ಯುಪಿ | ಕಾಂಗ್ರೆಸ್ ಜೊತೆಗೆ ಎಲ್ಲವೂ ಚೆನ್ನಾಗಿದೆ ಎಂದ ಅಖಿಲೇಶ್ ಯಾದವ್; ಶೀಘ್ರದಲ್ಲೆ ಮೈತ್ರಿ ಘೋಷಣೆ ಸಾಧ್ಯೆತೆ

ಲಖ್ನೋ: ಕಾಂಗ್ರೆಸ್ ಜೊತೆಗಿನ ಬಾಂಧವ್ಯ ಹಳಸಿರುವ ಬಗ್ಗೆಗಿನ ಊಹಾಪೋಹಗಳನ್ನು ತಳ್ಳಿಹಾಕಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಳ್ಳಿ ಹಾಗಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಇದೆ ಹಾಗೂ ಅದರ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ವಿವಾದವಿಲ್ಲ ಎಂದು ಬುಧವಾರ ಹೇಳಿದ್ದಾರೆ.

ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಗೈರುಹಾಜರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,”ಎಲ್ಲಾ ಚೆನ್ನಾಗಿದೆ, ಯಾವುದೇ ವಿವಾದವಿಲ್ಲ… ಮೈತ್ರಿ ಇರುತ್ತದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ತಿನಲ್ಲೂ ಅಂಗೀಕಾರಗೊಂಡ ಕನ್ನಡ ಭಾಷಾ ಮಸೂದೆ

ಈ ವಾರದ ಆರಂಭದಲ್ಲಿ, ಅಖಿಲೇಶ್ ಯಾದವ್ ಅವರು ಸೀಟು ಹಂಚಿಕೆ ಅಂತಿಮಗೊಂಡ ನಂತರವೇ ರಾಹುಲ್ ಗಾಂಧಿ ಅವರ ಯಾತ್ರೆಗೆ ಸೇರಿಕೊಳ್ಳುವುದಾಗಿ ಹೇಳಿದ್ದರು. ಉಭಯ ಪಕ್ಷಗಳ ರಾಜ್ಯ ಘಟಕಗಳು ಶೀಘ್ರದಲ್ಲೇ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮೈತ್ರಿಯನ್ನು ಔಪಚಾರಿಕವಾಗಿ ಘೋಷಿಸುವ ಸಾಧ್ಯತೆಯಿದೆ.

ತಮ್ಮ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 17ರಿಂದ 19 ಸ್ಥಾನಗಳನ್ನು ನೀಡಲು ಸಮಾಜವಾದಿ ಪಕ್ಷ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯವು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

ಇತ್ತೀಚಿನ ಏರ್ಪಾಡಿನ ಪ್ರಕಾರ, ಹತ್ರಾಸ್ ಬದಲಿಗೆ ಸೀತಾಪುರವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ 28 ಸ್ಥಾನಗಳ ಪಟ್ಟಿಯನ್ನು ಕಾಂಗ್ರೆಸ್ ಆರಂಭದಲ್ಲಿ ಸಲ್ಲಿಸಿತ್ತು. ಸಮಾಜವಾದಿ ಪಕ್ಷ ಏಕಪಕ್ಷೀಯವಾಗಿ 31 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ಆಶ್ಚರ್ಯವನ್ನುಂಟು ಮಾಡಿದ ನಂತರವೂ ಅಖಿಲೇಶ್ ಮೇಲಿನ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿ ನಡೆದರೆ ಮೈತ್ರಿಯು ರಾಜಕೀಯ ಮುನ್ನಡೆ ಸಾಧಿಸಿದಂತಾಗುತ್ತದೆ. ಯಾಕೆಂದರೆ ಈಗಾಗಲೇ ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಕ್ರಮವಾಗಿ ಬಂಗಾಳ ಮತ್ತು ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ.

ಇದನ್ನೂ ಓದಿ: ಬೆಂಗಳೂರು | ಫೆಬ್ರವರಿ 27, 28ರಂದು ನಗರದ ಕೆಲವೆಡೆ ನೀರು ಸ್ಥಗಿತ; ಪಟ್ಟಿ ಇಲ್ಲಿದೆ

ಮಂಗಳವಾರ ಸಮಾಜವಾದಿ ಪಕ್ಷವು ಐವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಹಿರಿಯ ನಾಯಕ ಶಿವಪಾಲ್ ಯಾದವ್ ಅವರನ್ನು ಬುದೌನ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಶಿವಪಾಲ್ ಯಾದವ್ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ.

ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಸುರೇಂದ್ರ ಸಿಂಗ್ ಪಟೇಲ್, ಕೈರಾನಾದಿಂದ ಇಕ್ರಾ ಹಸನ್, ಬರೇಲಿಯಿಂದ ಪ್ರವೀಣ್ ಸಿಂಗ್ ಆರಾನ್ ಮತ್ತು ಹಮೀರ್‌ಪುರದಿಂದ ಅಜೇಂದ್ರ ಸಿಂಗ್ ರಜಪೂತ್ ಅವರನ್ನು ಕಣಕ್ಕಿಳಿಸಿದೆ.

ಸೋಮವಾರ ಪಕ್ಷವು 11 ಅಭ್ಯರ್ಥಿಗಳನ್ನು ಘೋಷಿಸಿತು, ಇದರಲ್ಲಿ ಈ ಹಿಂದೆ ಭೂಗತ ದೊರೆಯಾಗಿದ್ದ ನಂತರ ರಾಜಕಾರಣಿಯಾದ ಮುಖ್ತಾರ್ ಅನ್ಸಾರಿ ಅವರ ಸಹೋದರರಾಗಿರುವ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಕೂಡಾ ಇದ್ದಾರೆ. ಅದಕ್ಕೂ ಮೊಲದು ಜನವರಿ 30 ರಂದು ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ 16 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು.

ವಿಡಿಯೊ ನೋಡಿ: ಕರ್ನಾಟಕದ 2024-25 ಬಜೆಟ್ ನ ಆಳ ಅಗಲವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *