ಕೇಂದ್ರ ಬಜೆಟ್ : ಮಧ್ಯಮ ವರ್ಗಕ್ಕೆ ನಿರಾಸೆ -ಟ್ವಿಟ್ಟರ್​ನಲ್ಲಿ ತುಂಬಾ ಮೀಮ್​ಗಳು

ನವದೆಹಲಿ : 2022-23ನೇ ಸಾಲಿನ ಕೇಂದ್ರ ಬಜೆಟ್​​ನಲ್ಲಿ ಮಧ್ಯಮ ವರ್ಗದ ಜನರ ನಿರೀಕ್ಷೆ ಹುಸಿಯಾಗಿದೆ.

ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗಬಹುದೆಂಬ ಕನಸು ಕಂಡಿದ್ದರು. ಆದರೆ, ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಆಗದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಮೀಮ್​​ಗಳು ಹರಿದಾಡ್ತಿವೆ.

ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಬಜೆಟ್ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತರಹೇವಾರಿ ಮೀಮ್ಸ್ ಮಾಡಿದ್ದು, ಬಿಜೆಟ್​​ನಲ್ಲಿ ಜನಸಾಮಾನ್ಯರ ಕಡಗಣನೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಈ ಬಜೆಟ್ ಶ್ರೀಮಂತರು, ಕೈಗಾರಿಕೆಗಳು ಮತ್ತು ಬಡವರಿಗೆ ಒಳ್ಳೆಯದು ಆದರೆ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ’ ಎಂದು ರವಿ ಎನ್ನುವರು ಅಭಿಪ್ರಾಯಪಟ್ಟಿದ್ದಾರೆ.

Koo App

This budget is good for riches, Industries and poor people but nothing for middle class people.

– Ravie (@ravi0466) 1 Feb 2022

ಇದನ್ನೂ ಓದಿ : ಕೇಂದ್ರ ಬಜೆಟ್ 2022 ರ ಮುಖ್ಯಾಂಶಗಳು

2014ರ ಬಳಿಕ ಮಂಡನೆಯಾಗಿರುವ ಬಜೆಟ್​​ಗಳಲ್ಲಿ ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಕೋವಿಡ್​ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಈ ಸಲದ ಬಜೆಟ್​ನಲ್ಲಿ ಗಿಫ್ಟ್​ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ನಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಇದೀಗ ಮೀಮ್ಸ್​​​ಗಳು ಸದ್ದು ಮಾಡುತ್ತಿವೆ.

ಇದನ್ನೂ ಓದಿ : ನಿರ್ಮಲಾ ಲೆಕ್ಕವೇನು? ಯಾವುದೆಲ್ಲ ಅಗ್ಗ! ಯಾವುದೆಲ್ಲ ತುಟ್ಟಿ?

ಈ ವರ್ಷದ ಪೇಪರ್‌ಲೆಸ್ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು 5G ತರಂಗಾಂತರದ ಹರಾಜು, ನಲ್ ಸೇ ಜಲ್ ಯೋಜನೆಗೆ ಹಣ ಹಂಚಿಕೆ ಮತ್ತು ಡಿಜಿಟಲ್ ಪೇಮೆಂಟ, ಡಿಜಿಟಲ್ ರೂಪಾಯಿ ಇನ್ನೂ ಅನೇಕ ಪ್ರಮುಖ ಅಂಶಗಳನ್ನು ಘೋಷಿಸಿದ್ದಾರೆ. ಆದರೂ ನೆಟ್ಟಿಗರು ತೆರಿಗೆ ವಿನಾಯಿತಿ ಮತ್ತು ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದರು.

ಈ ಹಿಂದೆ ಹಣಕಾಸು ಸಚಿವರಾಗಿದ್ದ ಅರುಣ್​ ಜೇಟ್ಲಿ ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಿದ್ದರು. ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಿದ್ದರು.

ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಆದ್ರೆ 2014ರ ಬಳಿಕ ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Donate Janashakthi Media

Leave a Reply

Your email address will not be published. Required fields are marked *