ರೈಲುಗಳನ್ನು ಹಳಿತಪ್ಪಿಸಿದ 2024 ರ ಕೇಂದ್ರ ಬಜೆಟ್

-ಜಿ.ಎಸ್.ಮಣಿ

ಭಾರತೀಯ ರೈಲ್ವೇ ಜಗತ್ತಿನಲ್ಲೇ ಅತ್ಯಂತ ದೊಡ್ಡ ರೈಲು ಜಾಲ. ಜಗತ್ತಿನ ಅತಿ ಜನನಿಬಿಡ ದೇಶದ ಈ ರೈಲು ಜಾಲ ದೇಶಕ್ಕೆ ಅತ್ಯಂತ ಮುಖ್ಯ ಮೂಲ ಸೌಕರ್ಯ ಕೂಡ. ಇಂತಹ ಮೂಲ ಸೌಕರ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡು ಸುರಕ್ಷೆಯ ಕಡೆಗೆ ಅತ್ಯಂತ ಹೆಚ್ಚಿನ ಗಮನ ನೀಡಿ ಬೆಳೆಸುವುದು ಯಾವುದೇ ಸರ್ಕಾರದ ಪರಮ ಕರ್ತವ್ಯ. 2024-25 ರ ಕೇಂದ್ರ ಬಜೆಟ್ ಅನ್ನು ನೋಡಿದರೆ ಈಗಿನ ಮೋದಿ ಸರ್ಕಾರಕ್ಕೆ ಅಂತಹ ಕಾಳಜಿಗಳಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗಿಬಿಡುತ್ತದೆ. ಕಾರ್ಯ ಸಾಮರ್ಥ್ಯದ ಸುಧಾರಣೆ ಮತ್ತು ಆರ್ಥಿಕಕ್ಕೆ ಅದು ನೀಡಬಹುದಾದ ನಿಜ ಮೌಲ್ಯಗಳ ಕಡೆಗೆ ಈ ಸರ್ಕಾರದ ಗಮನವಿಲ್ಲ ಎಂಬುದು ಬಜೆಟ್ಟಿನಲ್ಲಿ ಡಾಣಾಡಂಗುರವಾಗಿದೆ. ಭಾರತದಲ್ಲಿ ರೈಲ್ವೇ ಸಲುವಾಗಿಯೇ ಒಂದು ಪ್ರತ್ಯೇಕ ಬಜೆಟ್ಟನ್ನು ಮಂಡಿಸುವ ಪರಿಪಾಠ ಮೊದಲಿನಿಂದಲೂ ಇತ್ತು. ರೈಲುಗಳನ್ನು

ಮೋದಿ ಸರ್ಕಾರ ಬಂದ ಮೇಲೆ ಇದನ್ನು ಬದಲಾಯಿಸಿ ರೈಲು ಬಜೆಟ್ಟನ್ನು ಸಾಮಾನ್ಯ ಬಜೆಟ್ಟಿನ ಜೊತೆಗೆ/ಒಳಗೇ ಮಂಡಿಸುವ ಪರಿಪಾಠವನ್ನು ಜಾರಿಗೆ ತಂದಿತು. ಹೀಗೆ ಮಾಡುವ ಜೊತೆಗೇ ಅದಕ್ಕಿರುವ ಮಹತ್ವವನ್ನು ಕಡಿಮೆ ಮಾಡಿ ತನಗೆ ಬೇಕಾದಂತೆ ರೈಲ್ವೇ ನಡೆಸಲು ಅನುವು ಮಾಡಿಕೊಂಡಿತು. ಹೀಗಿರುವಾಗ, ಸಾಮಾನ್ಯ ಬಜೆಟ್ಟಿನಲ್ಲೇ ದೊಡ್ಡ ಹೂಡಿಕೆಯ ಮಾತುಗಳಿಲ್ಲ. ಇನ್ನು ರೈಲ್ವೇ ಯಲ್ಲಿ ಹೂಡಿಕೆಯ ಮಾತು ಹೇಗೆ ಬಂದೀತು? ಹಾಗೆ ನೋಡಿದರೆ ಮೋದಿ ಸರ್ಕಾರದ ಹಿಂದಿನ ಆರ್ಥಿಕ ಸಲಹೆಗಾರರೊಬ್ಬರು ಹೇಳಿದಂತೆ ರೈಲ್ವೇ ಯಲ್ಲಿ ಮಾಡಿದ ಹೂಡಿಕೆ ಒಂದಕ್ಕೆ ಐದು ಪಟ್ಟು ಬೆಳೆಯಬಲ್ಲ ಸಾಮರ್ಥ್ಯ ಹೊಂದಿದೆ. ಕೇಳುವವರಾರು? ಮೋದಿ ಸರ್ಕಾರಕ್ಕೆ ಬೇರೆ ಕಾರ್ಯಸೂಚಿಗಳಿವೆ! ರೈಲುಗಳನ್ನು

ಐಷಾರಾಮಿ ಆದ್ಯತೆ

ವಂದೇ ಭಾರತ್, ಬುಲ್ಲೆಟ್ ಟ್ರೈನ್ ನಂತಹ ರೈಲುಗಳನ್ನು ತಂದು ಐಷಾರಾಮಿ ಪ್ರಿಯರಿಗೆ ಅನುಕೂಲ ಮಾಡಿಕೊಟ್ಟು ಜನಸಾಮಾನ್ಯರು ಮತ್ತು ದೇಶದ ದುಡಿವ ಜನ ಪರದಾಡುವ ಸ್ಥಿತಿ ತಂದಿಟ್ಟು ಮೋಜು ನೋಡುವ ಕಾರ್ಯಸೂಚಿ ಅದರದ್ದು. ಇತ್ತೀಚಿನ ದಿನಗಳಲ್ಲಿ ಹಲವಾರು ರೈಲು ಅಪಘಾತಗಳನ್ನು ಕಂಡಿರುವ ದೇಶದಲ್ಲಿ ಜನರ ಸುರಕ್ಷೆ ಮೊದಲ ಆದ್ಯತೆಯಾಗಬೇಕಾಗಿತ್ತು. ಅಂತಹ ಆದ್ಯತೆ ಕಾಣುತ್ತಿಲ್ಲ. ರೈಲು ಸುರಕ್ಷತೆಯ ಆಯುಕ್ತರು ಅಪಘಾತಗಳ ಭೀಕರತೆಯ ಹಿನ್ನೆಲೆಯಲ್ಲಿ ಸುರಕ್ಷೆಯ ಕಡೆಗೆ ಹೆಚ್ಚಿನ ಗಮನ ಅಗತ್ಯ ಎಂದು ವರದಿ ನೀಡಿಯಾಗಿದೆ. ಸರ್ಕಾರದ ಗಮನ ಮಾತ್ರ ಹರಿದಂತೆ ಕಾಣುವುದಿಲ್ಲ. ರೈಲುಗಳನ್ನು

ಇದನ್ನೂ ಓದಿ: ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ; ಉಪವಾಸ ಹೋರಾಟ ಅಂತ್ಯ

ಒಟ್ಟಾರೆ ಬಜೆಟ್ಟಿನಲ್ಲಿ ದೊಡ್ಡದೇ ಅನ್ನಿಸುವಂತಹ ಮೊತ್ತವಾದ 11,11,111 ಕೋಟಿ ರೂಪಾಯಿಗಳನ್ನು 2024-25 ರ ಸಾಲಿಗೆ ತೆಗೆದಿರಿಸಲಾಗಿದೆ. ಇದರ ಆದ್ಯತೆ ಏನು ಎಂಬುದು ಸ್ಪಷ್ಟವಿಲ್ಲ. ಹಿಂದಿನ ಅನುಭವದ ಮೇಲೆ ನೋಡುವುದಾದರೆ, ಬಜೆಟ್ ನಲ್ಲಿ ಭಾರೀ ಮೊತ್ತ ಘೋಷಿತವಾಗಿ ಪ್ರಚಾರ ಪಡೆಯುತ್ತದೆ. ಪರಿಷ್ಕೃತನಿಜವಾದ ಅನುದಾನ (ಕಡಿತವಾಗಿ) ಮತ್ತು ನಿಜವಾದ ಖರ್ಚು ಇನ್ನೂ ಕಡಿಮೆಯಾಗಿರುತ್ತದೆ. ನಿಜವೇನೆಂದರೆ ಬಜೆಟ್ಟಿನಲ್ಲಿ ಒಂದು ಮೊತ್ತವನ್ನು ಘೋಷಿಸಿದ ಮೇಲೆ ಅದೇ ಮೌಲ್ಯದ ಕೆಲಸಗಳು ಆಗಬೇಕೆಂದಾದರೆ ಬೆಲೆ ಏರಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ತಪ್ಪಿದರೆ ಬೆಲೆ ಏರಿಕೆ ಈ ಕೆಲಸಗಳ ಮೌಲ್ಯವನ್ನು (ಅಂದರೆ ಒಟ್ಟು ಕೆಲಸವನ್ನು) ಕಡಿಮೆ ಮಾಡಿಬಿಡುತ್ತದೆ. ತಾತ್ಪರ್ಯವೇನೆಂದರೆ ಪರಿಷ್ಕೃತ ಅಂದಾಜಿನಲ್ಲಿ ಮೊತ್ತ ಹೆಚ್ಚಳವಾಗಬೇಕು. ಅದು ಆಗುತ್ತಿಲ್ಲ ಎಂಬುದು ಹಿಂದಿನ ಬಜೆಟ್ಟುಗಳನ್ನು ನೋಡಿದರೆ ಅನುಭವವಾಗುತ್ತದೆ.

ಕಣ್ಣು ಕಟ್ಟು

ಮೋದಿ ಸರ್ಕಾರದ ಇನ್ನೊಂದು ಕಣ್ಣು ಕಟ್ಟುವ ರೀತಿ ಕೆಳಗಿನದು. ಸರ್ಕಾರ ಹೂಡಿಕೆ ಮಾಡುವ ಬದಲು ರೈಲು ಹಣಕಾಸು ನಿಗಮದಿಂದ ಹೂಡಿಕೆ ಮಾಡಿಸುವುದು. ಈ ನಿಗಮ ರೈಲ್ವೇ ಯ ಆಸ್ತಿಗಳನ್ನು ಗುತ್ತಿಗೆ ನೀಡಿ ಸಂಪನ್ಮೂಲ ಕ್ರೋಡೀಕರಿಸುವುದು.ಇಂತಹ ಸರ್ಕಸ್ಸುಗಳ ಸಂಕೋಲೆಯಲ್ಲಿ ಕೆಲಸವಾದರೆ ಆಯಿತು. ಇಲ್ಲದಿದ್ದರೆ ಇಲ್ಲ. ಆದ ಕೆಲಸವೂ ಅಪೂರ್ಣ/ ಕಳಪೆ ಏನೂ ಆಗಬಹುದು. ಆಸ್ತಿ ಗುತ್ತಿಗೆ ಪಡೆದ ಖಾಸಗಿಯವರು ಲಾಭದ ಕೊಳ್ಳೆ ಹೊಡೆಯುವುದು ಮಾಮೂಲು.

ಕೋವಿಡ್ ಮಹಾಸಾಂಕ್ರಾಮಿಕ ಬಂದ ಸಮಯದಲ್ಲಿ ರೈಲ್ವೇ ತನ್ನ ಕಾರ್ಯಾಚರಣೆಯಲ್ಲಿ ಅಪಾರ ಕಡಿತ ಅನುಭವಿಸಿತು. ಆಸ್ತಿಗಳ ಸವಕಳಿಯಂತೂ ಇದ್ದೇ ಇರುತ್ತದೆ. ಆದ್ದರಿಂದಲೇ ಬಂಡವಾಳ ವೆಚ್ಚಕ್ಕಾಗಿ ದೊಡ್ಡ ಮೊತ್ತವನ್ನು ತೆಗೆದಿರಿಸುವ ಅವಶ್ಯಕತೆ ಇದ್ದೇ ಇತ್ತು. 2023-24 ರಲ್ಲಿ ದೊಡ್ಡ ಮೊತ್ತವನ್ನೇ ತೆಗೆದಿರಿಸಿದ ಸರ್ಕಾರ ತಾನು ಹಲವು ವರ್ಷಗಳು ‘ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್’ ಮತ್ತು ನಂತರದಲ್ಲಿ ‘ರಾಷ್ಟ್ರೀಯ ರೈಲು ಯೋಜನೆ’ ಗಳಂತಹ ಜೂಜಾಟಗಳಲ್ಲಿ ತೊಡಗಿ ರೈಲ್ವೇ ಯನ್ನು ಬಡವಾಗಿಸಿತು. ಅದನ್ನು ಈಗಲಾದರೂ ತುಂಬುವ ಕೆಲಸವನ್ನು ಮಾಡಬೇಕಿತ್ತು. ಅಂತಹ ಕಾಳಜಿಗಳು ಈ ಸರ್ಕಾರಕ್ಕಿಲ್ಲ.

