಯಾಗಿ ಇಲ್ಲ, ಆದರೆ ನನ್ನೊಂದಿಗಿದ್ದ ಜನರು ಅವರನ್ನು ಗುರುತಿಸಿದ್ದಾರೆ. ಅವರ ಕಾರು ಸಹರಾನ್‌ಪುರದ ಕಡೆಗೆ ಹೊರಟಿದೆ. ನಾವು ಯು-ಟರ್ನ್ ತೆಗೆದುಕೊಂಡೆವು. ಘಟನೆ ಸಂಭವಿಸಿದಾಗ ನನ್ನ ಕಿರಿಯ ಸಹೋದರ ಸೇರಿದಂತೆ ನಾವು ಐವರು ಕಾರಿನಲ್ಲಿದ್ದೆವು” ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಆಜಾದ್ ತಿಳಿಸಿದ್ದಾರೆ.

ಹೋರಾಟಗಾರರ ಬೆಂಗಾವಲು ವಾಹನದ ಮೇಲೆ ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಸಹರಾನ್‌ಪುರ ಎಸ್‌ಎಸ್‌ಪಿ ಡಾ.ವಿಪಿನ್ ತಾಡಾ ತಿಳಿಸಿದ್ದಾರೆ. “ಅರ್ಧ ಗಂಟೆಯ ಹಿಂದೆ, ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ವಾಹನದ ಮೇಲೆ ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದರು. ಒಂದು ಗುಂಡು ಅವರಿಗೆ ತಗುಲಿದೆ. ಅವರು ಆರೋಗ್ಯವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸಿಎಚ್‌ಸಿಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡಿರುವ ಆಜಾದ್ ಅವರ ಛಾಯಾಚಿತ್ರಗಳನ್ನು ಅವರ ಫೇಸ್‌ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹೋರಾಟಗಾರರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಚಂದ್ರಶೇಖರ್ ಆಜಾದ್ ಅವರ ಮೇಲೆ ಸಹರಾನ್‌ಪುರದ ದಿಯೋಬಂದ್‌ನಲ್ಲಿ ನಡೆದ ಹತ್ಯೆಯು ಬಹುಜನ ಮಿಷನ್ ಆಂದೋಲನವನ್ನು ನಿಲ್ಲಿಸುವ ಹೇಯ ಕೃತ್ಯವಾಗಿದೆ!. ಆರೋಪಿಗಳ ತುರ್ತು ಬಂಧನ, ಅವರ ವಿರುದ್ಧ ಕಠಿಣ ಕ್ರಮ ಮತ್ತು ರಾಷ್ಟ್ರೀಯ ಅಧ್ಯಕ್ಷ ಭಾಯಿ ಚಂದ್ರಶೇಖರ್ ಆಜಾದ್ ಅವರಿಗೆ ಭದ್ರತೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ!” ಎಂದು ಭೀಮ್ ಆರ್ಮಿ ಹೇಳಿದೆ.

ಆಜಾದ್ ಅವರು ಸಹರಾನ್‌ಪುರದ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದಾಗ ಗುಂಡು ಹಾರಿಸಲಾಗಿದೆ. ದಾಳಿಕೋರರು ಹರಿಯಾಣದ ಲೈಸೆನ್ಸ್ ಪ್ಲೇಟ್ ಹೊಂದಿರುವ ಕಾರಿನಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *