ಎನ್. ಚಿನ್ನಸ್ವಾಮಿ ಸೋಸಲೆ
ವಾಸ್ತವದ ಮೂಲಕ ಇಂದು ಗುರುತಿಸಿಕೊಳ್ಳುತ್ತಿರುವ ಅಸ್ಪೃಶ್ಯರು ಮೂಲತಹ ಅಸ್ಪೃಶ್ಯರೇ ಅಲ್ಲ – ಆದರೆ ದೇವರು- ದೇವರು ಮಿಶ್ರಿತ ಧರ್ಮದ ಹಿನ್ನೆಲೆಯ “ಪುರಾಣ” ದ ಬಹುದೊಡ್ಡ ತಳ- ಬುಡಲ್ಲದ ಆರೋಪದ ಮೂಲಕ ಮಾತ್ರ ಇವರು ಅಸ್ಪೃಶ್ಯರಾಗಿದ್ದರೆ.
“ನೀವು ಅಸ್ಪೃಶ್ಯರು ಎಂದು ಕರೆಯುವವರಿಗೆ- ಕರಿಸಿಕೊಳ್ಳುತ್ತಿರುವವರಿಂದ ಸೂಕ್ತ ಸ್ಪಷ್ಟಣೆ”
“ಅಸ್ಪೃಶ್ಯತೆ” ಎಂಬುವುದು ಜಾತಿ ಅಲ್ಲ – ಅದೊಂದು ಆರೋಪ ಅಷ್ಟೇ. “ನಾವೇ ಸ್ಫೃಶ್ಯರು- ಶ್ರೇಷ್ಠ ಕುಲದವರು” ಎಂದು ಹೇಳಿಕೊಳ್ಳುವವರು ಈ ನೆಲ ಮೂಲ ಸಂಸ್ಕೃತಿಯನ್ನು ಒಡಲಾಳದಿಂದ ತಮ್ಮ ಹೃದಯದಲ್ಲಿ ಅದುವಿಕೊಂಡು ಶ್ರಮದ ಮೂಲಕ ದುಡಿಯುವ ಜನರ ಮೇಲೆ ಮಾಡಿರುವ ಸ್ವಾರ್ಥಪರ ಹಿನ್ನೆಲೆಯ ಬಹುದೊಡ್ಡ “ಆರೋಪ” ಅಷ್ಟೇ.
ಈ ಆರೋಪವನ್ನು ಬುದ್ಧನಿಂದ ಮೊದಲುಗೊಂಡು- ಬಸವ, ಬಸವಾದಿ ಶರಣ ಶರಣೀಯರಾದಿಯಾಗಿ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರವರೆಗೂ ಸ್ಪಷ್ಟವಾಗಿ ಸಾಕ್ಷಿ ಸಹಿತ ಆರೋಪ ಮಾಡುವವರಿಗೆ ಉತ್ತರನೀಡಿ ನಿರಾಕರಿಸಿದ್ದಾರೆ. ಇವರೆಲ್ಲರ ಚಿಂತನೆ- ಹೋರಾಟ ಹಾಗೂ ಬರವಣಿಗೆಯಿಂದ ಮೇಲಿನವರ ಆರೋಪ ಸಾಕ್ಷಿ ಸಮೇತ ಬೌದ್ಧಿಕ ಕಟಕಟೆಯಲ್ಲಿ ಚರ್ಚೆಯಾಗಿ ಸೋತು ಆರೋಪ ಮಾಡಿದವರೇ *ಆರೋಪೀಯ* ಸ್ಥಾನದಲ್ಲಿ ನಿಂತಿದ್ದಾರೆ. ಇದೋ ಸಹ ವಾಸ್ತವ.
ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ : ಏಕೀಕರಣ ಹೋರಾಟ ಮರೆಯಬಾರದು ಕಮ್ಯೂನಿಷ್ಟರ ಪಾತ್ರವನ್ನು ನೆನೆಯಬೇಕು
“ಆರೋಪ ಮಾಡಿದವರೇ ಆರೋಪಿಗಳು” ಆಗಿರುವುದರಿಂದ ನೆಲ ಮೂಲ ಸಂಸ್ಕೃತಿಯ ಬಹುಜನರು ನಾವು “ಅಸ್ಪೃಶ್ಯರು” ಎಂಬ ಆರೋಪವನ್ನು ಸಂಪೂರ್ಣವಾಗಿ ತಮ್ಮ ವಿಶಾಲವಾದ ಮನ ಹಾಗೂ ಮನೆಯಿಂದ ಕಿತ್ತೆಸೆದು ಭಾರತ- ಭಾರತೀಯ ಹಾಗೂ ಭಾರತೀಯತೆಯ ಹಿನ್ನೆಲೆಯಲ್ಲಿ ಸತ್ಪ್ರಜೆಯಾಗಿ ತಲೆಯೆತ್ತಿ ನಿಲ್ಲಬೇಕಾಗಿದೆ. ಇದನ್ನೇ ನಮ್ಮ ದೇಶದ ಶ್ರೇಷ್ಠ ಗ್ರಂಥ ಅಂಬೇಡ್ಕರ್ ಅವರು ರಚಿಸಿರುವ *ಸಂವಿಧಾನ* ಹೇಳುವುದು.
ವಾಸ್ತವದ ಮೂಲಕ ಇಂದು ಗುರುತಿಸಿಕೊಳ್ಳುತ್ತಿರುವ ಅಸ್ಪೃಶ್ಯರು ಮೂಲತಹ ಅಸ್ಪೃಶ್ಯರೇ ಅಲ್ಲ – ಆದರೆ ದೇವರು- ದೇವರು ಮಿಶ್ರಿತ ಧರ್ಮದ ಹಿನ್ನೆಲೆಯ “ಪುರಾಣದ ಬಹುದೊಡ್ಡ ತಳ- ಬುಡಲ್ಲದ ಆರೋಪದ ಮೂಲಕ ಮಾತ್ರ ಇವರು ಅಸ್ಪೃಶ್ಯರಾಗಿದ್ದರೆ.
ಈ ಹಿನ್ನೆಲೆಯಿಂದ ಪುರಾಣ ಮೂಲಕ ಆರೋಪ ಮಾಡಿದವರೇ – ವಾಸ್ತವದ ಮೂಲಕ ಆರೋಪಿಗಳಾಗಿದ್ದಾರೆ. ಸಂವಿಧಾನಾತ್ಮಕವಾಗಿ ಇದೂ ಸಹ ವಾಸ್ತವ.
ವಿಡಿಯೋ ನೋಡಿ: ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media