ಜಾಲಸಾಮರ್ಥ್ಯದ ಬಿಕ್ಕಟ್ಟುಗಳು

ಭಾರತೀಯ ರೈಲಿನಲ್ಲಿ ದೊಡ್ಡ ಕೊರತೆ ಕಾಣುತ್ತಿರುವುದು ಪಥಗಳ ಸಾಮರ್ಥ್ಯದಲ್ಲಿ. ಕೆಲವು ಪ್ರಮುಖ ಪಥಗಳಲ್ಲಿ ಹಳಿಗಳು ತಮ್ಮ ಸಾಮರ್ಥ್ಯಕ್ಕಿಂತ ಶೇ 140-150 ಹೆಚ್ಚು ಭಾರವನ್ನು ನಿಭಾಯಿಸುತ್ತಿವೆ. ವ್ಯವಸ್ಥೆಯಲ್ಲಿನ ಅಪಾಯಗಳನ್ನು ವಿವಿಧ ರೀತಿಗಳಲ್ಲಿ ಮುಚ್ಛಿಟ್ಟು ರೈಲುಗಳನ್ನು ಓಡಿಸಲಾಗುತ್ತಿದೆ. ಇದು ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಎಂದು ಭುಗಿಲೇಳುವ ಬೆಂಕಿಯೊ ಹೇಳಲಾಗದು. ಇಂತಹ ಅಪಾಯ ವ್ಯವಸ್ಥೆಯ ಅಡಿಯಲ್ಲಿ ಹಾಸುಹೊಕ್ಕಾಗಿ ಅಡಗಿ ಕುಳಿತಿದೆ. ರೈಲು ಇಲಾಖೆಯ ನಿಯಮಗಳು ಮತ್ತು ಕೈಪಿಡಿಗಳಲ್ಲಿ ಇವೆಲ್ಲವುಗಳ ಗುಣಮಟ್ಟ ಮತ್ತು ನಿರ್ವಹಣೆಯ ಮಾನದಂಡಗಳನ್ನು ಸ್ಪಷ್ಟವಾಗಿಯೇ ನಮೂದಿಸಲಾಗಿದೆ.

ರೈಲು ಸಂರಕ್ಷಣಾ ಕೋಶ ಎಂಬುದು ರೈಲ್ವೇ ಯಲ್ಲಿ ಇದೆ. ಈ ಕೋಶಕ್ಕೆ ಅನುದಾನ ಅವಶ್ಯ ಪ್ರಮಾಣದಲ್ಲಿ ಬಂದರೆ ಅದು ಅವಶ್ಯ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತದೆ. ಕೊರತೆಯೇ ಅನುದಾನವಾದರೆ ಕೆಲಸ ಸೊರಗುತ್ತದೆ. ಇದು ರೈಲ್ವೇ ಯ ವಾಸ್ತವ. ಇದೇ ರೀತಿ ರೈಲು ಸುರಕ್ಷೆಗೆ ಕವಚ್ ಎಂಬ ತಂತ್ರಜ್ಞಾನದ ಮಾತನ್ನು ಆಡಲಾಗುತ್ತದೆ. ಕವಚ್ ಯೋಜನೆ ಅನುಷ್ಟಾನಗಳಿಸಲು ಬೇಕಾದ ಹಣಕಾಸನ್ನುಅವಶ್ಯ ಪ್ರಮಾಣದಲ್ಲಿ ತೆಗೆದಿರಿಸಲಾಗಿಲ್ಲ. ಈ ನಡುವೆ ಬಾಲೇಶ್ವರ್ ಮತ್ತು ಜಲಪೈಗುರಿಯಂತಹ ಸ್ಥಳಗಳಲ್ಲಿ ದೊಡ್ಡ ರೈಲ್ವೇ ಅವಘಡಗಳು ಆಗಿ ಸಾವಿರಾರು ಜನ ಪ್ರಾಣ ಕಳೆದುಕೊಂಡು ಆಗಿದೆ. ಇಂಥ ಅವಘಡಗಳು ಆದಾಗ ಸಿಬ್ಬಂದಿಗಳನ್ನು ಹಳಿಯುವ ಪ್ರಯತ್ನಗಳೂ ಸರ್ಕಾರದಲ್ಲಿನ ಜವಾಬ್ದಾರಸ್ಥರಿಂದ ಆಗಿದೆ. ರೈಲು ಸುರಕ್ಷಾ ಆಯುಕ್ತರು ನಿಜವೇನು ಎಂದು ಎತ್ತಿ ತೋರಿಸಿಯೂ ಆಗಿದೆ. ಮೋದಿ ಸರ್ಕಾರಕ್ಕೆ ದೇಶದ ಜನರ ಬಗೆಗೆ ನಿಜವಾದ ಜವಾಬ್ದಾರಿ ಇದೆಯೇ ಎಂಬ ಪ್ರಶ್ನೆಯೇ ದೊಡ್ಡದಾಗಿ ಏಳುತ್ತದೆ.

ದೊಡ್ಡ ಖಯಾಲಿ ಸುರಕ್ಷೆ ಬಲಿ

ಕೋಷ್ಟಕ: ಬಂಡವಾಳ ವೆಚ್ಚ (ಕೋಟಿ ರೂಪಾಯಿಗಳಲ್ಲಿ)

#ಬ ಅ-ಬಜೆಟ್ ಅಂದಾಜು , ಪ ಅ- ಪರಿಷ್ಕೃತ ಅಂದಾಜು

ದೊಡ್ಡ ಖಯಾಲಿಯ ಯೋಜನೆಗಳಿಗೆ ಆದ್ಯತೆ ನೀಡಿರುವುದು ಈ ಸಮಸ್ಯೆಗಳನ್ನು ಇನ್ನೂ ದಟ್ಟಗೊಳಿಸಿವೆ. ವಂದೇ ಭಾರತ್ ರೈಲುಗಳು ಮತ್ತು ಕೆಲವು ಆಯ್ದ ಪ್ರಮುಖ ನಿಲ್ದಾಣಗಳ ಸೌಂದರ್ಯೀಕರಣ ಈ ಖಯಾಲಿಗಳು. ವಂದೇ ಭಾರತ್ ರೈಲುಗಳು ಒಟ್ಟಾರೆ ರೈಲುಗಳ ಆದ್ಯತೆಗಳನ್ನೇ ಹಾಳುಗೆಡವುತ್ತವೆ. ಯಾಕೆದರೆ ಈ ಅತೀ ವೇಗದ ರೈಲುಗಳು ಕಡಿಮೆ ವೇಗದ ರೈಲುಗಳನ್ನು (ಸರಕು ರೈಲು ಮತ್ತು ಪ್ಯಾಸ್ಸೆಂಜರ್ ರೈಲುಗಳನ್ನು) ತಡೆಹಿಡಿದು ಮುಂದಕ್ಕೆ ಹೋಗುತ್ತವೆ. ಸರಕು ರೈಲುಗಳು ರೈಲ್ವೆ ಗೆ ಅಪಾರ ಆದಾಯ ತಂದುಕೊಡುತ್ತವಾದರೂ, ಅವುಗಳಿಗೆ ಇಂತಹ ಕಡಿಮೆ ಆದ್ಯತೆ. ಪ್ಯಾಸೆಂಜರ್ ರೈಲುಗಳ ವೇಗ ಗಂಟೆಗೆ 50 ಕಿ ಮೀ ಆದರೆ ಸರಕು ರೈಲುಗಳ ವೇಗ ಗಂಟೆಗೆ 25 ಕಿ ಮೀ ಗಳು.

ಇದನ್ನೂ ನೋಡಿ: ಮೋದಿ 3.O ಸರ್ಕಾರದ ಬಜೆಟ್ ನ ಆಳ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *